ಕ್ರಾಶ್ ಟೆಸ್ಟ್‌ನಲ್ಲಿ ಲ್ಯಾಂಡ್ ರೋವರ್ ಡಿಸ್ಕವರ್ ಶೈನಿಂಗ್
ಮುಂದಿನ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಲ್ಯಾಂಡ್ ರೋವರ್ ಸ್ಪೋರ್ಟ್ ಕಾರು ಯುರೋ ಕ್ರಾಶ್ ಟೆಸ್ಟ್‌ನಲ್ಲಿ ಗರಿಷ್ಠ ಐದಾಂಕಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ.
ಕಾರಿನ ಸುರಕ್ಷಾ ಗುಣಮಟ್ಟತೆಯನ್ನು ಅಳತೆ ಮಾಡುವಲ್ಲಿ ಕ್ರಾಶ್ ಟೆಸ್ಸ್ ಅತಿ ಮಹತ್ವಪೂರ್ಣವೆನಿಸಿದೆ. ಇನ್ನು ಯುರೋಪ್ ಮಾರುಕಟ್ಟೆಗೆ ಇಳಿಯಬೇಕಾದರೆ ಕಡ್ಡಾಯ ಕ್ರಾಶ್ ಟೆಸ್ಟ್ ನಡೆಸಲೇಬೇಕಾಗುತ್ತದೆ.
ಈ ನಡುವೆ ಲ್ಯಾಂಡ್ ರೋವರ್ ಡಿಸ್ಕವರ್ ಸ್ಪೋರ್ಟ್ ಎಸ್‌ಯುವಿ ಅಪಘಾತ ಪರೀಕ್ಷೆಯಲ್ಲಿ ಐದರಲ್ಲಿ ಎಲ್ಲ ಐದಾಂಕಗಳನ್ನು ಗೆಲ್ಲುವ ಮೂಲಕ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಂಡಿದೆ.
ಲ್ಯಾಂಡರ್ ರೋವರ್ ಡಿಸ್ಕವರಿ ಸ್ಪೋರ್ಟ್ಕಾರು ಆಟೋಮ್ಯಾಟಿಕ್ ತುರ್ತು ಬ್ರೇಕಿಂಗ್ ಸಿಸ್ಟಂಗಳಂತಹ ವ್ಯವಸ್ಥೆಗಳನ್ನು ಹೊಂದಿದೆ. ಕಾರಿನ ರಿಯರ್ ವ್ಯೂ ಮಿರರ್ ಸಮೀಪದಲ್ಲಿ ಡಿಜಿಟಲ್ ಸ್ಟೀರಿಯೋ ಕ್ಯಾಮೆರಾ ಸಹ ಲಗತ್ತಿಸಲಾಗಿರುತ್ತದೆ. ಉಳಿದಂತೆ ಪಾದಚಾರಿ ಏರ್ ಬ್ಯಾಗ್ ಮುಂತಾದ ಸೌಲಭ್ಯಗಳನ್ನು ಹೊಂದಿದೆ.

ಲ್ಯಾಂಡರ್ ರೋವರ್ ಡಿಸ್ಕವರಿ ಸ್ಪೋರ್ಟ್ ವೈಶಿಷ್ಟ್ಯ
- ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ),
- ಡಿಎಸ್‌ಸಿ (ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್),
- ರೋಲ್ ಸ್ಟೆಬಿಲಿಟಿ ಕಂಟ್ರೋಲ್,
- ಎಮರ್ಜನ್ಸಿ ಬ್ರೇಕ್ ಲೈಟ್ಸ್,
- ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್,
- ರಿವರ್ಸ್ ಟ್ರಾಫಿಕ್ ಡಿಟೆಕ್ಷನ್,
- ಸೀಟ್ ಬೆಲ್ಟ್ ರಿಮೈಂಡರ್,
- ಲೇನ್ ಡಿಪಾಕ್ಚರ್ ವಾರ್ನಿಂಗ್
ಐಚ್ಚಿಕ ಸೌಲಭ್ಯಗಳು
- ಆಕ್ಟಿವ್ ಸ್ಪೀಡ್ ಲಿಮಿಟಿಂಗ್,
- ಟ್ರಾಫಿಕ್ ಸಂಕೇತ ಪತ್ತೆ,
- ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ವಿತ್ ಕ್ಲೋಸ್ ವೆಹಿಕಲ್ ಸೆನ್ಸಿಂಗ್,
- ರಿವರ್ಸ್ ಟ್ರಾಫಿಕ್ ಪತ್ತೆ
ಸುರಕ್ಷತೆ
- ಚಾಲಕ ಹಾಗೂ ಪ್ರಯಾಣಿಕ ಏರ್ ಬ್ಯಾಗ್,
- ಥೋರಾಕ್ಸ್ ಅಥವಾ ಸೈಡ್ ಏರ್ ಬ್ಯಾಗ್,
- ಡ್ರೈವರ್ ಮೊಣಕಾಲು ಏರ್ ಬ್ಯಾಗ್,
- ಸೈಡ್ ಕರ್ಟೈನ್ ಏರ್ ಬ್ಯಾಗ್.


Click it and Unblock the Notifications








