ನೆಕ್ಸ್ಟ್ ಜನರೇಷನ್ ಆಲ್ಟೊ ಕೆ10 ನಂ.4ರಂದು ಬಿಡುಗಡೆ
ದೇಶದ ವಾಹನ ಪ್ರೇಮಿಗಳಲ್ಲಿ ಭಾರಿ ಕುತೂಹಲವನ್ನುಂಟು ಮಾಡಿರುವ ನೆಕ್ಸ್ಟ್ ಜನರೇಷನ್ ಮಾರುತಿ ಆಲ್ಟೊ ನವೆಂಬರ್ 10ರಂದು ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಕಾರು ಮಾರುತಿಯ ಕ್ರಾಂತ್ರಿಕಾರಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಪಡೆದುಕೊಳ್ಳಲಿದೆ.
ಸೆಲೆರಿಯೊ ಮಾದರಿಯಲ್ಲೂ ಇದೇ ಎಎಂಟಿ ಟ್ರಾನ್ಸ್‌ಮಿಷನ್ ಪರಿಚಯಿಸಿದ್ದ ಮಾರುತಿ ಅತ್ಯಧಿಕ ಸಂಖ್ಯೆಯ ಮಾರಾಟ ಗಿಟ್ಟಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಸ್ಮರ್ಧಾತ್ಮಕ ದರಗಳಲ್ಲಿ ಆಲ್ಟೊ ಕೆ10 ಎಎಂಟಿ ವರ್ಷನ್ ಬಿಡುಗಡೆಯಾದ್ದಲ್ಲಿ 'ಹಾಟ್ ಕೇಕ್' ತರಹನೇ ಮಾರಾಟವಾಗಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಇದರೊಂದಿಗೆ ಸೆಲೆರಿಯೊ, ಸಿಯಾಝ್ ಸೆಡಾನ್ ಕಾರಿನ ಬಳಿಕ ಪ್ರಸಕ್ತ ಸಾಲಿನಲ್ಲಿ ಮಗದೊಂದು ಬೃಹತ್ ಬಿಡುಗಡೆಗೆ ಮಾರುತಿ ಸಜ್ಜಾಗುತ್ತಿದೆ. ದೇಶದ್ಯಾಂತ ಹರಡಿರುವ ಮಾರುತಿ ಡೀಲರುಗಳ ಬಳಿ ಆಲ್ಟೊ ಕೆ10 ಬುಕ್ಕಿಂಗ್ ಜೋರಾಗಿಯೇ ನಡೆಯುತ್ತಿದೆ.
ನೆಕ್ಸ್ಟ್ ಜನರೇಷನ್ ಆಲ್ಟೊ ಕೆ10, ತ್ರಿ ಸಿಲಿಂಡರ್ 1.0 ಲೀಟರ್ ಕೆ ಸಿರೀಸ್ ಎಂಜಿನ್ ಪಡೆದುಕೊಳ್ಳಲಿದ್ದು, 67.04 ಅಶ್ವಶಕ್ತಿ (90 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಹೆಚ್ಚಿನ ಇಂಧನ ಕ್ಷಮತೆಯನ್ನು ನೀಡಲಿದೆ.
ಪೆಟ್ರೋಲ್ ಜೊತೆಗೆ ಸಿಎನ್‌ಜಿ ಇಂಧನ ಆಯ್ಕೆ ಕೂಡಾ ಇರಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಎಎಂಟಿ ಆಯ್ಕೆ ಇರಲಿದೆ. ವರದಿಗಳ ಪ್ರಕಾರ ಟಾಪ್ ಎಂಡ್ ವೆರಿಯಂಟ್‌ನಲ್ಲಿ ಮಾತ್ರ ಎಎಂಟಿ ಆಯ್ಕೆ ಇರಲಿದೆ.


Click it and Unblock the Notifications








