ಬಹುನಿರೀಕ್ಷಿತ ಲಂಬೋರ್ಗಿನಿ ಹ್ಯುರಕನ್ ಸೆ. 22ರಂದು ಲಾಂಚ್
ದೇಶದ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ದೇಶದ ಅತಿ ದೊಡ್ಡ ಲಾಂಚ್‌ಗೆ ವೇದಿಕೆ ಸಜ್ಜುಗೊಂಡಿದೆ. ಹೌದು, ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ ತನ್ನ ಹೊಚ್ಚ ಹೊಸ ಮಾದರಿಯಾಗಿರುವ ಲಂಬೋರ್ಗಿನಿ ಹ್ಯುರಕನ್ ಮಾದರಿಯನ್ನು ಇದೇ ಬರುವ 2014 ಸೆಪ್ಟೆಂಬರ್ 22ರಂದು ಬಿಡುಗಡೆ ಮಾಡಲಿದೆ.
ಲಂಬೋರ್ಗಿನಿ ಗಲರ್ಡೊ ಬದಲಿ ಮಾದರಿಯಾಗಿರುವ ಹ್ಯುರಕನ್ ಈಗಾಗಲೇ ಜಾಗತಿಕ ಬಿಡುಗಡೆ ಕಂಡಿದೆ. ಇದೀಗ ಭಾರತ ಪ್ರವೇಶಕ್ಕೆ ಸಜ್ಜಾಗಿ ನಿಂತಿದೆ.

ಪ್ರಸ್ತುತ ಭಾರತದಲ್ಲಿ ಅವೆಂಟಡೊರ್ ಮಾದರಿ ಮಾರಾಟದಲ್ಲಿದೆ. ಅಲ್ಲದೆ ದೇಶದ ಮಾರುಕಟ್ಟೆ ಸಾಮರ್ಥ್ಯವನ್ನು ಅರಿತುಕೊಂಡಿರುವ ಇಟಲಿಯ ಈ ಸೂಪರ್ ಕಾರು ತಯಾರಕ ಸಂಸ್ಥೆಯು ಬಹುಬೇಗನೇ ಹ್ಯುರಕನ್ ಮಾದರಿಯನ್ನು ಪರಿಚಯಿಸುವ ಇರಾದೆ ಹೊಂದಿದೆ.
ನೂತನ ಲಂಬೋರ್ಗಿನಿ ಹ್ಯುರಕನ್ 5.2 ಲೀಟರ್ ವಿ10 ನೈಸರ್ಗಿಕ ಚೋಷಿತ ಎಂಜಿನ್ ಪಡೆಯಲಿದೆ. ಇದು ಗರಿಷ್ಠ 610 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಸಹ ಇರಲಿದೆ.

ಲಂಬೋರ್ಗಿನಿ ಹ್ಯುರಕನ್ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಅಂತೆಯೇ ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








