ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

Written By:

ನಿರೀಕ್ಷೆಯಂತೆಯೇ ಹ್ಯುಂಡೈ ಕಾರುಗಳು ದುಬಾರಿಯಾಗಿದೆ. ನಾವು ಈ ಮೊದಲೇ ತಿಳಿಸಿರುವಂತೆಯೇ ಹೊಸ ವರ್ಷದಿಂದ ತನ್ನೆಲ್ಲ ಮಾದರಿಗಳಿಗೆ ಬೆಲೆ ಏರಿಕೆಗೊಳಿಸಲು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಸಂಸ್ಥೆ ನಿರ್ಧರಿಸಿದೆ.

ಮಾರುತಿ ಕಾರುಗಳ ಬಳಿಕ ದೇಶದ ಪ್ರಯಾಣಿಕ ಕಾರು ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಂಡಿರುವ ಹ್ಯುಂಡೈ ದೇಶದ ಅಗ್ರಮಾನ್ಯ ರಫ್ತುದಾರ ಕೂಡಾ ಹೌದು. ಆದರೆ 2015 ಜನವರಿ ತಿಂಗಳಿನಲ್ಲಿ ಅನ್ವಯವಾಗುವಂತೆ ತನ್ನೆಲ್ಲ ಮಾದರಿಗಳಿಗೆ 5,000 ರು.ಗಳಿಂದ 25,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

hyundai

ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯುಂಡೈ ಸೇಲ್ಸ್ ಆಂಡ್ ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ, ನಿರ್ಮಾಣ ವೆಚ್ಚ ಹೆಚ್ಚಾಗಿರುವುದು, ಡಾಲರ್ ಎದುರಿಗೆ ರುಪಾಯಿ ಮೌಲ್ಯ ಕುಸಿತದಿಂದಾಗಿ ಉಂಟಾಗಿರುವ ಆಮದು ವೆಚ್ಚ ಹೆಚ್ಚಳ ಮತ್ತು ಅಧಿಕ ಮಾರಾಟ ವೆಚ್ಚದಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದಿದ್ದಾರೆ.

ಮಹೀಂದ್ರ ಸಂಸ್ಥೆಯು ಈಗಾಗಲೇ ದರ ಏರಿಕೆ ನೀತಿ ಪ್ರಕಟಿಸಿದ್ದು, ದೇಶದ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಹಾಗೂ ಟೊಯೊಟಾ ಮತ್ತು ಹೋಂಡಾ ಸಂಸ್ಥೆಗಳು ಇದನ್ನೇ ಅನುಸರಿಸುವ ಸಾಧ್ಯತೆಯಿದೆ.

ಇಂದಿನ ವ್ಯವಹಾರ: ಆಟೋಮೊಬೈಲ್ ಆಕ್ಸೆಸರಿಯಲ್ಲಿ ಶೇ.65ರಷ್ಟು ರಿಯಾಯಿತಿ ತ್ವರೆ ಮಾಡಿ

English summary
Hyundai Motor India Ltd. (HMIL), the country's largest passenger car exporter and second largest car manufacturer announced that it will be increasing the prices across all its models in the month of Jan 2015.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark