ಮುಂಬೈನಲ್ಲಿ ದೇಶದ ಚೊಚ್ಚಲ ಮೊನೊರೈಲು ಸೇವೆ
ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಅಧೀನತೆಯಲ್ಲಿರುವ ದೇಶದ ಪ್ರಪ್ರಥಮ ಮೊನೊರೈಲು ಸಂಚಾರ 2014 ಫೆಬ್ರವರಿ 1 ಶನಿವಾರಂದು ಸಂಚಾರ ಆರಂಭಿಸಲಿದೆ.
ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ
ಯೋಜನೆಯ ಮೊದಲನೆಯ ಹಂತವಾಗಿ ಚೆಂಬೂರ್‌ನಿಂದ ವಾಡಾಲಾ ವರೆಗೆ ಪಯಣ ಆರಂಭಿಸಲಿದೆ. ಎರಡನೇ ಹಂತದಲ್ಲಿ ದಕ್ಷಿಣ ಮುಂಬೈನ ಸಂತ್ ಗಾಡ್ಜ್ ಮಹಾರಾಜ್ ಚೌಕ್ ವರೆಗೂ ವಿಸ್ತರಿಸಲಾಗುವುದು.

ಮುಂಬೈನಲ್ಲೂ ವಿಶ್ವದರ್ಜೆಯ ಸಾರಿಗೆ ವ್ಯವಸ್ಥೆ ಒದಗಿಸುವುದರ ಭಾಗವಾಗಿ ಈ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದು ಹೆಚ್ಚು ಪರಿಸರ ಸ್ನೇಹಿ ಕೂಡಾ ಆಗಿರಲಿದೆ.

ಈ ಮಹತ್ತರ ಯೋಜನೆಯನ್ನು ಲಾರ್ಸೆನ್ ಆಂಡ್ ಟುಬ್ರೊ (ಎಲ್ ಆಂಡ್ ಟಿ) ಮತ್ತು ಮಲೇಷ್ಯಾ ಮೂಲಸೌಕರ್ಯ ಸಂಸ್ಥೆ ಸ್ಕಾಮಿ ಎಂಜಿನಿಯರಿಂಗ್ ಕೈಗೆತ್ತಿಕೊಂಡಿತ್ತು. ಇದು ದೇಶದ ಚೊಚ್ಚಲ ಮೊನೊರೈಲು ಸೇವೆಯಾಿಗದೆ.

ನಿಮ್ಮ ಮಾಹಿತಿಗಾಗಿ ಮುಂಬೈ ಮೊನೊರೈಲು ಕಾಮಗಾರಿ 2009ನೇ ಇಸವಿಯ ಜನವರಿಯಲ್ಲಿ ಆರಂಭವಾಗಿತ್ತು. ಇದೀಗ ಐದು ವರ್ಷಗಳ ನಿರಂತರ ಕಾಮಗಾರಿ ಹಾಗೂ ಪರೀಕ್ಷಾರ್ಥ ಚಾಲನೆಗಳ ಬಳಿಕ ಫೆಬ್ರವರಿ 1ರಂದು ಲೋಕಾಪರ್ಣೆಯಾಗಲಿದೆ.

ನಾಲ್ಕು ಕೋಚ್‌ಗಳನ್ನು ಹೊಂದಿರುವ ಮೊನೊರೈಲು ದೈನಂದಿನ ಪಯಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಹಾಗೆಯೇ ಪ್ರತಿ 15 ನಿಮಿಷಗಳಲ್ಲಿ 2,300ರಷ್ಟು ಪ್ರಯಾಣಿಕರನ್ನು ಸಾಗಿಸಲಿದೆ.

8.9 ಕೀ.ಮೀ. ದೂರದ ವರೆಗೂ ಹರಡಿರುವ ಈ ವಾಡಾಲಾ-ಚೆಂಬೂರ್ ಯೋಜನೆಯ ಒಟ್ಟು ವೆಚ್ಚ 3000 ಕೋಟಿ ರು.ಗಳಾಗಿವೆ. ಈ ಪೈಕಿ 1900 ಕೋಟಿ ರು.ಗಳನ್ನು ಈಗಾಗಲೇ ವ್ಯಯಿಸಲಾಗಿದೆ.

ಯೋಜನೆಯ ಮೊದಲ ಹಂತವಾಗಿ ಆರು ರೈಲುಗಳು ಓಡಾಟ ನಡೆಸಲಿದೆ. ಹಾಗೆಯೇ ಪ್ರಯಾಣಿಕರಿಗೆ 5ರಿಂದ 11ರು. ನಿರ್ಧರಿಸಲಾಗಿದೆ. ಇದು ದಕ್ಷಿಣ-ಪೂರ್ವ ಉಪನಗರಗಳನ್ನು ಬಂಧಿಸಲಿದೆ.

ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲು ಸೇವೆ ಇರಲಿದೆ. ಇದರಿಂದ ವಾಡಾಲಾದಿಂದ ಚೆಂಬೂರ್ ವರೆಗಿನ ಪಯಣದಲ್ಲಿ ಅರ್ಧ ತಾಸಿನಷ್ಟು ಸಮಯ ಉಳಿತಾಯ ಮಾಡಬಹುದಾಗಿದೆ.

ಅಂದ ಹಾಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮೊನೊ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.


Click it and Unblock the Notifications








