ಬೆಂಗಳೂರಿನಲ್ಲಿ ಬೆಂಝ್ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕ ಆರಂಭ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಗೆ ನಿರಂತರ ಅಂತರಾಳದಲ್ಲಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಬದ್ಧವಾಗಿದ್ದು, ಇದರಂತೆ 2014ನೇ ವರ್ಷವನ್ನು 'ಇಯರ್ ಆಫ್ ಎಕ್ಸ್‌ಲೆನ್ಸ್' ಎಂದು ಘೋಷಿಸಿತ್ತು.

ಇದರಂತೆ ಪ್ರಸಕ್ತ ಸಾಲಿನಲ್ಲಿ ಅನೇಕ ಮಾದರಿಗಳನ್ನು ಪರಿಚಯಿಸಿರುವ ಬೆಂಝ್ ಸಂಸ್ಥೆಯೀಗ ಬೆಂಗಳೂರಿನಲ್ಲಿ ಹೊಸತಾದ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕ ತೆರೆದುಕೊಂಡಿದೆ. ಇದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸ್ಥಿತಗೊಂಡಿದೆ.


ಮರ್ಸಿಡಿಸ್ ಬೆಂಝ್ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕ ಇಂಡಿಯಾವು (ಎಂಬಿಆರ್‌ಡಿಐ) 2014 ಡಿಸೆಂಬರ್ 9ರಂದು ಶುಭಾರಂಭಗೊಂಡಿದೆ. 2,66,000 ಚದರ ಅಡಿ ಜಾಗದಲ್ಲಿ ಹಬ್ಬಿರುವ ಇಲ್ಲಿ 2400ರಷ್ಟು ನೌಕರರು ಕೆಲಸ ನಿರ್ವಹಿಸಲಿದ್ದಾರೆ.
mercedes benz

ಈ ಸಂದರ್ಭದಲ್ಲಿ ಮಾತನಾಡಿರುವ ಮರ್ಸಿಡಿಸ್ ಬೆಂಝ್ ಟೆಲಿಮ್ಯಾಟಿಕ್ಸ್ ಕಾರ್ಸ್ ಡೆವಲಪ್‌ಮೆಂಟ್ ಬಾಡಿ, ಸೇಫ್ಟಿ ಉಪಾಧ್ಯಕ್ಷರಾಗಿರುವ ಥಾಮಸ್ ಮರ್ಕರ್, ತಮ್ಮ ಜಾಗತಿಕ ಸಂಶೋಧನಾ ಹಾಗೂ ಅಭಿವೃದ್ಧಿಯಲ್ಲಿ ಭಾರತ ಘಟಕವು ನಿರ್ಣಾಯಕ ಪಾತ್ರ ವಹಿಸಲಿದೆ. ಇದು ಭೆಂಝ್ ಭಾರತ ಆರ್ ಆಂಡ್ ಡಿ ಘಟಕದಲ್ಲಿ ಮಗದೊಂದು ಮೈಲುಗಲ್ಲಾಗಿದೆ ಎಂದಿದ್ದಾರೆ.

ಜರ್ಮನಿಯ ಹೊರಗಿರುವ ಅತಿ ದೊಡ್ಡ ಆರ್ ಆಂಡ್ ಡಿ ಘಟಕದ ಶ್ರೇಯ ಎಂಬಿಆರ್‌ಡಿಐ ಗೆ ಸಲ್ಲುತ್ತದೆ.

Article Published On: Tuesday, December 9, 2014, 14:55 [IST]
English summary
German luxury car maker Mercedes-Benz inaugurate their second facility dedicated to research and development. This facility is situated in Whitefield, Bangalore. It is part of their 'Year of Excellence' philosophy fro India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+