ಹೊಸ ಆಲ್ಟೊ ಕೆ10 ಕಾರಿಗೆ ಸ್ಪರ್ಧಿಗಳನ್ನು ಹಿಮ್ಮೆಟ್ಟುವ ಶಕ್ತಿ ಇದೆಯೇ?

By Nagaraja

ಸದಾ ಗ್ರಾಹಕ ಅಭಿರುಚಿಗೆ ತಕ್ಕಂತೆ ಜನ ಶ್ರೀಸಾಮಾನ್ಯರ ಕಾರುಗಳನ್ನು ಬಿಡುಗಡೆ ಮಾಡುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಕಳೆದ ವಾರವಷ್ಟೇ (ನವೆಂಬರ್ 04) ಮುಂದಿನ ಪೀಳಿಗೆಯ ಆಲ್ಟೊ ಕೆ10 ಮಾದರಿಯನ್ನು ಬಿಡುಗಡೆಗೊಳಿಸಿತ್ತು.

ಬೆಂಗಳೂರು (ಎಕ್ಸ್ ಶೋ ರೂಂ) ಬೆಲೆ ಮಾಹಿತಿ ಇಂತಿದೆ (ಲಕ್ಷ ರು.ಗಳಲ್ಲಿ)
ಆಲ್ಟೊ ಕೆ10 ಎಲ್‌ಎಕ್ಸ್ - 3.23
ಆಲ್ಟೊ ಕೆ10 ಎಲ್‌ಎಕ್ಸ್‌ಐ - 3.39
ಆಲ್ಟೊ ಕೆ10 ವಿಎಕ್ಸ್‌ಐ - 3.55
ಆಲ್ಟೊ ಕೆ10 ವಿಎಕ್ಸ್‌ಐ (ಒ) - 3.75
ಆಲ್ಟೊ ಕೆ10 ವಿಎಕ್ಸ್‌ಐ ಎಟಿ - 3.98


ಶಕ್ತಿಶಾಲಿ ಎಂಜಿನ್
ಹೊಸ ಆಲ್ಟೊ ಕೆ10 ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದು 998 ಸಿಸಿ ಪೆಟ್ರೋಲ್ ಜೊತೆಗೆ ಸಿಎನ್‌ಜಿ ಇಂಧನ ಆಯ್ಕೆಯನ್ನು ಪಡೆದುಕೊಳ್ಳಲಿದೆ. ಆದರೆ ಸದ್ಯಕ್ಕೆ ಡೀಸೆಲ್ ಎಂಜಿನ್ ಲಭ್ಯವಿರುವುದಿಲ್ಲ.

ಎಎಂಟಿ ಟ್ರಾನ್ಸ್‌ಮಿಷನ್
ಅದೇ ರೀತಿ ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಆಲ್ಟೊ ಕೆ10 ಪಡೆದುಕೊಳ್ಳಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋ ಗೇರ್ ಶಿಫ್ಟ್ ಆಯ್ಕೆಯನ್ನು ಪಡೆಯಲಿದೆ.

ಮೈಲೇಜ್, ಎಂಜಿನ್ ಸಾಮರ್ಥ್ಯ
ಆಲ್ಟೊ ಕೆ10 67 ಅಶ್ವಶಕ್ತಿ ಉತ್ಪಾದಿಸಲಿದ್ದು, (90 ಎನ್‌ಎಂ ಪೀಕ್ ಟಾರ್ಕ್) ಪ್ರತಿ ಲೀಟರ್‌ಗೆ 24.07 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವಿನ್ಯಾಸ
ಆಲ್ಟೊ ಕೆ10 ಫೇಸ್‌ಲಿಫ್ಟ್ ಮಾದರಿಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಇದಕ್ಕೆ ಹೆಚ್ಚು ಕ್ರೀಡಾತ್ಮಕ ಶೈಲಿಯನ್ನು ನೀಡಲಾಗಿದ್ದು, ಕಾರಿನ ಒಳಗೂ ಒಳಗೂ ಬದಲಾವಣೆ ಕಂಡುಬಂದಿದೆ.


ಪ್ರಮುಖ ವೈಶಿಷ್ಟ್ಯಗಳು
ದೇಹ ಬಣ್ಣದ ಬಂಪರ್, ಡೋರ್ ಮಿರರ್, ಡೋರ್ ಹ್ಯಾಂಡಲ್,
ಕ್ರೋಮ್ ಫ್ರಂಟ್ ಗ್ರಿಲ್,
ಬಿ ಪಿಲ್ಲರ್ ಜೊತೆಗೆ ಬ್ಲ್ಯಾಕ್ ಔಟ್ ಟೇಪ್,
ಇಂಧನ ವೀಲ್ ಕವರ್,
ಫ್ಲೋರ್ ಕನ್ಸಾಲ್ ಜೊತೆಗೆ ಕಪ್ ಹೋಲ್ಡರ್,
ಅಸಿಸ್ಟ್ ಗ್ರಿಪ್,
ಕ್ಯಾಬಿನ್ ಲೈಟ್,
ಎಸಿ ಜೊತೆ ಹೀಟರ್ ಆಯ್ಕೆ,
ಪವರ್ ಸ್ಟೀರಿಂಗ್, ಕೀಲೆಸ್ ಎಂಟ್ರಿ, ಸೆಂಟ್ರಲ್ ಡೋರ್ ಲಾಕಿಂಗ್, ಟೈಲ್‌ಗೇಟ್ ಮತ್ತು ಫ್ಯೂಯಲ್ ಲಿಡ್ ಓಪನರ್
ಹೆಡ್‌ಲ್ಯಾಂಪ್ ವಾರ್ನಿಂಗ್,
ಆಡಿಯೋ ಸಿಸ್ಟಂ ಜೊತೆ ಎರಡು ಸ್ಪೀಕರ್
next gen alto k10

ಸುರಕ್ಷತೆ
ಡ್ರೈವ್ ಸೈಡ್ ಏರ್ ಬ್ಯಾಗ್,
ಫಾಗ್ ಲ್ಯಾಂಪ್,
ಫ್ರಂಟ್ ಡಿಸ್ಕ್ ಬ್ರೇಕ್,
ಎಂಜಿನ್ ಇಂಮೊಬಿಲೈಜರ್,
ಸ್ಲೈಡ್ ಡೋರ್ ಇಂಪಾಕ್ಟ್ ಬೀಮ್,
ಚೈಲ್ಡ್ ಫ್ರೂಪ್ ರಿಯರ್ ಡೋರ್ ಲಾಕ್,
ತ್ರಿ ಪಾಯಿಂಟ್ ಇಎಲ್‌ಆರ್ ಸೀಟ್ ಬೆಲ್ಟ್

ಒಟ್ಟಿನಲ್ಲಿ ಶೇಕಡಾ 15ರಷ್ಟು ಅಧಿಕ ಇಂಧನ ದಕ್ಷತೆ ನೀಡಲು ಸಾಮರ್ಥ್ಯ ಹೊಂದಿರುವ ಹೊಸ ತಲೆಮಾರಿನ ಆಲ್ಟೊ ಕೆ10 ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಇಯಾನ್ 1.0, ದಟ್ಸನ್ ಗೊ ಮತ್ತು ಷೆವರ್ಲೆ ಸ್ಪಾರ್ಕ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Article Published On: Monday, November 10, 2014, 9:22 [IST]
English summary
Maruti Suzuki has launched its next-gen Alto K10 hatchback in Bangalore last week. The Japanese manufacturer has given its Alto K10 a much needed facelift. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+