ಮಹೀಂದ್ರ ತೆಕ್ಕೆಗೆ ಸ್ಯಾಬ್ ಆಟೋಮೋಟಿವ್?
ದೇಶದ ಮುಂಚೂಣಿಯ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಸ್ವಿಡನ್‌ನ ಆಟೋಮೊಬೈಲ್ ಸಂಸ್ಥೆಯಾಗಿರುವ ಸ್ಯಾಬ್ ಆಟೋಮೋಟಿವ್ ಶೇರನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ.
ನ್ಯಾಷನಲ್ ಎಲೆಕ್ಟ್ರಿಕ್ ವೆಹಿಕಲ್ ಸ್ವೀಡನ್ (ಎನ್‌ಇವಿಎಸ್) ಮಾಲಿಕತ್ವದಲ್ಲಿ ಚೀನಾ-ಜಪಾನ್ ಎನರ್ಜಿ ಕಂಪನಿಯಾಗಿರುವ ನ್ಯಾಷಲ್ ಮಾಡರ್ನ್ ಎನರ್ಜಿ ಹೋಲ್ಡಿಂಗ್ಸ್ ಇದೆ.

ಮುಂದುವರಿದ ಬೆಳವಣಿಗೆಯಲ್ಲಿ ಸ್ಯಾಬ್ ಆಟೋಮೊಬೈಲ್, ಸ್ಯಾಬ್ ಪವರ್ ಟ್ರೈನ್ ಮತ್ತು ಸ್ಯಾಬ್ ಆಟೋಮೊಬೈಲ್ ಟೂಲ್ಸ್ ಅಧೀನತೆಯನ್ನು ಎನ್‌ಇವಿಎಸ್ ಪಡೆದುಕೊಂಡಿದತ್ತು.
ಬಳಿಕ 2012ರಲ್ಲಿ ಸ್ಯಾಬ್ ಮೇಲೆ ಮಹೀಂದ್ರ ಕಣ್ಣಾಯಿಸಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗಳ ಪಾಲಿಗೆ ಸದಾ ಆಶ್ರಯದಾತನಾಗಿರುವ ಮಹೀಂದ್ರ ಹೂಡಿಕೆ ಮಾಡುವ ಸಂಬಂಧಿಸಿದಂತೆ ಪೂರಕ ಮಾತುಕತೆ ನಡೆಸಿದೆ.
ವರದಿಗಳ ಪ್ರಕಾರ ಸ್ಯಾಬ್ ಬಹುತೇಕ ಮಾಲಿಕತ್ವವನ್ನು ಮಹೀಂದ್ರ ವಹಿಸಿಕೊಳ್ಳಲಿದೆ. ಆದರೆ ಭಾರತ ಮೂಲದ ಸಂಸ್ಥೆಯಿಂದ ಮಾತ್ರ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.
ಒಂದು ವೇಳೆ ಎನ್‌ಇವಿಎಸ್ ಅಧೀನತೆ ಮಾಡುವಲ್ಲಿ ಸಾಧ್ಯವಾದ್ದಲ್ಲಿ ಸ್ಯಾಬ್‌ನ ಎಲ್ಲ ಆಟೋಮೋಟಿವ್ ತಂತ್ರಗಾರಿಕೆಯನ್ನು ಮಹೀಂದ್ರ ಪಡೆಯಲಿದೆ. ಇದು ಭವಿಷ್ಯದಲ್ಲಿ ಇನ್ನಷ್ಟು ಆಕರ್ಷಕ ಮಾದರಿಗಳ ಬಿಡುಗಡೆ ಎಡೆ ಮಾಡಿಕೊಡಲಿದೆ.


Click it and Unblock the Notifications








