ಹ್ಯುಂಡೈ ಇಯಾನ್ 1.0 ಲೀಟರ್ ಎಂಜಿನ್ ಅಧಿಕೃತ ಪ್ರವೇಶ

By Nagaraja

ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಸಂಸ್ಥೆಯು, ಇಯಾನ್ 1.0 ಲೀಟರ್ ಕಪ್ಪ (kappa) ಎಂಜಿನ್ ವೆರಿಯಂಟ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ.

ಈ ಮೊದಲೇ ತಿಳಿಸಿರುವಂತೆಯೇ ಹ್ಯುಂಡೈ ಇಯಾನ್ ಇದುವರೆಗೆ 0.8 ಲೀಟರ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಾಗುತ್ತಿತ್ತು. ಇದೀಗ ಹೊಸತಾದ 1.0 ಲೀಟರ್ ಎಂಜಿನ್ ಸೇರ್ಪಡೆಯಾಗಿದೆ. ಹಾಗಿದ್ದರೂ 0.8 ಲೀಟರ್ ಎಂಜಿನ್ ಐಚ್ಛಿಕವಾಗಿ ಲಭ್ಯವಾಗಲಿದೆ.

Hyundai Eon

ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ದಟ್ಸನ್ ಗೊ ಸ್ಪರ್ಧೆಯನ್ನು ಎದುರಿಸಲು ಹ್ಯುಂಡೈ ಇಯಾನ್‌ಗೆ, ನೂತನ ಎಂಜಿನ್ ಪರಿಚಯ ಮಾಡಲಾಗಿದೆ. ಮ್ಯಾಗ್ನಾ ಪ್ಲಸ್ ವೆರಿಯಂಟ್‌ನಲ್ಲಿ ಲಭ್ಯವಾಗಲಿರುವ ನೂತನ ಇಯಾನ್ 1.0 ಲೀಟರ್ ಎಂಜಿನ್ ದೆಹಲಿ ಎಕ್ಸ್ ಶೋ ರೂಂ ದರ 3.83 ಲಕ್ಷ ರು.ಗಳಾಗಿರಲಿದೆ.

ಉತ್ತಮ ನಿರ್ವಹಣೆ ಜತೆಗೆ ಒಳ್ಳೆಯ ನಿರ್ವಹಣೆ ನೀಡಲು 1.0 ಲೀಟರ್ ಕಪ್ಪ ಎಂಜಿನ್‌ಗೆ ಸಾಧ್ಯವಾಗಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಂದ ಹಾಗೆ ಹ್ಯುಂಡೈನ 1.0 ಲೀಟರ್ ಕಪ್ಪ ಎಂಜಿನ್ ಎಂಬುದು 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಗಿರಲಿದ್ದು, 69 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಲಭ್ಯವಿರಲಿದೆ. ಇದು ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 20.3 ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

Article Published On: Wednesday, May 7, 2014, 12:56 [IST]
English summary
Hyundai Motor India Limited has officially launched their 1.0-litre Kappa Engine for the Eon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+