ಮಾರುತಿ ಸುಜುಕಿ ಘಟಕಗಳಿಗೆ ಬೀಗ?
ಶೀರ್ಷಿಕೆ ಕೇಳಿ ಗಾಬರಿಯಾಗದಿರಿ. ವಿಷಯ ಏನೆಂದರೆ ನಿರ್ವಹಣೆಯ ನಿಮಿತ್ತ ಗುರ್ಗಾಂವ್ ಹಾಗೂ ಮಾನೇಸರ್‌ನಲ್ಲಿ ಆರು ಘಟಕಗಳಿಗೆ ಬೀಗ ಜಡಿಯಲು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿರ್ಧರಿಸಿದೆ.
ನಿರ್ವಹಣೆಯ ಹಿನ್ನಲೆಯಲ್ಲಿ ಜೂನ್ ತಿಂಗಳಲ್ಲಿ ಎಂಟು ದಿನಗಳ ಕಾಲ ಘಟಕವನ್ನು ಮುಚ್ಚುಗಡೆಗೊಳಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಸದ್ಯ ನಾವೀನ್ಯತೆಗೆ ಯೋಜನೆಗೆ ಮುಂದಾಗುತ್ತಿರುವ ಮಾರುತಿ ಘಟಕದ ನಿರ್ವಹಣೆಗೂ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದೆ.

ವಾರ್ಷಿಕವಾಗಿ 15 ಲಕ್ಷ ಯುನಿಟ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಮಾರುತಿ, ಜೂರನ್ 22ರಿಂದ 29ರ ವರೆಗೆ ಈ ನಿರ್ದಿಷ್ಟ ಆರು ಘಟಕಗಳನ್ನು ಮುಚ್ಚುಗಡೆಗೊಳಿಸಲಿದೆ.
ಇದೇ ಸಂದರ್ಭದಲ್ಲಿ ಟಾಟಾ ಮೋಟಾರ್ಸ್, ಅಶೋಕ್ ಲೇಲ್ಯಾಂಡ್ ಹಾಗೂ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಗಳು ಸಹ ಇದಕ್ಕೆ ಸಮಾನವಾದ ನಡೆಯನ್ನು ಅನುಸರಿಸುವ ಬಗ್ಗೆ ಮಾಹಿತಿಗಳು ಬಂದಿದೆ.


Click it and Unblock the Notifications