ತಡೆಯಿರಿ; 2016ರಲ್ಲಿ ಮಿಟ್ಸುಬಿಸಿ ಹೈಬ್ರಿಡ್ ಕಾರು ಎಂಟ್ರಿ
ಜಪಾನ್ ವಾಹನ ತಯಾರಕ ಸಂಸ್ಥೆಯಾಗಿರುವ ಮಿಟ್ಸುಬಿಸಿ ಭಾರತದಲ್ಲಿ ಹೆಚ್ಚೇನು ಜನಪ್ರಿಯತೆ ಗಿಟ್ಟಿಸಿಕೊಂಡಿಲ್ಲ. ಹಾಗಿದ್ದರೂ ಹೈಬ್ರಿಡ್ ಕಾರು ಎಂದಾಕ್ಷಣ ಆ ಸುದ್ದಿಯನ್ನೊಮ್ಮೆ ಓದಿ ಬಿಡೋಣವೇ ಎಂಬ ಹಂಬಲವಿರುತ್ತದೆ.
ಹೌದು, ಜಾಗತಿಕವಾಗಿ ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳುತ್ತಿರುವ ಮಿಟ್ಸುಬಿಸಿ ಲ್ಯಾನ್ಸರ್ ಅಥವಾ ಇವೊ ಹೈಬ್ರಿಡ್ ಕಾರು 2016ನೇ ಸಾಲಿನಲ್ಲಿ ಆಗಮನವಾಗಲಿದೆ.

ರಾಲಿ ಕಾರುಗಳಿಗೆ ಹೆಸರುವಾಸಿಯಾಗಿರುವ ಲ್ಯಾನ್ಸರ್, ಅದ್ಭುತ ಚಾಲನಾ ಅನುಭವವನ್ನು ಪ್ರದಾನ ಮಾಡುತ್ತದೆ. ಇದೀಗ ಇವೊ X ಉತ್ತರಾಧಿಕಾರಿನ್ನು ಸಿದ್ಧಗೊಳಿಸುತ್ತಿರುವ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಇವೊ XI ಕಾರನ್ನು ಪರಿಚಯಿಸಲಿದೆ.
ತಾಜಾ ವಿನ್ಯಾಸ ಮಿಟ್ಸುಬಿಸಿ ಇವೊ XI ಆವೃತ್ತಿಯನ್ನು ಇನ್ನಷ್ಟು ಅಂದವಾಗಿಸಲಿದೆ. ಹಾಗೆಯೇ ಎಲ್ಲ ಆಧುನಿಕ ಕಾರುಗಳಲ್ಲಿ ಇರುವಂತೆಯೇ ಎಲ್‌ಇಡಿ ಹೆಡೆಲೈಟ್ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ


Click it and Unblock the Notifications








