ಹೆಚ್ಚು ಶಕ್ತಿಯುತ ಬೆಂಝ್ ಎಸ್‌ಎಲ್400 ಲಾಂಚ್
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ನೂತನ ಎಸ್‌ಎಲ್400 ಸ್ಪೋರ್ಟ್ ಕಾರನ್ನು ಲಾಂಚ್ ಮಾಡಿದೆ. ಇದು ಹಳೆಯ ಎಸ್‌ಎಲ್350 ಸ್ಥಾನವನ್ನು ತುಂಬಲಿದೆ. ಎಸ್‌ಎಲ್ ಕ್ಲಾಸ್‌ನಲ್ಲಿ ಬೆಂಝ್‌ನ ಹೊಸ ಎಂಟ್ರಿ ಇದಾಗಿದ್ದು, ಹೆಚ್ಚು ಶಕ್ತಿಯುತವೆನಿಸಲಿದೆ. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಜುಲೈ ತಿಂಗಳಲ್ಲಿ ವಿತರಣೆ ಆರಂಭವಾಗಲಿದೆ.
ನೂತನ ಎಸ್‌ಎಲ್400, 2996 ಸಿಸಿ ಸಿಕ್ಸ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 333 ಅಶ್ವಶಕ್ತಿ (480 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂದರೆ ಇದು ಹಿಂದಿನ ಎಸ್‌ಎಲ್350 ಮಾದರಿಗಿಂತಲೂ 27 ಅಶ್ವಶಕ್ತಿ ಹೆಚ್ಚು (110 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಇಯು6 ಎಮಿಷನ್ ಮಟ್ಟವನ್ನು ಕಾಯ್ದುಕೊಂಡಿರುವ ಈ ಶಕ್ತಿಶಾಲಿ ಎಸ್‌ಎಲ್400 ಕೇವಲ 5.2 ಸೆಕೆಂಡುಗಳಲ್ಲಿ ಗಂಟೆಗೆ 63 ಮೈಲ್ ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗರಿಷ್ಠ ಗಂಟೆಗೆ 155 ಮೈಲ್ ವೇಗದಲ್ಲಿ ಸಂಚರಿಸಲಿದೆ.
ಇನ್ನು ಇಂಧನ ಕ್ಷಮತೆ ಬಗ್ಗೆ ಮಾತನಾಡುವುದಾದ್ದಲ್ಲಿ ಪ್ರತಿ ಗ್ಯಾಲನ್‌ಗೆ 39 ಮೈಲ್ ನೀಡಲಿದೆ. ಇನ್ನುಳಿದಂತೆ ಫ್ರಂಟ್ ಬಾಸ್ ಆಡಿಯೋ ಸಿಸ್ಟಂ, ಮ್ಯಾಜಿಕ್ ವಿಷನ್ ಕಂಟ್ರೋಲ್, ಡಿಎಬಿ ಜತೆ ಟೈರ್ ಪ್ರೆಷರ್ ಮಾನಿಟರಿಂಗ್ ಜತೆಗೆ ಎಎಜಿ ವಿಭಾಗದ 19 ಇಂಚು 5 ಸ್ಪೋಕ್ ಅಲಾಯ್ ವೀಲ್ ಕೂಡಾ ಇರುತ್ತದೆ.
ಅಂತಿಮವಾಗಿ ನೂತನ ಎಸ್‌ಎಲ್400 ಆವೃತ್ತಿಯು 72,500 ಪೌಂಡ್‌ಗಳಷ್ಟು ದುಬಾರಿಯೆನಿಸಲಿದೆ. ಅಂತೆಯೇ ಜುಲೈ ತಿಂಗಳಿಂದ ವಿತರಣೆ ಆರಂಭವಾಗಲಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








