ಹೊಸ ಎಂಜಿನ್‌ನೊಂದಿಗೆ ಬರಲಿರುವ ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ
ಗ್ರಾಹಕರಿಗೆ ಗರಿಷ್ಠ ಚಾಲನಾ ಅನುಭವ ನೀಡುವಲ್ಲಿ ಸದಾ ಬದ್ಧವಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಹೊಸ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಭವಿಷ್ಯದ ಮಹೀಂದ್ರ ಜೊತೆ ಜೊತೆಗೆ ಸ್ಯಾಂಗ್ಯೊಂಗ್ ಮಾದರಿಗಳಲ್ಲಿ ಇದು ಬಳಕೆಯಾಗಲಿದೆ.
ಈ ಹೊಸ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ಗಳು ಸಾಮಾನ್ಯ ಫ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಗೊಳ್ಳಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹೀಂದ್ರ ಆಂಡ್ ಮಹೀಂದ್ರ ಅಧ್ಯಕ್ಷ ಪವನ್ ಗೋನ್ಖಾ, ನಾವು ಹೊಸತಾದ 1.2 ಮತ್ತು 1.6 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, 1.5 ಲೀಟರ್ ಪೆಟ್ರೋಲ್ ಹಾಗೂ 1.0ಲೀಟರ್ ಪೆಟ್ರೋಲ್ ಆಯ್ಕೆಯು ಸಹ ಇರಲಿದೆ ಎಂದಿದ್ದಾರೆ.

ವಿಶೇಷವೆಂದರೆ ಮಹೀಂದ್ರದ ಈ ಹೊಸ ಎಂಜಿನ್‌ಗಳು ಕೊರಿಯಾ ಮೂಲದ ತನ್ನ ಜೊತೆಗಾರ ಸ್ಯಾಂಗ್ಯೊಂಗ್ ಜೊತೆಗೂ ಹಂಚಿಕೊಳ್ಳಲಿದೆ. ಇದಕ್ಕಾಗಿ ಒಟ್ಟು 700 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಾಗಿದೆ.
ಈ ಪೈಕಿ ಸ್ಯಾಂಗ್ಯೊಂಗ್ ಎಕ್ಸ್100 ಕಾಂಪಾಕ್ಟ್ ಎಸ್‌ಯುವಿ ಮುಖಾಂತರ 2015ರಲ್ಲಿ ಫೋರ್ ಸಿಲಿಂಡರ್ 1.6 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಪರಿಚಯವಾಗಲಿದೆ. ಹಾಗಿದ್ದರೂ ಇದನ್ನು ಭಾರತದ ಬದಲು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳಲಾಗುತ್ತಿದೆ.
ಆದರೆ ಮುಂದಿನ ವರ್ಷ ಭಾರತಕ್ಕೆ 1.2 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಪರಿಚಯವಾಗಲಿದೆ. ಮಹೀಂದ್ರದಿಂದ ಭಾರತದಲ್ಲಿ ಉದ್ದೇಶಿತ 2015ರಲ್ಲಿ ಬಿಡುಗಡೆಯಾಗಲಿರುವ ಎಸ್102 ಕಾಂಪಾಕ್ಟ್ ಎಸ್‌ಯುವಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾಣಿಸಿಕೊಳ್ಳಲಿದೆ. ಇದು 80 ಬಿಎಚ್‌ಪಿ ಉತ್ಪಾದಿಸಲಿದೆ. ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ 2016 ವರ್ಷಾಂತ್ಯದಲ್ಲಿ ಅಥವಾ 2017ರಲ್ಲಿ ಆಗಮನವಾಗಲಿದೆ.


Click it and Unblock the Notifications








