ಮಹೀಂದ್ರ ಸ್ಕಾರ್ಪಿಯೊ, ಕ್ಸೈಲೋ, ಎಕ್ಸ್‌ಯುವಿ500 ಹಿಂದಕ್ಕೆ ಕರೆ

By Nagaraja

ಈಗ ದೇಶದ ಎಸ್‍‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಗೂ ರಿಕಾಲ್ ಬಿಸಿ ತಟ್ಟಿದೆ. ವರದಿಗಳ ಪ್ರಕಾರ ದೇಶದ ಉಪಯುಕ್ತ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ, 2,300 ಯುನಿಟ್‌ಗಳಷ್ಟು ಸ್ಕಾರ್ಪಿಯೊ, ಎಕ್ಸ್‌ಯುವಿ500 ಮತ್ತು ಕ್ಸೈಲೋ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಿದೆ.

ಎಂಜಿನ್ ವ್ಯಾಕ್ಯೂಮ್ ಪಂಪ್‌ನಲ್ಲಿ ದೋಷ ಕಾಣಿಸಿಕೊಂಡಿರುವುದಾಗಿ ಸಂಸ್ಥೆ ತಿಳಿಸಿದೆ. ಪ್ರಸಕ್ತ ಸಾಲಿನಲ್ಲೇ ನಿರ್ಮಿಸಿರುವ ಹೊಸ ಗಾಡಿಗಳಲ್ಲಿ ಮಾತ್ರ ಸಮಸ್ಯೆ ಕಂಡುಬರುವ ಸಾಧ್ಯತೆಯಿದೆ. ಅಲ್ಲದೆ ಸಂಸ್ಥೆಯು ಸಂಪೂರ್ಣ ಉಚಿತವಾಗಿ ತೊಂದರೆ ಸರಿಪಡಿಸಿಕೊಡಲಿದೆ ಎಂಬುದನ್ನು ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.


ಒಟ್ಟು 2,300 ಯುನಿಟ್
  • ಸ್ಕಾರ್ಪಿಯೊ - ವಿಎಲ್‌ಎಕ್ಸ್, ಎಸ್‌ಎಲ್‌ಇ, ಎಲ್‌ಎಕ್ಸ್
  • ಎಕ್ಸ್‌ಯುವಿ500 - ಡಬ್ಲ್ಯು4, ಡಬ್ಲ್ಯು6, ಡಬ್ಲ್ಯು8
  • ಕ್ಸೈಲೋ - ಎಚ್9, ಎಚ್8, ಎಚ್4

ಕಳೆದ ಜುಲೈ ತಿಂಗಳಿನಲ್ಲಷ್ಟೇ ಪ್ರೆಷರ್ ರೆಗ್ಯೂಲೇಟಿಂಗ್ ವಾಲ್ವ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 23,000 ಯುನಿಟ್‌ಗಳಷ್ಟು ಸ್ಕಾರ್ಪಿಯೊ ಮಾದರಿಗಳನ್ನು ಮಹೀಂದ್ರ ವಾಪಾಸ್ ಕರೆಯಿಸಿಕೊಂಡಿತ್ತು.

Xylo

2012 ಜುಲೈ ತಿಂಗಳಲ್ಲಿ ಸುರಕ್ಷತೆ ಸಂಬಂಧಿಸಿದಂತೆ ತಾತ್ಕಾಲಿಕ ರಿಕಾಲ್‌ಗೆ ಭಾರತದ ವಾಹನ ತಯಾರಕ ಸಂಸ್ಥೆಗಳ ಒಕ್ಕೂಟ (ಸಿಯಾಮ್) ಆದೇಶ ಹೊರಡಿಸಿದ ಬಳಿಕ ಇದುವರೆಗೆ ಒಟ್ಟು ಏಳು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ. ಇದರಲ್ಲಿ ಮಾರುತಿ ಸುಜುಕಿ, ಮಹೀಂದ್ರ ಆಂಡ್ ಮಹೀಂದ್ರ, ಟೊಯೊಟಾ, ಫೋರ್ಡ್, ಹೋಂಡಾ ಮತ್ತು ಜನರಲ್ ಮೋಟಾರ್ಸ್ ಮಾದರಿಗಳು ಸೇರಿವೆ.

ಕಳೆದ ತಿಂಗಳಿನಲ್ಲಷ್ಟೇ ಹೋಂಡಾ ಕಾರ್ಸ್ ಇಂಡಿಯಾ (ಎಚ್‌ಸಿಐಎಲ್) ಸಂಸ್ಥೆಯು 2011 ಸೆಪ್ಟೆಂಬರ್‌ನಿಂದ 2014 ಜುಲೈ ವರೆಗೆ ಉತ್ಪಾದನೆಯಾಗಿರುವ 2,338 ಯುನಿಟ್‌ಗಳಷ್ಟು ಬ್ರಿಯೊ, ಅಮೇಜ್ ಮತ್ತು ಸಿಆರ್-ವಿ ಮಾದರಿಗಳನ್ನು ಹಿಂಪಡೆದಿತ್ತು.

ಇನ್ನೊಂದೆಡೆ ಜಾಗತಿಕ ರಿಕಾಲ್ ಭಾಗವಾಗಿ ನಿಸ್ಸಾನ್ ಸಂಸ್ಥೆಯು 9,000 ಯುನಿಟ್‌ಗಳಷ್ಟು ಮೈಕ್ರಾ ಮತ್ತು ಸನ್ನಿ ಮಾದರಿಗಳನ್ನು ವಾಪಾಸ್ ಕರೆ ನೀಡಿತ್ತು.

ಮೆಟ್ಜೆಲರ್ ರೋಡ್‌ಟೆಕ್ ಝಡ್6 ಟ್ಯೂಬ್‌ಲೆಸ್ - ಶೇಕಡಾ 10ರಷ್ಟು ಆಫರ್ ತ್ವರೆ ಮಾಡಿ

More from DriveSpark

Article Published On: Wednesday, November 19, 2014, 10:47 [IST]
English summary
India's largest selling and manufacturing Utility Vehicle brand Mahindra & Mahindra is under the scanner this time. The manufacturer has issued a recall of their popular Scorpio, XUV500 and Xylo models, which are made in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+