ಮಾರುಕಟ್ಟೆ ಕುಸಿತದ ನಡುವೆಯೂ ಮಾರುತಿ ಶೈನಿಂಗ್
ದೇಶದ ಪ್ರಾಯಾಣಿಕ ಕಾರು ಮಾರುಕಟ್ಟೆ ಹಿನ್ನಡೆಯಲ್ಲಿರಬಹುದು. ಆದರೆ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಈ ಎಲ್ಲ ಅಡೆತಡೆಗಳು ನಿವಾರಿಸುವಲ್ಲಿ ಯಶಸ್ವಿಯಾಗಿದೆ.
2013-14ನೇ ಆರ್ಥಿಕ ಸಾಲಿನ ಮೊದಲ ಒಂಬತ್ತು ತಿಂಗಳುಗಳ ಅವಧಿ ಪೂರ್ಣಗೊಂಡಾಗ ಒಟ್ಟಾರೆ ಮಾರ್ಕೆಟ್ ಶೇರು ಶೇಕಡಾ 6ರಷ್ಟು ಹೆಚ್ಚಳಗೊಳಿಸುವಲ್ಲಿ ಮಾರುತಿ ಯಶಸ್ಸನ್ನು ಕಂಡಿದೆ.

2012ರಲ್ಲಿ ತನ್ನ ಮಾನೇಸರ್ ಘಟಕದ ಮುಷ್ಕರದಿಂದಾಗಿ ಹಿನ್ನಡೆ ಅನುಭವಿಸಿದ್ದ ಮಾರುತಿ, ಮತ್ತೆ ಪುಟಿದೇಳುವಲ್ಲಿ ಯಶ ಕಂಡಿದೆ. ಈ ಮೂಲಕ ಡಿಸೆಂಬರ್ ವೇಳೆಯಾಗುವ ಶೇಕಡಾ 49.24ರಷ್ಟು ಮಾರುಕಟ್ಟೆ ಶೇರು ವಶಪಡಿಸಿಕೊಳ್ಳುವಲ್ಲಿ ಕಂಪನಿ ಯಶಸ್ವಿಯಾಗಿದೆ. ಒಂದು ವರ್ಷದ ಹಿಂದೆ ಇದು ಶೇಕಡಾ 43.85ರಷ್ಟಿತ್ತು.
ಈ ಎಲ್ಲ ಬೆಳವಣಿಗೆಗಳು ಒಟ್ಟಾರೆ ಪ್ರಯಾಣಿಕ ವಾಹನ ಮಾರುಕಟ್ಟೆಯು ಕಳೆದ ವರ್ಷಕ್ಕೆ ಹೋಲಿಸಿದಾಗ ಶೇಕಡಾ 9.6ರಷ್ಟು ಇಳಿಕೆ ಕಂಡಿರುವ ನಡುವೆಯೂ ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ. ಈ ಅವಧಿಯಲ್ಲಿ (ಎಪ್ರಿಲ್-ಡಿಸೆಂಬರ್) ಮಾರುತಿಯು ಒಟ್ಟು 6,37,000 ಯುನಿಟ್ ಮಾರಾಟ ಕಂಡುಕೊಂಡಿದೆ. ಮುಖ್ಯವಾಗಿಯೂ ಗ್ರಾಮೀಣ ಹಾಗೂ ಉಪನಗರಗಳನ್ನು ಕೇಂದ್ರಿಕರಿಸಿರುವ ಮಾರುತಿ ಈ ಪ್ರದೇಶಗಳಲ್ಲಿ ಶೇಕಡಾ 18ರಷ್ಟು ವೃದ್ಧಿ ದಾಖಲಿಸಿದೆ.


Click it and Unblock the Notifications








