ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಷಿ ಮೋಟಾರ್ಸ್ ಕಾರ್ಪೊರೇಷನ್ ತನ್ನ ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಕ್ರಾಸ್ಒವರ್ ಎಸ್‌ಯುವಿಯ ಹೊಸ ಪ್ಲಗ್-ಇನ್ ಹೈಬ್ರಿಡ್ (ಪಿಹೆಚ್‌ಇವಿ) ಮಾದರಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಈ ಹೊಸ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ (Mitsubishi Outlander PHEV) ಮಾದರಿಯು ಇದೇ ತಿಂಗಳ 28 ರಂದು ವರ್ಚುವಲ್ ಪ್ರೀಮಿಯರ್ ಮೂಲಕ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆಯಾಗಲಿದೆ. . ವಾಹನ ತಯಾರಕರು ಜಪಾನ್‌ನಲ್ಲಿ ಡಿಸೆಂಬರ್ ಮಧ್ಯದಲ್ಲಿ ವಾಹನದ ಮಾರಾಟವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಮಿಟ್ಸುಬಿಷಿ ತನ್ನ ಹೊಸ ವಿನ್ಯಾಸದ ಪರಿಕಲ್ಪನೆಯಡಿಯಲ್ಲಿ ಹೊಸ ಔಟ್‌ಲ್ಯಾಂಡರ್ ಅನ್ನು ಹೊಸ ತಲೆಮಾರಿನ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ಹೊರಗೆ ಆಕರ್ಷಕ ವಿನ್ಯಾಸನ್ನು ಹಂಚಿಕೊಂಡಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಕಾರನ್ನು ಹೆಚ್ಚು ಅಗ್ರೇಸಿವ್ ಆಗಿ ಮತ್ತು ಸೊಗಸಾಗಿ ಕಾಣುವಂತೆ ಮಾಡಲು ವಾಹನ ತಯಾರಕವು ಮುಂಭಾಗದ ವಿನ್ಯಾಸವನ್ನು ಅಪ್‌ಗ್ರೇಡ್ ಮಾಡಿದೆ. ಇದು ಮುಂಭಾಗದಿಂದ ಹಿಂಭಾಗದ ತುದಿಗೆ ದಪ್ಪವಾದ ಸಮತಲವಾದ ಅಸ್ಸೆಂಟ್ ಗಳನ್ನು ನೀಡಲಾಗಿದೆ. ಇನ್ನು ಫಾಂಟ್ ಲೈನ್ ಗಳನ್ನು ಹೊಂದಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಈ ಎಸ್‍ಯುವಿಯು 20-ಇಂಚಿನ ವ್ಹೀಲ್ ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದ ಫೆಂಡರ್ ಫ್ಲೇರ್‌ಗಳೊಂದಿಗೆ ಬರಲಿದ್ದು ಅದು ಹೆಚ್ಚು ಕಾರ್ಯಕ್ಷಮತೆಯನ್ನು ಆಧರಿಸಿದೆ. ಈ ಹೊಸ ಔಟ್‌ಲ್ಯಾಂಡರ್ ಪಿಎಚ್‌ಇವಿ ಹಿಂಭಾಗವು ಕಾರಿನ ಎರಡೂ ಅಂಚುಗಳಿಗೆ ವಿಸ್ತರಿಸಿರುವ ಸಮತಲ ವಿಷಯದ ಟೈಲ್‌ಲೈಟ್‌ಗಳನ್ನು ಹಿಂಬದಿಯಿಂದ ಹೆಚ್ಚು ಎದ್ದುಕಾಣುವ ನೋಟವನ್ನು ನೀಡುತ್ತದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಈ ಹೊಸ ಫ್ರಂಟ್ ಗ್ರಿಲ್ ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ರೇಜರ್-ತೆಳುವಾದ ಎಲ್ಇಡಿಗಳನ್ನು ಮೇಲೆ ಇರಿಸಲಾಗಿದ್ದು ಅದು ಡಿಆರ್ಎಲ್ ಮತ್ತು ಟರ್ನ್ ಸಿಗ್ನಲ್ ಗಳಾಗಿ ಕಾರ್ಯನಿರ್ವಹಿಸುತ್ತದೆ. ಆದರೆ 3-ಜೋನ್ ಲೈಟಿಂಗ್ ಎಲಿಮೆಂಟ್ ಹೊಂದಿರುವ ಮೈನ್ ಹೆಡ್ ಲ್ಯಾಂಪ್ ಅನ್ನು ಬಂಪರ್ ಮೇಲೆ ಕಡಿಮೆ ಇರಿಸಲಾಗಿದೆ. ಕೆಳಗಿನ ಹೆಡ್‌ಲ್ಯಾಂಪ್ ಯುನಿಟ್ ಎಲ್ಇಡಿ ಫಾಗ್ ಲ್ಯಾಂಪ್ ಗಳನ್ನು ಮತ್ತು ಹೈ,ಲೋ ಬೀಮ್ ಗಳನ್ನು ಹೊಂದಿವೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಹೊಸ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ ಮಾದರಿಯ ಒಳಭಾಗವನ್ನು ನವೀಕರಿಸಿದ್ದಾರೆ. ಕ್ಯಾಬಿನ್ ಸ್ಕಲಪಟಡ್ ಇನ್ಸ್ ಟ್ರೂಮೆಂಟ್ ಹೊಂದಿದ್ದು ಅದು ಚಾಲನೆ ಮಾಡುವಾಗ ಬಳಕೆದಾರರಿಗೆ ಕಾರಿನ ಸ್ಥಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತದೆ. ಸೆಂಟರ್ ಕನ್ಸೋಲ್ ಕೂಡ ಹೊಸ ವಿನ್ಯಾಸದೊಂದಿಗೆ ಸಿಂಕ್ ಮಾಡಲು ಗಮನಾರ್ಹ ಬದಲಾವಣೆಗಳನ್ನು ಕಂಡಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಬ್ರ್ಯಾಂಡ್, ಡೋರ್ ಪ್ಯಾನಲ್ ಗಾಗಿ, ವಿಶಾಲವಾದ ಪ್ರದೇಶವನ್ನು ಒಳಗೊಂಡ ಮೃದುವಾದ ಪ್ಯಾಡಿಂಗ್ ಅನ್ನು ಒದಗಿಸಿದೆ. ಮಾನಿಟರ್‌ಗಳು ಮತ್ತು ಗೇಜ್‌ಗಳನ್ನು ಚಾಲಕರಿಗೆ ನೋಡಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆಯ್ಕೆದಾರರು, ಡಯಲ್‌ಗಳು ಮತ್ತು ಸ್ವಿಚ್‌ಗಳನ್ನು ಬಳಕೆದಾರರಿಗೆ ಆತ್ಮವಿಶ್ವಾಸದ ಹಿಡಿತ ಮತ್ತು ಕಾರ್ಯಾಚರಣೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಗೆ ಮಾಹಿತಿ ನೀಡಿದರು.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಮಿಟ್ಸುಬಿಷಿ ವಾಹನವು 10 ಬಣ್ಣ ಆಯ್ಕೆಗಳಲ್ಲಿ ಬರುತ್ತದೆ ಮತ್ತು ಈ ಸಂಖ್ಯೆಯು ಡೈಮಂಡ್ ಕಲರ್ ಸರಣಿಯನ್ನು ಒಳಗೊಂಡಿದೆ ಎಂದು ತಿಳಿಸಿದೆ. ಇವುಗಳು ರೆಡ್ ಡೈಮೆಂಡ್, ವೈಟ್ ಡೈಮೆಂಡ್ ನತ್ತು ಹೊಸ ಬ್ಲ್ಯಾಕ್ ಡೈಮೆಂಡ್ ಎಂಬ ಬಣ್ಣಗಳ ಆಯ್ಜೆಗಳನ್ನು ಹೊಂದಿರುತ್ತದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಕಂಪನಿಯು ಕಾರಿನ ತಾಂತ್ರಿಕ ವಿಶೇಷತೆಗಳ ಬಗ್ಗೆ ಹೆಚ್ಚು ಬಹಿರಂಗಪಡಿಸಿಲ್ಲ. ಆದರೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಹೈಬ್ರಿಡ್ ಎಸ್‍ಯುವಿಯು ಸಂಪೂರ್ಣ ವಿಕಸನಗೊಂಡ ಹೊಸ ತಲೆಮಾರಿನ ಪಿಎಚ್‌ಇವಿ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಸುಧಾರಿತ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಚಾಲನಾ ಶ್ರೇಣಿಯೊಂದಿಗೆ ಹೈಬ್ರಿಡ್ ಮಾದರಿಯು ಹೆಚ್ಚು ಪವರ್ ಫುಲ್ ಮಾದರಿಯಾಗಿರುತ್ತದೆ ಎಂದು ಕಂಪನಿಯು ಹೇಳಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಔಟ್‌ಲ್ಯಾಂಡರ್ ಪಿಹೆಚ್‌ಇವಿ 2013ರಲ್ಲಿ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಿತು. ಬ್ರ್ಯಾಂಡ್ ಇದನ್ನು ವಿಶ್ವದ ಮೊದಲ ಪ್ಲಗ್-ಇನ್ ಹೈಬ್ರಿಡ್ ಎಸ್‍ಯುವಿ ಎಂದು ಕರೆದಿದೆ. ಇದು ಟ್ವಿನ್ ಮೋಟಾರ್ 4 ಡಬ್ಲ್ಯೂಡಿ ಸಿಸ್ಟಂ ಮತ್ತು 100ವಿ ಎಸಿ ಎಲೆಕ್ಟ್ರಿಕ್ ಸರಬರಾಜನ್ನು ಒಳಗೊಂಡಿರುವ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿತ್ತು.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಇದು 1,500ಡಬ್ಲ್ಯು ವರೆಗಿನ ಪವರ್ ಅನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿತ್ತು. ಈ ಎಸ್‍ಯುವಿಯ ಬ್ಯಾಟರಿ ಚಾರ್ಜ್ ಮೋಡ್ ಕಾರು ಸ್ಥಿರವಾಗಿದ್ದಾಗ ಅಥವಾ ಚಲಿಸುತ್ತಿರುವಾಗ ಬ್ಯಾಟರಿಯನ್ನು ಎಂಜಿನ್‌ನಿಂದ ಚಾರ್ಜ್ ಮಾಡಲು ಅನುಮತಿಸುತ್ತದೆ. ಬಿಡುಗಡೆಯಾದಾಗಿನಿಂದ ಔಟ್‌ಲ್ಯಾಂಡರ್ ಪಿಹೆಚ್‌ಇವಿ ವಿಶ್ವದ 60 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗಿದೆ ಎಂದು ವಾಹನ ತಯಾರಕರು ಹೇಳಿದ್ದಾರೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ಹೊಸ ತಲೆಮಾರಿನ ಔಟ್‌ಲ್ಯಾಂಡರ್ ಪಿಹೆಚ್‌ಇವಿಯ ಹೆಚ್ಚಿನ ತಾಂತ್ರಿಕ ಅಂಶವನ್ನು ಕಂಪನಿಯು ಬಹಿರಂಗಪಡಿಸಿಲ್ಲ.ಇನ್ನು ಸಾಮಾನ್ಯ ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಎಸ್‍ಯುವಿಯು 2021ರ ರೋಗ್‌ನಿಂದ ಪ್ಲಾಟ್‌ಫಾರ್ಮ್, ಎಂಜಿನ್ ಮತ್ತು ಹಲವಾರು ಆಂತರಿಕ ಭಾಗಗಳನ್ನು ಹಂಚಿಕೊಳ್ಳುತ್ತದೆ. ಈ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಎಸ್‍ಯುವಿಯು ಡೈನಾಮಿಕ್ ಶೀಲ್ಡ್ ಸ್ಟೈಲಿಂಗ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು ಎಂಗಲ್ಬರ್ಗ್ ಟೂರರ್ ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ Mitsubishi Outlander PHEV ಎಸ್‍ಯುವಿ

ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿಯ ಹೆಚ್ಚಿನ ತಾಂತ್ರಿಕ ಅಂಶವನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಇನ್ನು ಮಿಟ್ಸುಬಿಷಿ ಕಂಪನಿಯು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸಲಿದೆ. ಈ ಹೊಸ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ ಮಾದರಿಯು ಮೊದಲು ಕಂಪನಿಯ ತಾಯಿನಾಡು ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗುವುದು.

Most Read Articles

Kannada
English summary
New gen mitsubishi outlander phev design features global debut details
Story first published: Saturday, October 16, 2021, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X