2015 ಹ್ಯುಂಡೈ ಸೊನಾಟಾ ಅನಾವರಣ
ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹ್ಯುಂಡೈ, ಎಲ್ಲ ಹೊಸತನದಿಂದ ಕೂಡಿದ ನೂತನ ಸೊನಾಟಾ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದರಂತೆ ನೂತನ 2015 ಸೊನಾಟಾ ಮಾದರಿಯನ್ನು ಅನಾವರಣಗೊಳಿಸಲಾಗಿದೆ.
2015 ಹ್ಯುಂಡೈ ಸೊನಾಟದಲ್ಲಿ ಹಿಂದಿನ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ ಹೆಡ್ ಲೈಟ್ ಹಾಗೂ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ. ನೂತನ ಸೊನಾಟಾ ಕಾರಿನಲ್ಲಿ 1.6 ಲೀಟರ್ ಫೋರ್ ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಹೊಂದಿರಲಿದೆ. ಇದು ಹ್ಯುಂಡೈ ವೆಲೊಸ್ಟರ್‌ನಲ್ಲಿ ಆಳವಡಿಸಿರುವುದಕ್ಕೆ ಸಮಾನವಾಗಿದೆ.

ಸದ್ಯ ಯಾವುದೇ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಲಾಗಿಲ್ಲ. ಬದಲಾಗಿ ಎಕ್ಸ್‌ಟೀರಿಯರ್ ಹಾಗೂ ಇಂಟಿರಿಯರ್ ಭಾಗಗಳ ಟೀಸರ್ ಇಮೇಜ್ ಬಿಡುಗಡೆ ಮಾಡಲಾಗಿದೆ.
ಎಪ್ರಿಲ್‌ನಲ್ಲಿ ನಡೆಯಲಿರು ನ್ಯೂಯಾರ್ಕ್ ಮೋಟಾರ್ ಶೋದಲ್ಲಿ ಅನಾವರಣಗೊಳ್ಳಲು ಸಾಧ್ಯತೆಯಿರುವ ಹ್ಯುಂಡೈ ಸೊನಾಟಾ ವರ್ಷಾಂತ್ಯದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.



Click it and Unblock the Notifications








