ವಿವಾದಕ್ಕೀಡಾದ ಹ್ಯುಂಡೈ ಬ್ರೆಜಿಲ್ ಫುಟ್ಬಾಲ್ ವೀಡಿಯೋ

Posted By:

ಇದೀಗಷ್ಟೇ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ವಾಹನ ತಯಾರಕ ಸಂಸ್ಥೆಯು ನೂತನ ಬ್ರೆಜಿಲ್ ಫುಟ್ಬಾಲ್ ಜಾಹೀರಾತುವೊಂದನ್ನು ಬಿಡುಗಡೆಗೊಳಿಸಿತ್ತು. ಪ್ರಸ್ತುತ ವೀಡಿಯೋ ವಿವಾದಕ್ಕೀಡಾಗುತ್ತಿದೆ.

ಹ್ಯುಂಡೈ ತನ್ನ ನೂತನ ಜಾಹೀರಾತಿನಲ್ಲಿ ಬ್ರೆಜಿಲ್ ಆರನೇ ಬಾರಿ ಫುಟ್ಬಾಲ್ ತಂಡ ವಿಶ್ವಕಪ್ ಗೆಲ್ಲಲಿದೆ ಎಂಬುದನ್ನು ಬಿಂಬಿಸುತ್ತಿದೆ. ಹ್ಯುಂಡೈ ತನ್ನ ರೇಂಜ್ ಕಾರುಗಳಿಗೆ ನೀಡುತ್ತಿರುವ ಆರು ವರ್ಷಗಳ ವಾರಂಟಿಯನ್ನು ನಿರೂಪಿಸಲು ಇಂತಹದೊಂದು ವಿನೂತನ ವೀಡಿಯೋ ತಯಾರಿಸಲಾಗಿತ್ತು. ಆದರೆ ಪ್ರಸ್ತುತ ವೀಡಿಯೋ ಬ್ರೆಜಿಲ್ ಫುಟ್ಬಾಲ್ ಫೇಡರೇಷನ್ ಮಾರ್ಗದರ್ಶನಗಳನ್ನು ಉಲ್ಲಂಘಿಸಿರುವ ಹಿನ್ನಲೆಯಲ್ಲಿ ತತ್‌ಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.

To Follow DriveSpark On Facebook, Click The Like Button
Hyundai Brazil Football Video

ನೈಜವಾಗಿಯೂ ಫೋರ್ಚುಗೀಸ್ ಭಾಷೆಯಲ್ಲಿ ವೀಡಿಯೋ ರಚಿಸಲಾಗಿದ್ದರೂ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಆಂಗ್ಲ ಭಾಷೆಯಲ್ಲೂ ಮಾಹಿತಿ ಕೊಡಲಾಗಿದೆ. ಅಂದ ಹಾಗೆ ಈ ಬಾರಿಯೂ ಬ್ರೆಜಿಲ್ ವಿಶ್ವಕಪ್ ಗೆದ್ದಲ್ಲಿ ಆರನೇ ಬಾರಿ ಇಂತಹದೊಂದು ಸಾಧನೆ ಮಾಡಿದ ಕೀರ್ತಿಗೆ ಪಾತ್ರವಾಗಲಿದೆ. ಇದರಂತೆ ಸಾಮಾನ್ಯವಾಗಿ ಐದು ವರ್ಷಗಿಂತ ಬದಲಾಗಿ ಆರು ವರ್ಷಗಳ ವಾರಂಟಿ ನೀಡಲು ಹ್ಯುಂಡೈ ಮುಂದಾಗಿದೆ.

Hyundai Brazil Football Video

ಈ ಬಗ್ಗೆ ಪ್ರತ್ರಿಕ್ರಿಯಿಸಿರುವ ಹ್ಯುಂಡೈ, ಆರು ವರ್ಷಗಳಿಗೆ ವಾರಂಟಿ ವಿಸ್ತರಿಸಿರುವುದು ತನ್ನ ವಾಹನಗಳ ಮೇಲಿನ ನಂಬಿಕೆಯನ್ನು ಸಾಬೀತುಪಡಿಸುತ್ತದೆ. ಹಣಕಾಸು ಹಿನ್ನಡೆಯ ನಡುವೆಯೂ ಕಾರನ್ನು ಮಾರಾಟ ಮಾಡಲು ಇದೊಂದು ಉತ್ತಮ ಉಪಾಯವಾಗಿದೆ ಎಂದಿದೆ.

<center><iframe width="100%" height="450" src="//www.youtube.com/embed/kdi8ay9Lld8?list=UUnBYf03jmMPiABvbSYbxMcA" frameborder="0" allowfullscreen></iframe>)</center>

English summary
Hyundai has launched a new Ad-campaign in Brazil, which states that if Brazil football team wins the World Title for a sixth time. The Korean company would award its Brazilian customers with additional warranty on 6 years on their respective cars
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark