ಇಸುಝು ಶೋ ರೂಂ ಜತೆ ಡಿ-ಮ್ಯಾಕ್ಸ್ ಪಿಕಪ್ ಲಾಂಚ್

By Nagaraja

ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಇಸುಝು ಮೋಟಾರ್ಸ್, ಉತ್ತರ ಭಾರತದಲ್ಲಿ ತನ್ನ ಚೊಚ್ಚಲ ಶೋ ರೂಂ ಅನ್ನು ತೆರೆದುಕೊಂಡಿದೆ. ಇದೇ ಸಂದರ್ಭದಲ್ಲಿ ಡಿ-ಮ್ಯಾಕ್ಸ್ ಪಿಕಪ್ ಟ್ರಕ್ ಸಹ ಬಿಡುಗಡೆಗೊಳಿಸಿದೆ.

ಇದೇ ಮೊದಲ ಬಾರಿಗೆ ಜಪಾನ್ ವಾಹನ ತಯಾರಕ ಸಂಸ್ಥೆಯು ಉತ್ತರ ಭಾರತಕ್ಕೆ ಕಾಲಿಡುತ್ತಿದೆ. ಪ್ರಸ್ತುತ ಡಿ-ಮ್ಯಾಕ್ಸ್ ಪಿಕಪ್ ಟ್ರಕ್ ಗುರ್ಗಾಂವ್‌ನಲ್ಲಿ ಲಾಂಚ್ ಕಂಡಿದೆ. ಇದರ ಎಕ್ಸ್ ಶೋ ರೂಂ ದರ 5.89 ಲಕ್ಷ ರು.ಗಳಿಂದ 6.99 ಲಕ್ಷ ರು.ಗಳ ವರೆಗಿರಲಿದೆ.


ತವರೂರಾದ ಜಪಾನ್‌ನಲ್ಲಿ ಡೀಸೆಲ್ ಎಂಜಿನ್‌ ವಾಣಿಜ್ಯ ವಾಹನ ಉತ್ಪಾದನೆ ಹಾಗೂ ಹೆಸರುವಾಸಿಯಾಗಿರುವ ಇಸುಝು, ಭಾರತಕ್ಕೆ ಡಿ-ಮ್ಯಾಕ್ಸ್ ಪಿಕಪ್ ಟ್ರಕ್‌ನಲ್ಲಿ 4 ಸಿಲಿಂಡರ್ ಇಂಟರ್‌ಕೂಲ್ಡ್ ಟರ್ಬೊಚಾರ್ಜ್ ಎಂಜಿನ್ ಪ್ರದಾನ ಮಾಡಿದೆ. ಇದು ಶಕ್ತಿಶಾಲಿ 2499ಸಿಸಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

2016ರ ವೇಳೆಯಾಗುವಾದ ದೇಶದ್ಯಾಂತ 60ರಷ್ಟು ಶೋ ರೂಂಗಳನ್ನು ತೆರೆದುಕೊಳ್ಳುವುದು ಇಸುಝು ಯೋಜನೆಯಾಗಿದೆ. ಪ್ರಸ್ತುತ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯದಗಳಲ್ಲಿ ಇಸುಝು ಶೋ ರೂಂಗಳಿವೆ.

Isuzu D Max pickup truck

ಇದೀಗ ತೆರೆದುಕೊಂಡಿರುವ ಗುರ್ಗಾಂವ್ ಜೊತೆಗೆ ಪ್ರಸಕ್ತ ಸಾಲಿನಲ್ಲೇ ನೋಯ್ಡಾ ಹಾಗೂ ಜೈಪುರದಲ್ಲೂ ಶೋ ರೂಂ ತೆರೆದುಕೊಳ್ಳುವ ಇರಾದೆಯಲ್ಲಿದೆ. ಹಾಗೆಯೇ ಮುಂದಿನ ವರ್ಷಗಳಲ್ಲಿ ಅಮೃತಸರ, ಕಾನ್ಪುರ, ಉದೈಪುರ್, ಲಕ್ನೋ, ಜಲಂಧರ್ ಹಾಗೂ ಚಂಡೀಗಢದಲ್ಲಿ ನೂತನ ಶೋ ರೂಂ ತೆರೆದುಕೊಳ್ಳಲಿದೆ.

More from DriveSpark

Article Published On: Friday, May 30, 2014, 12:37 [IST]
English summary
Japanese manufacturer Isuzu Motors have inaugurated its first showroom in the North of India. They have also launched their new vehicle the D-Max, which is a pickup truck for India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+