ಕ್ಲಚ್ ಸಮಸ್ಯೆ; ಬಹು ಬೇಡಿಕೆಯ ಸಿಯಾಝ್ ರಿಕಾಲ್

By Nagaraja

ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾರುತಿ ಸುಜುಕಿ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ನಡುವೆಯೇ ದೇಶದ ಅತಿ ದೊಡ್ಡ ಪ್ರಯಾಣಿಕ ವಾಹನ ತಯಾರಿಕ ಸಂಸ್ಥೆಗೆ ಹಿನ್ನೆಡೆ ಎದುರಾಗಿದೆ.

ಹೌದು, ಮಾರುತಿಯ ಜನಪ್ರಿಯ ಸಿಯಾಝ್ ಕಾರಲ್ಲಿ ಕ್ಲಚ್ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಈ ಬಹುಬೇಡಿಕೆಯ ಮಾದರಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದೆ.


ಸಂಸ್ಥೆಯ ಸ್ಪಷ್ಟನೆ ಏನು?
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಯು, ಕ್ಲಚ್ ಓಪರೇಷನ್ ಸಿಸ್ಟಂ‌ಗೆ ಸಂಬಂಧಿಸಿದ ಘಟಕದಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಶಂಕೆಯಿದ್ದು, ಇದನ್ನು ಸೂಕ್ತವಾಗಿ ಪರಿಶೀಲಿಸಿ ಬದಲಾಯಿಸಲಾಗುವುದು. ಇದಕ್ಕಾಗಿ ಸಿಯಾಝ್ ಸರ್ವಿಸ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಯಾವ ಮಾದರಿ?
ಮಾರುತಿ ಸಿಯಾಝ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವ್ಯವಸ್ಥೆ ಹೊಂದಿರುವ ಕಾರಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ. 2014 ನವೆಂಬರ್ 7ರ ವರೆಗೆ ನಿರ್ಮಾಣವಾದ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಶಂಕೆಯಿದೆ.

maruti suzuki ciaz

ಎಷ್ಟು ಯುನಿಟ್?
ಮಾರುತಿ ಪ್ರಕಾರ 3,796 ಮಾರುತಿ ಸುಜುಕಿ ಸಿಯಾಝ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಮಾದರಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಬಗ್ಗೆ ಶಂಕೆಯಿದೆ.

ಸಿಯಾಝ್ ಸರ್ವೀಸ್ ಅಭಿಯಾನ
ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ಮೇಲೆ ತಿಳಿಸಿದ ಮಾದರಿಗಳನ್ನು ಸರ್ವೀಸ್ ಅಭಿಯಾನದಲ್ಲಿ ಪರಿಶೀಲಿಸಲಾಗುವುದು. ಈ ಸಂಬಂಧ ಮಾರುತಿ ಡೀಲರುಗಳು ಗ್ರಾಹಕರನ್ನು ಸಂಪರ್ಕಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಇವನ್ನೂ ಓದಿ: ಖರೀದಿಗೂ ಮುನ್ನ ಸಿಯಾಝ್ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ

ಜಾಗತಿಕವಾಗಿ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ತಮ್ಮ ನಿರ್ದಿಷ್ಟ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಲ್ಲಿ ರಿಕಾಲ್ ಕರೆಯನ್ನು ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಮೂಲಕ ಗ್ರಾಹಕರಿಗೆ ಎದುರಾಗುವ ಸಂಭವನೀಯ ಅನಾನುಕೂಲತೆಯನ್ನು ತಪ್ಪಿಸಲಾಗುತ್ತದೆ.

maruti ciaz rear

ಉಚಿತ ಸೇವೆ
ಮಾರುತಿ ಸಂಸ್ಥೆಯ ಪ್ರಕಾರ ಸರ್ವಿಸ್ ಅಭಿಯಾನದಲ್ಲಿ ಈ ಎಲ್ಲ ಕಾರ್ಯಗಳನ್ನು ಸಂಪೂರ್ಣ ಉಚಿತವಾಗಿ ಸರಿಪಡಿಸಿಕೊಡಲಾಗುವುದು. ಇದರಿಂದ ಗ್ರಾಹಕರಿಗೆ ಯಾವುದೇ ರೀತಿಯ ಹೊರೆ ಉಂಟಾಗುವುದಿಲ್ಲ.

ನಿಮ್ಮ ಸಿಯಾಝ್ ಕಾರಲ್ಲೂ ತೊಂದರೆ ಇದೆಯೇ?
ಅಷ್ಟಕ್ಕೂ ನಿಮ್ಮ ಮಾರುತಿ ಸಿಯಾಝ್ ಕಾರಲ್ಲೂ ತೊಂದರೆ ಕಾಣಿಸಿಕೊಂಡಿದೆಯೇ? ಇದಕ್ಕಾಗಿ ಇಲ್ಲಿ ಕೊಟ್ಟಿರುವ ಮಾರುತಿ ಸುಜುಕಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಪರಿಶೀಲಿಸಿರಿ.

ನೀವೇನು ಮಾಡಬೇಕು?
ಮಾರುತಿ ಹೋಮ್ ಪೇಜ್‌ನಲ್ಲೇ ಸರ್ವಿಸ್ ಅಭಿಯಾನದ ಲಿಂಕ್ ಕೊಡಲಾಗಿದ್ದು ಇದನ್ನು ಕ್ಲಿಕ್ಕಿಸಿದರೆ ಸಿಯಾಜ್ ಸರ್ವೀಸ್ ಅಭಿಯಾದ ಪುಟ ತೆರೆದುಕೊಳ್ಳುತ್ತದೆ. ಬಳಿಕ ಗ್ರಾಹಕರು 14 ಅಂಕಿನ ಚಾಸೀ ನಂಬರ್ (MA-3 ಬಳಿಕ) ದಾಖಲಿಸಿ ಚೆಕ್ ಬಟನ್ ಒತ್ತಿರಿ. ನಿಮ್ಮ ವಾಹನ ಚಾಸೀ ನಂಬರನ್ನು ವಾಹನ ದಾಖಲಾತಿ ಪುಸಕ್ತದಿಂದ ಪಡೆಯಬಹುದು.

ವಿ.ಸೂ: ನಿಮಗಿನ್ನು ಸಂದೇಹವಿದ್ದಲ್ಲಿ ಹತ್ತಿರ ಮಾರುತಿ ಡೀಲರುಗಳನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿಕೊಳ್ಳಿರಿ.

Article Published On: Monday, December 1, 2014, 15:57 [IST]
English summary
Maruti Suzuki India Limited will proactively undertake a Service Campaign to inspect a suspected fault and replace the relevant part of clutch operation system of a batch of 3,796 Ciaz (manual transmission) cars. These cars are among those manufactured till 7th November 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+