ಎರಡಂಕಿಗೆ ಬೆಳೆಯಲಿರುವ ಭಾರತದ ಕಾರು, ಬೈಕ್ ಮಾರುಕಟ್ಟೆ

By Nagaraja

ಭಾರತದ ಪ್ರಯಾಣಿಕ ಕಾರು ಹಾಗೂ ದ್ವಿಚಕ್ರ ವಾಹನ ಮಾರುಕಟ್ಟೆಗೆ ಎರಡಂಕಿಗೆ ಬಂದು ತಲುಪಲಿದೆ ಎಂದು ಜರ್ಮನಿಯ ಮ್ಯೂನಿಚ್ ತಳಹದಿಯ ಜಾಗತಿಕ ಸಲಹಾ ರೋಲ್ಯಂಡ್ ಬರ್ಗರ್ ಸ್ಟ್ರಾಟಜಿ ಕನ್ಸಲ್ಟಂಟ್ ವರದಿಯು ತಿಳಿಸಿದೆ.

ಇದೀಗಿನ ವರದಿಯ ಪ್ರಕಾರ ದೇಶದ ವಾಹನ ಮಾರುಕಟ್ಟೆ ಶೇಕಡಾ 12ರಷ್ಟು ಸಂಯುಕ್ತ ವಾರ್ಷಿಕ ವೃದ್ಧಿ ದರ (ಸಿಎಜಿಆರ್) ಗಳಿಸಲಿದೆ ಎಂದು ತಿಳಿಸಿದೆ. ಅಂದರೆ 2020 ವೇಳೆಯಾಗುವಾಗ ಐದು ದಶಲಕ್ಷ ಯುನಿಟ್‌ಗಳಿಗೆ ಬಂದು ತಲುಪಲಿದೆ.

 Car Market

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆ ಸಹ ಇದಕ್ಕೆ ಸಮಾನವಾದ ವೃದ್ಧಿ ದ ದಾಖಲಿಸಲಿದ್ದು 29.5 ಯುನಿಟ್‌ಗಳಿಗೆ ಬಂದು ತಲುಪಲಿದೆ. ಅದೇ ಹೊತ್ತಿಗೆ ವಾಣಿಜ್ಯ ವಾಹನ ವಿಭಾಗವು ಶೇಕಡಾ 7ರಷ್ಟು ವೃದ್ಧಿ ಸಾಧಿಸಿ 1.1 ಮಿಲಿಯನ್ ಯುನಿಟ್‌ಗೆ ತಲುಪಲಿದೆ.

ಈಗಿನ ವೃದ್ಧಿ ದರ ಪ್ರಕಾರ ಮುಂದಿನ 10 ವರ್ಷಗಳಲ್ಲಿ ಆಟೋ ಘಟಕ ವಯಲವು 100 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಲಿದೆ.

ರೋಲ್ಯಂಡ್ ಬರ್ಗರ್ ವರದಿ ಪ್ರಕಾರ, ಮೈಕ್ರೋ ಕಾರುಗಳು ಶೇ. 29, ಮಿನಿ ಕಾರುಗಳು ಶೇ. 6, ಕಾಂಪಾಕ್ಟ್ ಕಾರುಗಳು ಶೇ. 6, ಸೂಪರ್ ಕಾಂಪಾಕ್ಟ್ ಕಾರುಗಳು ಶೇ. 10, ಮಧ್ಯಮ ಗಾತ್ರದ ಕಾರುಗಳು ಶೇ. 15, ಎಕ್ಸ್‌ಕ್ಯೂಟಿವ್ ಕಾರಗಳು ಶೇ. 22, ಪ್ರೀಮಿಯಂ ಮತ್ತು ಐಷಾರಾಮಿ ಕಾರುಗಳು ಶೇ. 84, ಉಪಯುಕ್ತ ವಿಭಾಗದ ಕಾರುಗಳು ಶೇ. 19 ಮತ್ತು ವ್ಯಾನ್‌ಗಳು ಶೇ. 17ರಷ್ಟು ಬೆಳವಣಿಗೆ ಸಾಧಿಸಲಿದೆ.

ಇನ್ನು ಮುಂದಿನ ಹಂತದ ಅಧ್ಯಯನ ವರದಿ ಬಿಡುಗಡೆ ಮಾಡಿರುವ ಸಂಸ್ಥೆಯು 2015ರಲ್ಲಿ ಭಾರತದಲ್ಲಿ ಪ್ರತಿ 1000 ಮಂದಿಗೆ ವಾಹನಗಳ ಸಂಖ್ಯೆ 72ಕ್ಕೆ ಏರಿಕೆಯಾಗಲಿದೆ (ಶೇ. 12.5 ರಷ್ಟು ಏರಿಕೆ) ಎಂದಿದೆ. ಈ ಪ್ರಮಾಣ 2010ರಲ್ಲಿ ಪ್ರತಿ 1000 ಮಂದಿಗೆ 12ರಷ್ಟಿತ್ತು. ಅದೇ ಹೊತ್ತಿಗೆ ಚೀನಾ (ಶೇ. 10.1) ಪ್ರತಿ 1000 ಮಂದಿಗೆ 187, ಬ್ರೆಜಿಲ್ 221 (3.8) ಮತ್ತು ರಷ್ಯಾ 388ಕ್ಕೆ (ಶೇ. 4) ಏರಿಕೆ ಕಾಣಲಿದೆ.

Article Published On: Monday, November 3, 2014, 12:10 [IST]
English summary
Munich-based global consultancy Roland Berger Strategy Consultants said in a recent report that the passenger vehicle and two wheeler segment in India is headed towards a double digit growth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+