ಹೊರ ರಾಜ್ಯದ ವಾಹನಗಳ ಹಾವಳಿ; 1,000 ಕಾರುಗಳ ಮುಟ್ಟುಗೋಲು
ಹೊರ ರಾಜ್ಯಗಳ ದಾಖಲಾತಿ ನಂಬರ್ ಹೊಂದಿರುವ 1000ದಷ್ಟು ಕಾರುಗಳನ್ನು ಕರ್ನಾಟಕದಲ್ಲಿ ಮುಟ್ಟುಗೋಲು ಹಾಕಲಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವಲ್ಲಿ ರಾಜ್ಯ ಸಾರಿಗೆ ಇಲಾಖೆ ಯಶಸ್ವಿಯಾಗಿದೆ.
ಪಾಂಡಿಚೇರಿ ಅಥವಾ ಇನ್ನಿತರ ರಾಜ್ಯಗಳಲ್ಲಿ ವಾಹನ ದಾಖಲಾತಿ ಹೊಂದಿರುವವರು ಸರಾಗವಾಗಿ ರಾಜ್ಯ ಸಾರಿಗೆ ಇಲಾಖೆಯ ಅಧೀನತೆಯಲ್ಲಿರುವ ರಸ್ತೆಯನ್ನು ಬಳಕೆ ಮಾಡುತ್ತಿದ್ದರು. ಇದನ್ನು ಗುರುತಿಸಿರುವ ಸಾರಿಗೆ ಇಲಾಖೆ 1000ದಷ್ಟು ಕಾರುಗಳನ್ನು ಮುಟ್ಟುಗೋಲು ಮಾಡಿದ್ದು, ಈ ಮುಖಾಂತರ ಬರೋಬ್ಬರಿ 14 ಕೋಟಿ ರು.ಗಳ ರಸ್ತೆ ತೆರಿಗೆಯನ್ನು ಸಂಗ್ರಹಿಸಿದೆ.

ಪ್ರಮುಖವಾಗಿಯೂ ಬೆಂಗಳೂರು ನಗರದಲ್ಲಿ ಹೊರ ರಾಜ್ಯಗಳ ಹಾವಳಿ ಜಾಸ್ತಿಯಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರಿಸುವುದಾಗಿ ಸಾರಿಗೆ ಆಯುಕ್ತ ರಾಮ ಗೌಡ ತಿಳಿಸಿದ್ದಾರೆ.
ಈ ಸಂಬಂಧ 3,636 ವಾಹನಗಳನ್ನು ಪರಿಶೀಲಿಸಿರುವ ಸಾರಿಗೆ ಅಧಿಕಾರಿಗಳು ಯಾವುದೇ ರೀತಿಯ ತೆರಿಗೆ ಪಾವತಿ ಮಾಡದೆ 30 ದಿನಗಿಂತಲೂ ಹೆಚ್ಚು ರಾಜ್ಯದಲ್ಲಿ ಸಂಚರಿಸಿರುವ ವಾಹನಗಳನ್ನು ಮುಟ್ಟಗೋಲು ಮಾಡಿದೆ.


Click it and Unblock the Notifications








