ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಪ್ರದರ್ಶನ

By Nagaraja

ಮುಂಬರುವ 2014 ಇಂಡಿಯಾ ಆಟೋ ಎಕ್ಸ್ ಪೋ ಹಲವು ಕಾರಣಗಳಿಂದಾಗಿ ಮಹತ್ವದೆನಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಸೇರಿದಂತೆ ಹಲವಾರು ನೂತನ ಕಾನ್ಸೆಪ್ಟ್‌ಗಳನ್ನು ಪ್ರದರ್ಶಿಸಲಿದೆ.

ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ಜತೆಗೆ ಫಾರ್ಮುಲಾ ಇ ಕಾರ್ ಮಹೀಂದ್ರದ ಪ್ರಮುಖ ಆಕರ್ಷಣೆಯಾಗಿರಲಿದೆ. ಈ ಮೂಲಕ ಮುಂದಿನ ಜನಾಂಗದ ತಂತ್ರಜ್ಞಾನವನ್ನು ಅವಿಷ್ಕರಿಸಲಿದೆ. ಭವಿಷ್ಯದ ತಂತ್ರಗಾರಿಕೆ ಅಭಿವೃದ್ಧಿಯತ್ತ ನಾವು ಕಾರ್ಯ ಮಗ್ನವಾಗಿದ್ದು, ಆಟೋ ಎಕ್ಸ್ ಪೋದಲ್ಲಿ ಐದು ಮಾದರಿಗಳನ್ನು ಪ್ರದರ್ಶಿಸಲಿದ್ದೇವೆ ಎಂದು ಮಹೀಂದ್ರ ರೇವಾ ಸ್ಥಾಪಕ ಹಾಗೂ ಸಿಇಒ ಆಗಿರುವ ಚೇತನ್ ಮೈನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mahindra Reva Auto Expo 2014 Plans

ಸಂಸ್ಥೆಯು ಹೆಚ್ಚು ಕ್ರೀಡಾತ್ಮಕ, ಹೆಚ್ಚಿನ ನಿರ್ವಹಣೆಯ ತಂತ್ರಜ್ಞಾನದತ್ತ ಗಮನ ಕೇಂದ್ರಿತವಾಗಿದೆ. ಇಲ್ಲಿ ಪ್ರದರ್ಶನವಾಗಲಿರುವ ಮಹೀಂದ್ರ ರೇಸಿಂಗ್ ಕಾರು ಪ್ರಸಕ್ತ ಸಾಲಿನಲ್ಲೇ ನೆಡಯಲಿರುವ ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದೆ.

ಇದೇ ಸಂದರ್ಭದಲ್ಲಿ ಜನಪ್ರಿಯ ಇ2ಒ ಕಾರಿನ ಹೊಸ ವೆರಿಯಂಟ್‌ ಕೂಡಾ ಪ್ರದರ್ಶನವಾಗಲಿದೆ. ಇದರ ಹೊಸತಾದ ಚಾರ್ಜಿಂಗ್ ತಂತ್ರಗಾರಿಕೆಯು ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಲು ನೆರವಾಗಲಿದೆ. ಇದು ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಇನ್ನುಳಿದಂತೆ ಮಹೀಂದ್ರ ವೆರಿಟೊ ಸೆಡಾನ್ ಹಾಗೂ ಹಗುರ ವಾಣಿಜ್ಯ ಮ್ಯಾಕ್ಸಿಮೊ ಕಾರಿನ ವಿದ್ಯುತ್ ವರ್ಷನ್‌ಗಳು ಸಹ ಪ್ರದರ್ಶನವಾಗಲಿದೆ.

More from DriveSpark

Article Published On: Saturday, February 1, 2014, 12:59 [IST]
English summary
The 2014 Auto Expo is round the corner and Mahindra Reva will be showcasing an electric sports car concept, Formula E-car and an update of the e2o.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+