ಭವಿಷ್ಯದಲ್ಲಿ ಬೆಂಝ್‌ನಿಂದ ಬರಲಿದೆ ಸಂಪೂರ್ಣ ಎಲೆಕ್ಟ್ರಿಕ್ ಕಾರು
ಎಸ್-ಕ್ಲಾಸ್ ಹೈಬ್ರಿಡ್ ವರ್ಷನ್ ಅಭಿವೃದ್ಧಿಯಲ್ಲಿ ತೊಡಗಿರುವ ಮರ್ಸಿಡಿಸ್ ಬೆಂಝ್ ಮುಂದಿನ ವರ್ಷ ಈ ಬಹುನಿರೀಕ್ಷಿತ ಆವೃತ್ತಿಯನ್ನು ಪರಿಚಯಿಸಲಿದೆ.
ಈ ನಡುವೆ ಮಗದೊಂದು ಸಿಹಿ ಸುದ್ದಿ ಬಂದಿದ್ದು, ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯು ವಿದ್ಯುತ್ ಚಾಲಿತ ಎಸ್ ಕ್ಲಾಸ್ ಕಾರನ್ನು ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡಲಿದೆ.

ಈ ಬಗ್ಗೆ ಮಾಹಿತಿ ಕೊಟ್ಟಿರುವ ಬೆಂಝ್ ಐಷಾರಾಮಿ ವಾಹನ ತಯಾರಕ ಸಂಸ್ಥೆಯು, ನಿಕಟ ಭವಿಷ್ಯದಲ್ಲೇ ಸಂಪೂರ್ಣ ಎಲೆಕ್ಟ್ರಿಕ್ ಕಾರನ್ನು ಲಾಂಚ್ ಮಾಡುವುದಾಗಿ ತಿಳಿಸಿದೆ.
ಸೂಕ್ತವಾದ ಬ್ಯಾಟರಿ ತಂತ್ರಜ್ಞಾನದ ಕೊರತೆಯೇ ಎಸ್ ಕ್ಲಾಸ್ ಎಲೆಕ್ಟ್ರಿಕ್ ಕಾರಿನ ಹಿನ್ನಡೆಗೆ ಕಾರಣವಾಗಿತ್ತು. ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರಿನಲ್ಲಿ ಲಭ್ಯವಾಗುವ ಸೌಲಭ್ಯಗಳು ನಿರ್ಣಯವಾಗಲಿದೆ. ಹಾಗಾಗಿ ಬ್ಯಾಟರಿಗೆ ಹೆಚ್ಚು ಖರ್ಚು ತಗಲಿರುವುದರಿಂದ ಅದರಲ್ಲಿ ಲಭ್ಯವಾಗುವ ಸೌಕರ್ಯಗಳಿಗೆ ಕತ್ತರಿ ಪ್ರಯೋಗವಾಗಲಿದೆ. ಇದು ಸಹ ಹಿನ್ನಡೆಯನ್ನುಂಟು ಮಾಡಿತ್ತು.
ಇವೆಲ್ಲ ಸಮಸ್ಯೆಗಳಿದ್ದರೂ ಭವಿಷ್ಯದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ಕಾರನ್ನು ನಿರ್ಮಿಸುವ ಯೋಜನೆಯನ್ನು ಬೆಂಝ್ ಹೊಂದಿರುವುದು ಆಶಾದಾಯಕವಾಗಿದೆ.


Click it and Unblock the Notifications








