8 ಐಷಾರಾಮಿ ಕಾರುಗಳನ್ನು ಪರಿಚಯಿಸಲಿರುವ ಬೆಂಝ್
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಎಂಟು ನೂತನ ಮಾದರಿಗಳನ್ನು ಪರಿಚಯಿಸಲಿದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.
ಕಳೆದ ಬಾರಿಗಿಂತಲೂ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ಯೋಜನೆಯ ಅಂಗವಾಗಿ ಬೆಂಝ್‌ನಿಂದ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ. ಅಷ್ಟೇ ಅಲ್ಲದೆ ದೇಶದಲ್ಲಿ ಐಷಾರಾಮಿ ಕಾರುಗಳಿಗೂ ಬೇಡಿಕೆ ಹೆಚ್ಚುತ್ತಲೇ ಇದೆ.

2013ನೇ ಸಾಲು ಬೆಂಝ್ ಪಾಲಿಗೆ ಅತ್ಯಂತ ಯಶಸ್ವಿ ವರ್ಷವಾಗಿತ್ತು. ಈ ಅವಧಿಯಲ್ಲಿ ಬೆಂಝ್ ಮಾರಾಟವು ಶೇಕಡಾ 32ರಷ್ಟು ವರ್ಧಿಸಿತ್ತು. ಪ್ರಸ್ತುತ ಸಾಲಿನಲ್ಲಿ ಈ ಸಂಖ್ಯೆ ದ್ವಿಗುಣಗೊಳಿಸುವುದು ಕಂಪನಿ ಇರಾದೆಯಾಗಿದೆ.
ಬೆಂಝ್‌ನಿಂದ ಸದ್ಯದಲ್ಲೇ ಆಗಮನವಾಗಲಿರುವ ವಾಹನಗಳ ಪೈಕ್ ಕಾಂಪಾಕ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್, ಜಿಎಲ್‌ಎ ಮತ್ತು ಸೆಡಾನ್ ಸಿಎಲ್‌ಎ ಕ್ಲಾಸ್ ಕಾರುಗಳು ಪ್ರಮುಖವಾಗಿದೆ. ಅಷ್ಟೇ ಅಲ್ಲದೆ ಎಸ್‌ಯುವಿ ಪ್ರಧಾನ್ಯತೆಯನ್ನು ಅರಿತುಕೊಂಡಿರುವ ನೆಕ್ಸ್ಟ್ ಜನರೇಷನ್ ಜಿಎಲ್‌ಕೆ ಸಹ ನಿಕಟ ಭವಿಷ್ಯದಲ್ಲೇ ಲಾಂಚ್ ಮಾಡಲಿದೆ.


Click it and Unblock the Notifications