ನರೇಂದ್ರ ಮೋದಿ ನನ್ನ ಹೀರೊ: ಫೋರ್ಡ್ ಮುಖ್ಯಸ್ಥ ಮುಲಾಲಿ
ಅಮೆರಿಕದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಮುಖ್ಯಸ್ಥ ಸ್ಥಾನದಿಂದ ನಿರ್ಗಮಿಸುತ್ತಿರುವ ಅಲನ್ ಮುಲಾಲಿ, ಆಸಕ್ತಿದಾಯಕ ಹೇಳಿಕೆಯೊಂದನ್ನು ಕೊಟ್ಟಿದ್ದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಹೀರೊಗಳಲ್ಲಿ ಓರ್ವರು ಎಂದು ಶ್ಲಾಘಿಸಿದ್ದಾರೆ.
ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಲನ್, ಆರ್ಥಿಕ ಪ್ರಗತಿಯತ್ತ ಮೋದಿ ಗಮನ ಕೇಂದ್ರಿಕೃತವಾಗಿರುವುದು ಭಾರತ ದೇಶಕ್ಕೆ ಶುಭಕರವಾಗಿ ಪರಣಮಿಸಲಿದ್ದಾರೆ ಎಂದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮೋದಿ ಕಾರ್ಯ ನಿರ್ವಹಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಲನ್, ಮೋದಿ ಶ್ರೇಷ್ಠ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಯಾಕೆಂದರೆ ಮೋದಿ ಆರ್ಥಿಕ ಪ್ರಗತಿಯಲ್ಲಿ ನಂಬಿಕೆಯನ್ನಿರಿಸಿಕೊಂಡಿದ್ದು, ಮೂಲಕ ಸೌಕರ್ಯದತ್ತ ಹೆಚ್ಚು ಗಮನ ಕೇಂದ್ರಿತರಾಗಿದ್ದಾರೆ ಎಂದು ಸೇರಿಸಿದರು.

ಫೋರ್ಡ್‌ನ ಚೆನ್ನೈ ಘಟಕದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೂಡುಗೆ ಸಮಾರಂಭದಲ್ಲಿ ಮುಲಾಲಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಫೋರ್ಡ್ ಭಾರತ ಮಾರುಕಟ್ಟೆಯನ್ನು ತುಂಬಾ ತಡವಾಗಿ ಪ್ರವೇಶಿಸಿತ್ತು ಎಂಬುದನ್ನು ಅವರು ಒಪ್ಪಿಕೊಂಡರು.

ಎಂಟು ವರ್ಷಗಳ ಹಿಂದೆ ಅಧಿಕಾರ ವಹಿಸಿದ್ದ ವೇಳೆ ಫೋರ್ಡ್ 17 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟದಲ್ಲಿತ್ತು. ಇದರಿಂದಾಗಿ ತವರೂರಾದ ಅಮೆರಿಕದಲ್ಲಿ ಇದನ್ನು ಸರಿದೂಗಿಸುವುದು ದೊಡ್ಡ ಸವಾಲಿನ ವಿಷಯವಾಗಿತ್ತು.

ಇದೇ ಸಂದರ್ಭದಲ್ಲಿ ದೇಶದಲ್ಲಿ ಫಿಗೊ ಹಾಗೂ ಇಕೊಸ್ಪೋರ್ಟ್ ಆವೃತ್ತಿಗಳಿಗೆ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂತ ಪ್ರಭಾವಿತನಾಗಿದ್ದೇನೆ ಎಂದಿದ್ದಾರೆ. ನಾವೀಗಲೂ 50ರಷ್ಟು ರಾಷ್ಟ್ರಗಳಿಗೆ ರಫ್ತು ಕಾರ್ಯ ಕೈಗೊಳ್ಳುತ್ತಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.

ಜಾಗತಿಕವಾಗಿ ಶೇಕಡಾ 60ರಷ್ಟು ಕಾರು ಮಾರಾಟವು ಸಣ್ಣ ಹಾಗೂ ಮಿಡ್ ವಿಭಾಗಳಿಂದ ನಡೆಯುತ್ತಿದೆ. ಇದು ಬಿ ಹಾಗೂ ಸಿ ವಿಭಾಗದ ವಾಹನಗಳನ್ನು ಒದಗಿಸಲು ಭಾರತಕ್ಕೆ ಫೋರ್ಡ್ ಸೂಕ್ತ ವೇದಿಕೆ ಒದಗಿಸಲಿದೆ ಎಂದಿದ್ದಾರೆ.

ಅದೇ ಹೊತ್ತಿಗೆ ಗುಜರಾತ್‌ನಲ್ಲಿ 4,000 ಕೋಟಿ ರು. ವೆಚ್ಚದಲ್ಲಿ ಫೋರ್ಡ್‌ನಿಂದ ನಿರ್ಮಾಣವಾಗಲಿರುವ ಸನಂದ್ ಘಟಕವು ಪ್ರಸಕ್ತ ಸಾಲಿನಲ್ಲೇ ತೆರೆದುಕೊಳ್ಳಲಿದೆ. ಗುಜುರಾತ್‌ನಲ್ಲಿ ವಾಣಿಜ್ಯ ವಾತಾವರಣವು ಅತ್ಯುತ್ತಮವಾಗಿದೆ. ಅಲ್ಲಿನ ನಾಯಕತ್ವ ವಾಣಿಜ್ಯ ವಾತಾವರಣ ನಿರ್ಮಾಣ ಮಾಡುವುದರಲ್ಲಿ ಬದ್ಧರಾಗಿದ್ದಾರೆ. ಯಾಕೆಂದರೆ ಇದರಿಂದಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಗುಜರಾತ್ ಸರಕಾರದಿಂದ ದೊರಕಿರುವ ಸಹಕಾರಕ್ಕೆ ನಾವು ಸಂಪೂರ್ಣ ತೃಪ್ತರಾಗಿದ್ದೇವೆ ಎಂದಿದ್ದಾರೆ.


Click it and Unblock the Notifications








