ಭಾರತಕ್ಕೆ ಜೀಪ್ ಆಗಮನ ಮತ್ತೆ ವಿಳಂಬ

Written By:

ಯಾಕೋ ಪ್ರತಿಷ್ಠಿತ ಜೀಪ್ ಬ್ರಾಂಡ್ ಭಾರತ ಪ್ರವೇಶಕ್ಕೆ ಸರಿಯಾದ ಸಮಯ ಕೂಡಿ ಬರುತ್ತಿಲ್ಲ. ಕಳೆದ ವರ್ಷವೇ ಜೀಪ್ ಬ್ರಾಂಡ್ ಭಾರತಕ್ಕೆ ಆಗಮನವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು.

ಕಳೆದ ತಿಂಗಳಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲೂ ಜೀಪ್ ಕೆರೊಕಿ ಮತ್ತು ವ್ರ್ಯಾಂಗ್ಲರ್ ಎಸ್‌ಯುವಿ ಪ್ರದರ್ಶನದಿಂದ ವಂಚಿತವಾಗಿತ್ತು. ಇದು ಅಭಿಮಾನಿಗಳಲ್ಲಿ ತೀರಾ ನಿರಾಸೆಗೆ ಕಾರಣವಾಗಿತ್ತು.

Jeep

ಇಷ್ಟೆಲ್ಲ ಆದರೂ 2014 ಮೊದಲ ತ್ರೈಮಾಸಿಕ ಅವಧಿಯ ವೇಳೆ ಜೀಪ್ ಬ್ರಾಂಡ್ ಭಾರತ ಪ್ರವೇಶ ಪಡೆಯಲಿದೆಯೆಂಬ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಇದೀಗ ಎಲ್ಲ ನಿರೀಕ್ಷೆಗಳು ಹುಸಿಯಾಗಿದೆ. ಜೀಪ್ ಭಾರತ ಎಂಟ್ರಿ ಮಗದೊಮ್ಮೆ ಮುಂದೂಡಿದೆ.

ಸದ್ಯ ವರ್ಷಾಂತ್ಯದ ಹಬ್ಬದ ಆವೃತ್ತಿಯ ವೇಳೆ ಜೀಪ್ ಭಾರತ ಪ್ರವೇಶವನ್ನು ಎದುರು ನೋಡಲಾಗುತ್ತಿದೆ. ಜೀಪ್ ಬ್ರಾಂಡ್ ಭಾರತ ಬಿಡುಗಡೆಗೆ ಸರಿಯಾದ ಸಮಯ ನಿಗದಿ ಮಾಡುವ ಯೋಜನೆಯಿಂದಾಗಿ ಪದೇ ಪದೇ ಲಾಂಚ್ ದಿನಾಂಕ ಮುಂದೂಡಲಾಗುತ್ತಿಯೆಂಬ ಮಾಹಿತಿ ಕೇಳಿ ಬರುತ್ತಿದೆ.

English summary
2013 was supposed to be the year the iconic Jeep brand would make its appearance in India, but that never happened due to various reasons. We did not even get to see the Grand Cherokee and Wrangler SUVs at the Auto Expo last month, which was a real disappointment.
Story first published: Wednesday, March 5, 2014, 15:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark