ಭಲೆ ಭೇಷ್ ಮಿಟ್ಸುಬಿಸಿ; ದೇಶಕ್ಕೆ 2 ಹೊಸ ಕಾರು
ನಾವು ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ಅಥವಾ ಮಹೀಂದ್ರ ಆಂಡ್ ಮಹೀಂದ್ರಗಳಂತಹ ಪ್ರಯಾಣಿಕ ವಾಹನ ತಯಾರಿಕ ಸಂಸ್ಥೆಗಳ ಹೆಸರಲ್ಲದೆ ಇತರ ಯಾವುದೇ ವಾಹನ ತಯಾರಕ ಸಂಸ್ಥೆಗಳ ಹೆಸರನ್ನು ಕೇಳಲು ಇಷ್ಟಪಡುವುದಿಲ್ಲ.
ಯಾಕೆ ಹೀಗಾಗುತ್ತದೆ? ಬೆಳೆದು ಬರುತ್ತಿರುವ ಇಡೀ ಜಗತ್ತಿನ ಕಣ್ಣೇ ಭಾರತದತ್ತ ನೆಟ್ಟಿರುವಾಗ ನಾವು ಅಂತಹ ವಾಹನ ತಯಾರಕ ಸಂಸ್ಥೆಗಳನ್ನು ಎರಡು ಕೈಯಗಳಿಂದ ಬರಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯ.

ಇಂತಹ ಸಂಸ್ಥೆಗಳ ಸಾಲಿನಲ್ಲಿ ಜಪಾನ್ ಮೂಲದ ಪ್ರಖ್ಯಾತ ಮಿಟ್ಸುಬಿಸಿ ಕೂಡಾ ಗುರುತಿಸಿಕೊಂಡಿದೆ. ಇತ್ತೀಚೆಗಷ್ಟೇ ಪಜೆರೊ ಸ್ಪೋರ್ಟ್ಸ್ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ್ದ ಮಿಟ್ಸುಬಿಸಿ ಇನ್ನೆರಡು ಹೊಸ ಮಾದರಿಗಳನ್ನು ದೇಶಕ್ಕೆ ಪರಿಚಯಿಸಲಿದೆ.
ಈ ಮೂಲಕ ಇದುವರೆಗೆ ಎಸ್‌ಯುವಿ ಮಾತ್ರ ಸೀಮಿತ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿದ್ದ ಸಂಸ್ಥೆಯು ಸಣ್ಣ ಕಾರುಗಳತ್ತವೂ ತನ್ನ ಚಿತ್ತ ಹಾಯಿಸಿದೆ. ನಾವಿಲ್ಲಿ ಮಿಟ್ಸುಬಿಸಿ ಲಾನ್ಸರ್ ಹಾಗೂ ಸಿಡಿಯಾ ಮಾದರಿಗಳು ದೇಶಕ್ಕೆ ಈ ಹಿಂದೆ ಪರಿಚಯವಾಗಿರುವುದನ್ನು ಮರೆಯಬಾರದು.
ಅಷ್ಟಕ್ಕೂ ಮಿಟ್ಸುಬಿಸಿ ಭಾರತದಲ್ಲಿ ಬಿಡುಗಡೆ ಮಾಡುವ ಎರಡು ಜನಪ್ರಿಯ ಮಾದರಿಗಳು ಯಾವುದು ಗೊತ್ತೇ? ಅದುವೇ ಮಿರಾಜ್ (Mirage) ಹ್ಯಾಚ್‌ಬ್ಯಾಕ್ ಮತ್ತು ಅಟ್ರಾಜ್ (Attrage) ಸೆಡಾನ್. ಇದು 2016ರ ವೇಳೆಯಾಗುವಾಗ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಸದ್ಯ ಹಿಂದೂಸ್ತಾನ್ ಮೋಟಾರ್ಸ್ ಜೊತೆಗೆ ಒಡಂಬಡಿಕೆ ಹೊಂದಿರುವ ಮಿಟ್ಸುಬಿಸಿ ಒಪ್ಪಂದವು 2015ರಲ್ಲಿ ಕೊನೆಗೊಳ್ಳಲಿದೆ. ತದಾ ಬಳಿಕ ದೇಶದಲ್ಲಿ ಬೃಹತ್ ಯೋಜನೆಯನ್ನು ಹೊಂದಲಿದೆ. ಹಾಗೆಯೇ 2016ರಲ್ಲಿ ಎಸ್‌ಯುವಿ ಮಾದರಿಯನ್ನು ಪರಿಚಯಿಸುವ ಇರಾದೆಯಲ್ಲಿದೆ.
ಒಮ್ಮೆ ಮಿಟ್ಸುಬಿಸಿ ಮಿರಾಜ್ ಭಾರತ ಪ್ರವೇಶ ಪಡೆದ್ದಲ್ಲಿ ಇದು ನೇರವಾಗಿ ದೇಶದ ನಂ.1 ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿಯ ಸ್ವಿಫ್ಟ್, ಹ್ಯುಂಡೈ ಗ್ರಾಂಡ್ ಐ10 ಮತ್ತು ಫೋಕ್ಸ್‌ವ್ಯಾಗನ್ ಪೊಲೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ. ಹಾಗೆಯೇ ಅಟ್ರಾಜ್ ಮಾದರಿಯು ಟೊಯೊಟಾ ಎಟಿಯೋಸ್, ನಿಸ್ಸಾನ್ ಸನ್ನಿ ಮತ್ತು ಮಾರುತಿ ಸಿಯಾಝ್‌ಗಳಂತಹ ಮಾದರಿಗಳಿಗೆ ಸ್ಪರ್ಧಿಯಾಗಲಿದೆ.
ಆರಂಭದಲ್ಲಿ ಏಕೈಕ ಪೆಟ್ರೋಲ್ ಎಂಜಿನ್ ಮಾತ್ರ ಪರಿಚಯಿಸುವ ಇರಾದೆಯಲ್ಲಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಟ್ರಾಯ್ ಹಾಗೂ ಮಿರಾಜ್ ಕಾರಿನಡಿಯಲ್ಲಿ ಲಗತ್ತಿಸಲಾಗುವುದು. ಅಂತೆಯೇ ಮೊದಲು ಮ್ಯಾನುವಲ್ ಬಳಿಕ ಆಟೋಮ್ಯಾಟಿಕ್ ವೆರಿಯಂಟ್ ಎಂಟ್ರಿ ಕೊಡಲಿದೆ.


Click it and Unblock the Notifications








