ಮಧ್ಯಮ ಹಾಗೂ ಘನ ವಾಣಿಜ್ಯ ವಾಹನಗಳ ಮಾರಾಟ ವೃದ್ಧಿ
ಮಧ್ಯಮ ಹಾಗೂ ಘನ ವಾಣಿಜ್ಯ ವಾಹನಗಳ (ಎಚ್‌ಸಿವಿ) ಮಾರಾಟವು ಆಗಸ್ಟ್ ತಿಂಗಳಲ್ಲಿ ಏರಿಕೆ ಕಂಡಿದೆ. ಇಂತಹದೊಂದು ಉತ್ತಮ ಬೆಳವಣಿಗೆ 29 ತಿಂಗಳ ಬಳಿಕ ಕಂಡುಬಂದಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಪ್ರಯಾಣಿಕ ಕಾರು ಮಾರುಕಟ್ಟೆ ಸಹ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಇನ್ನೊಂದೆಡೆ ವಾಣಿಜ್ಯ ವಾಹನಗಳು ಸಹ ಉತ್ತಮ ಮಾರಾಟ ದಾಖಲಿಸಿದೆ.

ಭಾರತೀಯ ವಾಹನ ತಯಾರಕರ ಒಕ್ಕೂಟದ (ಸಿಯಾಮ್) ವರದಿಗಳ ಪ್ರಕಾರ ದೇಶದ ವೃದ್ಧಿ ದರ 5.7ಕ್ಕೆ ಏರಿಕೆ ಕಂಡಿದ್ದು, ಅಲ್ಲದೆ ಹೊಸ ಹೊಸ ಮೂಲಸೌಕರ್ಯ ಯೋಜನೆಗಳಿಗಾಗಿ ಟ್ರಕ್‌ಗಳ ಅಗತ್ಯವಿದ್ದು, ಇದರಂತೆ ಮಾರಾಟದಲ್ಲೂ ಏರಿಕೆಯಾಗಿದೆ ಎಂದಿದೆ.
ಸಿಯಾಮ್ ಉಪ ಮಹಾ ನಿರ್ದೇಶಕರಾಗಿರುವ ಸುಗಟೊ ಸೆನ್ ಪ್ರಕಾರ, ಭಾರತೀಯ ವಾಹನೋದ್ಯಮ ಪುನಶ್ಚೇತನದ ಹಾದಿಯಲ್ಲಿದ್ದು, ಆದರೆ ಬೆಳವಣಿಗೆ ಮಾತ್ರ ಸ್ವಲ್ಪ ನಿಧಾನವಾಗಿದೆ ಎಂದಿದ್ದಾರೆ.
ಅಂದ ಹಾಗೆ ಮಧ್ಯಮ ಹಾಗೂ ಘನ ವಾಣಿಜ್ಯ ವಾಹನ ವಿಭಾಗವು ಶೇಕಡಾ 20.40ರಷ್ಟು ಏರಿಕೆ ಕಂಡಿದ್ದು, ಅನುಕ್ರಮವಾಗಿ 14,273 ಹಾಗೂ 11,855 ಯುನಿಟ್‌ಗಳ ಮಾರಾಟ ಕಂಡಿದೆ. ಆದರೆ ಬಸ್ ಮಾರಾಟವು ಶೇಕಡಾ 25.77ರಷ್ಟು (2682) ಇಳಿಕೆ ಕಂಡಿದೆ.


Click it and Unblock the Notifications