ಜೈಲಲ್ಲೇ ಕೈದಿಗಳಿಂದ ಕಾರು ನಿರ್ಮಾಣ ?

By Nagaraja

ದೇಶದ ವಾಹನೋದ್ಯಮ ಚರಿತ್ರೆಯಲ್ಲೇ ಇದೇ ಮೊದಲ ಬಾರಿಗೆ ಜೈಲಿನ ಒಳಗೆ ನೂತನವಾದ ವಾಹನ ತಯಾರಿಕ ಘಟಕ ತೆರೆದುಕೊಳ್ಳಲಿದೆ. ಅಷ್ಟೇ ಯಾಕೆ ಜೈಲಿನಲ್ಲಿರುವ ಕೈದಿಗಳೇ ಕಾರು ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆರೆ.

ಜೈಲಿನಲ್ಲಿರುವ ಕೈದಿಗಳು ತಮ್ಮ ದಿನ ನಿತ್ಯದ ಜೀವನದಲ್ಲಿ ಸಣ್ಣ ಪುಟ್ಟ ಶುಚಿತ್ವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುಜು ಸಾಮಾನ್ಯ. ಆದರೆ ಸ್ಪಾರ್ಕ್ ಮಿಂಡಾ ಮತ್ತು ಅಶೋಕ್ ಮಿಂಡಾ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಮಿಂಡ ಫುರುಕವಾ ಎಲೆಕ್ಟ್ರಿಕ್ ಪ್ರೈವೇಟ್ ಲಿಮಿಟೆಡ್ (ಎಂಎಫ್‌ಇ), ಇಂತಹದೊಂದು ಯೋಜನೆ ಇರಿಸಿಕೊಂಡಿರುವುದು ಕುತೂಹಲವೆನಿಸಿದೆ.

car

ದೇಶದ ಪ್ರಖ್ಯಾತ ತಿಹಾರ್ ಜೈಲಿನಲ್ಲೇ ಇಂತಹದೊಂದು ಘಟಕ ಆರಂಭಿಸುವ ಬಗ್ಗೆ ಯೋಜನೆಯಿದೆ. ಸದ್ಯ ಸಣ್ಣ ಮಟ್ಟದಲ್ಲಿ ಆರಂಭವಾಗಿರುವ ಕಾರು ಬಿಡಿಭಾಗಗಳ ಉತ್ಪಾದನೆಯನ್ನು ದೆಹಲಿ ಜೈಲಿನ ಡೈರಕ್ಟರ್ ಜನರಲ್ ಅಲೋಕ್ ವರ್ಮಾ ಉದ್ಘಾಟಿಸಿದ್ದಾರೆ.

ಕಾರಿಗೆ ಸಂಬಂಧಪಟ್ಟ ವೈರಿಂಗ್ ಲೂಮ್ಮಸ್ ಉತ್ಪನ್ನಗಳನ್ನು ಇಲ್ಲಿ ನಿರ್ಮಿಸಲಾಗುವುದು. ಇದು ಜೈಲು ಕಂಬಿಗಳ ಹಿಂದೆ ತಮ್ಮ ಜೀವನವನ್ನು ಕಳೆದುಕೊಳ್ಳುವ ಕೈದಿಗಳಿಗೆ ಪುನಶ್ಚೇತನದ ಹಾದಿ ತೋರಿಸಲಿದೆ. ವಿಶೇಷವೆಂದರೆ ಇಲ್ಲಿ ಕೆಲಸ ಮಾಡಲಿರುವ ಕೈದಿಗಳನ್ನು ನುರಿತ ವೃತ್ತಿಪರರು ತರಬೇತಿ ನೀಡಲಿದ್ದಾರೆ. ಆರಂಭದಲ್ಲಿ 30ರಷ್ಟು ಕೈದಿಗಳು ಕೆಲಸ ಮಾಡಲಿದ್ದಾರೆ.

Article Published On: Monday, September 8, 2014, 12:50 [IST]
English summary
Minda Furukawa Electric Pvt. Ltd (MFE), a joint venture between Spark Minda, Ashok Minda Group from India and Furukawa of Japan, have set up their manufacturing facility in Tihar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+