ಮಾರುತಿ ಎಸ್‌ಎಕ್ಸ್4 ಎಸ್-ಕ್ರಾಸ್ 2015ರಲ್ಲಿ ಲಾಂಚ್

By Nagaraja

ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ಆಯೋಜನೆಯಾಗಿದ್ದ 2014 ಆಟೋ ಎಕ್ಸ್ ಪೋದಲ್ಲಿ ಕೆಲವೊಂದು ಕುತೂಹಲದಾಯಕ ಮಾದರಿಗಳನ್ನು ಮಾರುತಿ ಸುಜುಕಿ ಪ್ರದರ್ಶಿಸಿತ್ತು. ಇವುಗಳಲ್ಲಿ ಒಂದಾಗಿರುವ ಎಸ್‌ಎಕ್ಸ್4 ಎಸ್ ಕ್ರಾಸ್ ಕ್ರಾಸೋವರ್ ಮಾದರಿಯನ್ನು 2015 ವರ್ಷಾರಂಭದಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಪರಿಚಯಿಸುತ್ತಿದೆ.

ಎಸ್‌ಎಕ್ಸ್4 ಸೆಡಾನ್ ಕಾರಿನ ತಲಹದಿಯಲ್ಲಿ ಎಸ್‌ಎಕ್ಸ್4 ಎಸ್ ಕ್ರಾಸ್ ಮಾದರಿಯನ್ನು ತಯಾರಿಸಲಾಗಿದೆ. ಈಗಾಗಲೇ ಜಾಗತಿಕವಾಗಿ ಅನೇಕರ ಮಾರುಕಟ್ಟೆಗಳಿಗೆ ಪರಿಚಯಿಸಿರುವ ಮಾರುತಿ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲೂ ಈ ಮಾದರಿಯನ್ನು ಬಿಡುಗಡೆಗೊಳಿಸಿತ್ತು.

Maruti Suzuki SX4 S cross

ಇದೀಗ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ 2015 ವರ್ಷಾರಂಭದಲ್ಲಿ ಮಾರುತಿ ಸುಜುಕಿ ಎಸ್‌ಎಕ್ಸ್4 ಎಸ್ ಕ್ರಾಸ್ ಭಾರತ ಪ್ರವೇಶ ಪಡೆಯಲಿದೆ. ಇದು ಪ್ರಮುಖವಾಗಿಯೂ ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಇದು 13ರಿಂದ 14 ಲಕ್ಷ ರು.ಗಳಿಂದ ನಿಯಂತ್ರಿಸಲ್ಪಡಲಿದೆ. ಅಂದರೆ ಮಹೀಂದ್ರ ಎಕ್ಸ್‌ಯುವಿ 500 ಸವಾಲನ್ನು ಎದುರಿಸಲು ಈ ಕ್ರಾಸೋವರ್ ಸಜ್ಜಾಗಲಿದೆ.

ಅಂದ ಹಾಗೆ ಎಸ್ ಕ್ರಾಸ್‌ನಲ್ಲಿ ಫಿಯೆಟ್‌ನ 1.6 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗುವುದು. ಇದು 118 ಅಶ್ವಶಕ್ತಿ ಉತ್ಪಾದಿಸುವ (314 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಟ್ರಾನ್ಸ್‌ಮಿಷನ್ ಜೊತೆಗೆ ಸುಜುಕಿಯ ಆಲ್ ಗ್ರಿಪ್ ಸಿಸ್ಟಂ ಸಹ ಇರಲಿದೆ.

ಇನ್ನುಳಿದಂತೆ ಎಲ್‌ಇಡಿ ಡಿಆರ್‌ಎಲ್ (ಡೇಟೈಮ್ ರನ್ನಿಂಗ್ ಲೈಟ್ಸ್), 16 ಇಂಚಿನ ವೀಲ್ಸ್, ಸ್ಕಿಡ್ ಪ್ಲೇಟ್ ಹಾಗೂ ಬಾಡಿ ಕ್ಲಾಡಿಂಗ್ ಇರಲಿದೆ. ಹಾಗೆಯೇ ಕಾರಿನೊಳಗೆ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಪ್ರೀಮಿಯಂ ಲೆಥರ್ ಸೀಟು, ಪ್ರೀಮಿಯಂ ಆಡಿಯೋ ಸಿಸ್ಟಂ ಹಾಗೂ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಸೌಲಭ್ಯವಿರಲಿದೆ.

More from DriveSpark

Article Published On: Tuesday, May 13, 2014, 14:22 [IST]
English summary
Maruti Suzuki had revealed quite a few interesting models at the 2014 Auto Expo in Delhi. Among them was their new crossover vehicle, which is based on the their SX4 sedan. The Japanese manufacturer calls their new crossover the SX4 S-Cross.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+