ಮಾರುತಿ ಹಗುರ ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ಮಾರಾಟ ಜಾಲ

Written By:

ಹಗುರ ವಾಣಿಜ್ಯ ವಾಹನಗಳಿಗೆ (ಎಲ್‌ಸಿವಿ) ಪ್ರತ್ಯೇಕ ಮಾರಾಟ ಜಾಲ ರೂಪಿಸಲು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿರ್ಧರಿಸಿದೆ.

ವರದಿಗಳ ಪ್ರಕಾರ ಮುಂದಿನ ವರ್ಷದಿಂದ ಇದು ಕಾರ್ಯಾಚರಿಸಲಿದೆ. ಕಾರು ಹಾಗೂ ಎಲ್‌ಸಿವಿ ಖರೀದಿ ಮಾಡುವ ಸಾಮಾನ್ಯ ಗ್ರಾಹಕರ ಅಗತ್ಯಗಳು ವಿಭಿನ್ನವಾಗಿರುವುದರಿಂದ ಎರಡರ ವ್ಯಾಪಾರ ಜೊತೆಯಾಗಿ ಕೆಲಸ ಮಾಡಲ್ಲ. ಹಾಗಾಗಿ ಪ್ರತ್ಯೇಕ ಪ್ರತ್ಯೇಕ ವಿತರಕ ಜಾಲವನ್ನು ತೆರೆದುಕೊಳ್ಳಲು ನಿರ್ಧರಿಸಿದೆ.

To Follow DriveSpark On Facebook, Click The Like Button
maruti suzuki lcv

ನಿಧಾನವಾಗಿ ಹಗುರ ವಾಣಿಜ್ಯ ವಾಹನಗಳ ವಿಭಾಗಕ್ಕೂ ಕಾಲಿಟ್ಟಿರುವ ಮಾರುತಿ ಸುಜುಕಿ, ತನ್ನ ಸಾನಿಧ್ಯವನ್ನು ಗಟ್ಟಿಪಡಿಸುವ ಇರಾದೆ ಹೊಂದಿದೆ.

ಮುಂದಿನ ವರ್ಷ ಹಗುರ ಭಾರತದ ವಾಹನ ಬಿಡುಗಡೆ ಮಾಡಲಿರುವ ಮಾರುತಿ, ಡೀಸೆಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ನೀಡಲಿದೆ.

ಮಾರುತಿಯ ಹೊಸ ಮಿನಿ ಟ್ರಕ್ ಪಾಕಿಸ್ತಾನ, ಚೀನಾ ಹಾಗೂ ಇಂಡೋನೇಷ್ಯಾಗಳಂತಹ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿರುವ ಕ್ಯಾರಿ ಎಲ್‌ಸಿವಿ ವಾಹನದ ತಳಹದಿಯಲ್ಲಿ ರೂಪುಗೊಳ್ಳಲಿದೆ. ಅಲ್ಲದೆ ದೇಶದ ವಾಹನ ಮಾರುಕಟ್ಟೆಗೆ ಅಗತ್ಯಗಳಿನುಸಾರವಾಗಿ ಬದವಾವಣೆ ತರಲಾಗುವುದು.

ಮಾರುತಿಯ ಹರಿಯಾಣ ಘಟಕದಲ್ಲಿ ಉತ್ಪಾದನೆಯಾಗಲಿರುವ ಹೊಸ ಎಲ್‌ಸಿವಿ, ಟಾಟಾ ಏಸ್, ಮಹೀಂದ್ರ ಮ್ಯಾಕ್ಸಿಮೊ, ಪಿಯಾಜಿಯೊ ಆಪೆ ಹಾಗೂ ಅಶೋಕ್ ಲೇಲ್ಯಾಂಡ್ ದೋಸ್ತ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

English summary
Maruti Suzuki has decided to set up a separate sales network for its Light Commercial Vehicle (LCV) business, which is to start next year.
Story first published: Tuesday, December 23, 2014, 12:37 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark