ಮಹೀಂದ್ರದಿಂದ ಎಕ್ಸ್‌ಯುವಿ500 ವಿಶೇಷ ಆವೃತ್ತಿ ?
ದೇಶದ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿರುವ ಮಹೀಂದ್ರ ಎಕ್ಸ್‌ಯುವಿ500 ವಿಶೇಷ ಆವೃತ್ತಿ ಬಿಡುಗಡೆಯಾಗುತ್ತಿದೆಯೇ? ಹೌದು, ಎನ್ನುತ್ತಿದೆ ವರದಿಗಳು. ದೇಶದ ಮುಂಚೂಣಿಯ ಎಸ್‌ಯುವಿ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ಎಕ್ಸ್‌ಯುವಿ500 ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.
ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ಎಕ್ಸ್‌ಯುವಿ500 ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಅಲ್ಲದೆ ಕೆಲವೊಂದು ಆಕರ್ಷಕ ಫೀಚರ್ಸ್ ಸೇರ್ಪಡೆಯಾಗಲಿದೆ. ಆದರೆ ತಾಂತ್ರಿಕವಾಗಿ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಹೊಸ ಸೀಮಿತ ಆವೃತ್ತಿ ಹೊರಂಗಣ ವಿನ್ಯಾಸದಲ್ಲಿ ಬದಲಾವಣೆ ಕಂಡುಬರಲಿದೆ. ಹಾಗೆಯೇ ಬಿಳಿ ಹೊರಮೈ ಹಾಗೂ ಕಪ್ಪು ವರ್ಣದ ಒಳಮೈ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು ಸಾಮಾನ್ಯ ಆವೃತ್ತಿಗಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳಲು ನೆರವಾಗಲಿದೆ.
ಇನ್ನು ರಿವರ್ಸ್ ಕ್ಯಾಮೆರಾ ಜತೆ ಸುಧಾರಿತ ಆರ್ಮ್ ರೆಸ್ಟ್ ಆರಾಮದಾಯಕ ಚಾಲನೆ ಪ್ರಧಾನ ಮಾಡಲಿದೆ. ಹಾಗಿದ್ದರೂ ಈ ಎಲ್ಲದರ ಬಗ್ಗೆ ಮಹೀಂದ್ರದಿಂದ ಇನ್ನಷ್ಟೇ ಅಧಿಕೃತ ಸೂಚನೆ ಹೊರಬೀಳಬೇಕಾಗಿದೆ.


Click it and Unblock the Notifications








