ಗೆರೆ ದಾಟಿದ ಇಸುಝು ಡಿ ಮ್ಯಾಕ್ಸ್ ರನ್ ಚಾಲೆಂಜ್
ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ತನ್ನ ಹೊಸ ಪಿಕಪ್ ಮಾದರಿಗಳನ್ನು ಪ್ರದರ್ಶಿಸಿದ್ದ ಜಪಾನ್ ಮೂಲದ ಇಸುಝು ಮೋಟಾರ್ಸ್ ಸಂಸ್ಥೆಯು ತದಾ ಬಳಿಕ ಇದನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
ಇದರಂತೆ ಸೆಪ್ಟೆಂಬರ್ 23ರಿಂದ 25ರ ವರೆಗೆ ಇಸುಝು ಮ್ಯಾಕ್ಸ್ ರನ್ ಚಾಲೆಂಜ್ ಏರ್ಪಡಿಸಿತ್ತು. ಆಂಧ್ರ ಪ್ರದೇಶದಿಂದ ವಿಜಯವಾಡದಿಂದ ಮುಂಬೈ ವರೆಗೂ ಮೂರು ದಿನಗಳ ಇಸುಝು ಪಿಕಪ್ ಟ್ರಕ್ ಪಯಣ ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ ಪ್ರಮುಖವಾಗಿಯೂ ಇಸುಝು ಡಿಮ್ಯಾಕ್ಸ್ ಪಿಕಪ್ ಟ್ರಕ್ ಬಳಕೆ ಮಾಡಲಾಗಿತ್ತು. ವಿಶೇಷವೆಂದರೆ ಒಂದು ಫುಲ್ ಟ್ಯಾಂಕ್‌ನಲ್ಲೇ ತನ್ನ ಗುರಿ ತಲುಪುವಲ್ಲಿ ಡಿಮ್ಯಾಕ್ಸ್ ಟ್ರಕ್ ಯಶಸ್ವಿಯಾಗಿತ್ತು.
ಅಂದರೆ ಪ್ರತಿ ಲೀಟರ್‌ಗೆ 18.3 ಕೀ.ಮೀ. ಮೈಲೇಜ್ ನೀಡುವುದರಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ 1000ದಷ್ಟು ಕೀ.ಮೀ. ದೂರವನ್ನು ಒಂದು ಫುಲ್ ಟ್ಯಾಂಕ್‌ನಲ್ಲಿ ತಲುಪಿರುವುದು ವಿಶೇಷ. ವಿಜವಾಡದಿಂದ, ಹೈದರಾಬಾದ್, ಸೋಲಾಪುರ, ಪುಣೆ ಮಾರ್ಗವಾಗಿ ಮುಂಬೈ ಪ್ರವೇಶ ಪಡೆದಿತ್ತು.
ಜಿಪಿಎಸ್ ಸಿಸ್ಟಂ ನೆರವಿನೊಂದಿಗೆ ಸಂಚಾರ ಹಮ್ಮಿಕೊಳ್ಳಲಾಗಿತ್ತು. ಇದು ರಿಯಲ್ ಟೈಮ್ ಟ್ರ್ಯಾಕ್ ಮಾಡಲು ಸಹ ಸಹಕಾರಿಯೆನಿಸಿತ್ತು. ಅಂದ ಹಾಗೆ 299 ಸಿಸಿ ಇಂಟರ್ ಕೂಲ್ಡ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಇಸುಝು ಡಿ ಮ್ಯಾಕ್ಸ್ ಮುಂಬೈ ಎಕ್ಸ್ ಶೋ ರೂಂ ಬೆಲೆ 6.11 ಲಕ್ಷ ರು.ಗಳಾಗಿದೆ.


Click it and Unblock the Notifications








