ಹ್ಯುಂಡೈ ಎಲೈಟ್ ಐ20 ಬಿಡುಗಡೆಗೆ ಕ್ಷಣಗಣನೆ

By Nagaraja

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಹಾಗೂ ಅತಿದೊಡ್ಡ ರಫ್ತು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಇಂದು (ಆಗಸ್ಟ್ 11, ಸೋಮವಾರ) ದೇಶದ ಮಾರುಕಟ್ಟೆಗೆ ಅತಿ ನೂತನ ಹ್ಯುಂಡೈ ಎಲೈಟ್ ಐ20 ಕಾರನ್ನು ಬಿಡುಗಡೆ ಮಾಡಲಿದೆ.

ಇದು ಇದು ಇದೀಗ ಮಾರುಕಟ್ಟೆಯಲ್ಲಿರುವ ಐ20 ಮಾದರಿಗೆ ಬದಲಿ ಕಾರಾಗಿರಲಿದೆ. ಹಾಗಿದ್ದರೂ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿರುವ ಐ20 ಮಾರಾಟ ಕಳೆಗುಂದುವ ಸಾಧ್ಯತೆಯಿದೆ.


ಬುಕ್ಕಿಂಗ್
ಏತನ್ಮಧ್ಯೆ ಡೀಲರುಗಳನ್ನು ತಲುಪಿರುವ ಹ್ಯುಂಡೈ ಎಲೈಟ್ ಐ20 ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ವೆರಿಯಂಟ್...
ನಿರೀಕ್ಷೆಯಂತೆಯೇ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಹ್ಯುಂಡೈ ಎಲೈಟ್ ಐ20 ಆಗಮನವಾಗಲಿದೆ.

ಎಂಜಿನ್...
ಇದರ 1.4 ಲೀಟರ್ ಡೀಸೆಲ್ ಎಂಜಿನ್ 88.7 ಅಶ್ವಶಕ್ತಿ (220 ಎನ್‍‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಆದರೆ ನೀವಿಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಿಸ್ ಮಾಡಿಕೊಳ್ಳಲಿದ್ದು, ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಮಾತ್ರ ಇರಲಿದೆ.

ಅದೇ ರೀತಿ ಇದರ 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ 82 ಅಶ್ವಶಕ್ತಿ (114 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರ ಇನ್ನೊಂದು 1.4 ಲೀಟರ್ ಪೆಟ್ರೋಲ್ ಎಂಜಿನ್ 98 ಅಶ್ವಶಕ್ತಿ (136 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆರಡು ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಾಗಲಿದೆ.

Hyundai Elite i20

ಪ್ರತಿಸ್ಪರ್ಧಿ...
ನಿರೀಕ್ಷೆಯಂತೆಯೇ ಹ್ಯುಂಡೈ ಎಲೈಟ್ ಐ20, ಮಾರುಕಟ್ಟೆಯಲ್ಲಿರುವ ಫೋಕ್ಸ್‌ವ್ಯಾಗನ್ ಪೊಲೊ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಫಿಯೆಟ್ ಪುಂಟೊ ಇವೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಅಲ್ಲದೆ ಇನ್ನಷ್ಟೇ ಬಿಡುಗಡೆಯಾಗಲಿರುವ ಹೋಂಡಾ ಜಾಝ್ ಮಾದರಿಗೂ ಪೈಪೋಟಿ ಒಡ್ಡುವ ಸಾಧ್ಯತೆಯಿದೆ.

ವೈಶಿಷ್ಟ್ಯ...
ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್, ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್ ಹಾಗೆಯೇ ಹಿಂದುಗಡೆ ಎಸಿ ವೆಂಟ್ಸ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಅದೇ ರೀತಿ ಬಂಪರ್ ಪರಿಷ್ಕೃತಗೊಳಿಸಲಾಗಿದ್ದು, ಹೆಚ್ಚು ಬೂಟ್ ಸ್ಪೇಟ್ ಸಹ ಪಡೆದುಕೊಳ್ಳಲಿದೆ. ಹಾಗೆಯೇ ಹಿಂದುಗಡೆ ಇನ್ನಷ್ಟು ಮೊನಾಚಾದ ಲ್ಯಾಂಪ್ ನೀಡಲಾಗಿದೆ. ಇದು ಹೊಸ ಕಾರಿಗೆ ತೀಕ್ಷ್ಣವಾದ ಲುಕ್ ಪ್ರದಾನ ಮಾಡಲಿದೆ.

ಶಾರೂಕ್ ಖಾನ್ ಪ್ರಚಾರ ರಾಯಭಾರಿ
ನೂತನ ಹ್ಯುಂಡೈ ಎಲೈಟ್ ಐ20 ಕಾರಿಗೆ ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ಪ್ರಚಾರ ರಾಯಭಾರಿ ಆಗಿರಲಿದ್ದಾರೆ. ಈ ನಡುವೆ ಕಾರಿನ ದರ ಬಿಡುಗಡೆ ವೇಳೆಯಷ್ಟೇ ತಿಳಿದು ಬರಲಿದೆ.

More from DriveSpark

Article Published On: Monday, August 11, 2014, 9:49 [IST]
English summary
Hyundai India will be launching its Elite i20 on 11th of August, 2014. The new hatchback from the South Korean manufacturer will replace the previous generation i20 in India. The Elite i20 has reached most dealers and bookings have commenced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+