ಲಂಬೋರ್ಗಿನಿ ಹ್ಯುರಕೇನ್ ಭಾರತ ಪ್ರವೇಶಕ್ಕೆ ದಿನಾಂಕ ನಿಗದಿ
ಅಂತೂ ಬಹು ಬೇಡಿಕೆಯ ಲಂಬೋರ್ಗಿನಿ ಹ್ಯುರಕೇನ್ ಸೂಪರ್ ಕಾರಿನ ಭಾರತ ಪ್ರವೇಶಕ್ಕೆ ದಿನಾಂಕ ನಿಗದಿಯಾಗಿದೆ. ಲಂಬೋರ್ಗಿನಿ ಗಲರ್ಡೊ ಉತ್ತರಾಧಿಕಾರಿಯಾಗಿರುವ ಹ್ಯುರಕೇನ್ ಮುಂಬರುವ ಸೆಪ್ಟೆಂಬರ್ 22ರಂದು ಭಾರತ ಪ್ರವೇಶ ಪಡೆಯಲಿದೆ.
ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ ಈಗಾಗಲೇ ಹ್ಯುರಕೇನ್ ಜಾಗತಿಕ ಬಿಡುಗಡೆ ಅದ್ದೂರಿಯಾಗಿ ಹಮ್ಮಿಕೊಂಡಿದೆ. ಇದು ನೈಸರ್ಗಿಕ ಚೋಷಿತ 5.2 ಲೀಟರ್ ವಿ10 ಎಂಜಿನ್ ಪಡೆದುಕೊಂಡಿದೆ.

ಅಲ್ಲದೆ ಬರೋಬ್ಬರಿ 610 ಅಶ್ವಶಕ್ತಿ ಉತ್ಪಾದಿಸಲು ಸಕ್ಷಮವಾಗಿದೆ. ಇನ್ನು ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇದು 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಸಹ ಪಡೆಯಲಿದೆ.
ಇನ್ನು ಹ್ಯುರಕೇನ್ ಸೂಪರ್ ಕಾರಿನ ಭಾರ ಕಡಿತ ಮಾಡಲು ಅಲ್ಯೂಮಿನಿಯಂ ಹಾಗೂ ಕಾರ್ಬನ್ ಫೈಬರ್ ಪರಿಕರಗಳಿಂದ ಚಾಸೀ ನಿರ್ಮಿಸಲಾಗಿದೆ. ಅಂತೆಯೇ ಕಾರ್ಬನ್ ಸೆರಾಮಿಕ್ ಡಿಸ್ಕ್ ಬ್ರೇಕ್‌ಗಳಿಂದ ಬ್ರೇಕಿಂಗ್ ವ್ಯವಸ್ಥೆ ನಡೆಯಲಿದೆ.

ಪ್ರಸ್ತುತ ಲಂಬೋರ್ಗಿನಿಯಿಂದ ಮಾರಾಟದಲ್ಲಿರುವ ಅವೆಂಟಡೊರ್ ದೆಹಲಿ ಎಕ್ಸ್ ಶೋ ರೂಂ ದರ ಐದು ಕೋಟಿ ರು.ಗಳಾಗಿದೆ. ಈ ಸೂಪರ್ ಕಾರನ್ನು ಮುಂಬೈ ಹಾಗೂ ದೆಹಲಿಯಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಎರಡು ಪ್ರದರ್ಶನ ಮಳಿಗೆಯಲ್ಲಿ ಮಾತ್ರ ನೋಡುವ ಅವಕಾಶವಿರುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲೂ ಶೋ ರೂಂ ತೆರೆಯುವ ಯೋಜನೆ ಹೊಂದಿದೆ.


Click it and Unblock the Notifications








