12 ಕಾರುಗಳನ್ನು ಬಿಡುಗಡೆ ಮಾಡಲಿರುವ ಮಾರುತಿ

By Nagaraja

ಭಾರತದಲ್ಲಿ ಒಟ್ಟಾರೆ ವಾಹನ ಮಾರುಕಟ್ಟೆಯ ಶೇಕಡಾ ಅರ್ಧದಷ್ಟು ಶೇರುಗಳನ್ನು ಹೊಂದಿರುವ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ ಲಿಮೆಟೆಡ್, ಸಣ್ಣ ಕಾರು ವಿಭಾಗದಲ್ಲಿ ಮಾತ್ರ ತನ್ನ ಅಧಿಪತ್ಯ ಸ್ಥಾಪಿಸಿದೆ.

ಇದರಂತೆ ನೂತನ ಪ್ರತಿಸ್ಪರ್ಧಿಗಳ ಸವಾಲನ್ನು ಮನಗಂಡಿರುವ ಮಾರುತಿ ಸಂಸ್ಥೆಯು ತನ್ನ ಮಾರಾಟವನ್ನು ಇನ್ನಷ್ಟು ಕುದುರಿಸಿಕೊಳ್ಳುವ ಇರಾದೆಯಲ್ಲಿದೆ.

Maruti

ವರದಿಗಳ ಪ್ರಕಾರ ದೇಶದ ಅತ್ಯಂತ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯು 12 ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಬಾರಿ ಬಜೆಟ್ ಕಾರು ವಿಭಾಗದಿಂದ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿರುವ ಮಾರುತಿ, ಕಾಂಪಾಕ್ಟ್ ಎಸ್‌ಯುವಿ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಎಂಪಿವಿ ಬಿಡುಗಡೆ ಮಾಡುವ ಇರಾದೆ ಹೊಂದಿದೆ.

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮಾರುತಿ ಹೊಸ ಕಾರುಗಳು ಈ ದಶಕದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ನಿಮ್ಮ ಮಾಹಿತಿಗಾಗಿ ಮುಂದಿನ ವರ್ಷವು ಸಂಸ್ಥೆಯು ಬಹುನಿರೀಕ್ಷಿತ ಎಸ್‌ಎಕ್ಸ್4 ಎಸ್ ಕ್ರಾಸ್ ಮಾದರಿಯನ್ನು ಪರಿಚಯಿಸಲಿದೆ.

ಇದು 10 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಈ ಮಾದರಿಯು ರೆನೊ ಡಸ್ಟರ್, ನಿಸ್ಸಾನ್ ಟೆರನೊ ಹಾಗೂ ಮಹೀಂದ್ರ ಸ್ಕಾರ್ಪಿಯೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಹಾಗೆಯೇ 2016ನೇ ಸಾಲಿನಲ್ಲಿ ನಾಲ್ಕು ಮೀಟರ್ ಪರಿಧಿಯೊಳಗಿನ ಎಕ್ಸ್‌ಎ ಆಲ್ಪಾ ಕಾನ್ಸೆಪ್ಟ್ ಎಸ್‌ಯುವಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದು ನೇರವಾಗಿ ಫೋರ್ಡ್ ಇಕೊಸ್ಪೋರ್ಟ್ ಮತ್ತು ಟಾಟಾ ನೆಕ್ಸನ್ ಸವಾಲನ್ನು ಸ್ವೀಕರಿಸಲಿದೆ.

ಅಂದ ಹಾಗೆ ಸ್ವಲ್ಪ ತಡವಾಗಿಯಾದರೂ ಇತ್ತೀಚೆಗಷ್ಟೇ ಪ್ಯಾರಿಸ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿದ್ದ ಮಾರುತಿ ವಿಟಾರಾ 2018ರಲ್ಲಿ ಆಗಮನವಾಗಲಿದೆ. ಹಾಗೆಯೇ ಎಂಪಿವಿ ವಿಭಾಗದಲ್ಲಿ ಎರ್ಟಿಗಾಗಿಂತ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಹೊಸ ಮಾದರಿಯನ್ನು ಪರಿಚಯಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇದು ಈಗ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿರುವ ಇನ್ನೋವಾಗೆ ಎದುರಾಳಿಯಾಗಲಿದೆ.

ಇನ್ನುಳಿದಂತೆ ಸ್ವಿಫ್ಟ್ ಮೇಲ್ಗಡೆಯಾಗಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನಿರ್ಮಾಣದ ಬಗ್ಗೆಯೂ ಮಾಹಿತಿಯಿದೆ. ಇದು ವೈಆರ್‌ಎ ಎಂಬ ಕೋಡ್ ಪಡೆದುಕೊಂಡಿದೆ. ಅಲ್ಲದೆ ಹಗುರ ವಾಹನಗಳ ಬಿಡುಗಡೆಯತ್ತವೂ ಮಾರುತಿ ಚಿತ್ತ ಹರಿಸಿದೆ.

Article Published On: Saturday, October 11, 2014, 15:41 [IST]
English summary
Maruti to introduce new products to increase market share
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+