ನ್ಯಾಷನಲ್ ಜಿಯೋಗ್ರಾಫಿಕ್ ಸೂಪರ್ ಕಾರ್ಸ್‌ಗೆ ರೆಡಿಯಾಗಿರಿ!
ವಿಶ್ವ ಪ್ರಸಿದ್ಧ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್‌ನಲ್ಲಿ (ಎನ್‌ಜಿಸಿ) ಪ್ರಸಾರವಾಗಲಿರುವ ನಾಲ್ಕನೇ ಆವೃತ್ತಿಯ 'ನ್ಯಾಷನಲ್ ಜಿಯೋ ಸೂಪರ್ ಕಾರು' ಕಾರ್ಯಕ್ರಮಕ್ಕೆ ವಾಹನ ಪ್ರೇಮಿಗಳು ಬಹಳ ಕಾತರದಿಂದ ಕಾದು ಕುಳಿತಿದ್ದಾರೆ.
ಇಲ್ಲಿ ಜನಪ್ರಿಯ ಸೂಪರ್ ಕಾರುಗಳ ಸಂಪೂರ್ಣ ವಿಮರ್ಶೆ ನಡೆಯುತ್ತಿರುವುದು ಹೆಚ್ಚು ಆಸಕ್ತಿ ಕೆರಳಿಸಲು ಸಾಧ್ಯವಾಗಿದೆ. ಅಷ್ಟೇ ಯಾಕೆ ಈ ಸೂಪರ್ ಮಾಡೆಲ್ ಹಾಗೂ ನಟಿ ಲಿಸಾ ಹೇಡನ್ ಗ್ಲಾಮರಸ್ ಸ್ಪರ್ಶ ನೀಡುತ್ತಿರುವುದು ಇನ್ನು ವಿಶೇಷವೆನಿಸಿದೆ.

ಈ ಕಾರ್ಯಕ್ರಮವು ಅಕ್ಟೋಬರ್ 13ರಂದು ಆರಂಭವಾಗಲಿದ್ದು, ಭಾರತೀಯ ಕಾಲಮಾನ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿ ದಿನ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ. ಲಿ ರೆಹರ್‌ಮ್ಯಾನ್ ಆತಿಥ್ಯದಲ್ಲಿ ನೆರವೇರಲಿರುವ ಸ್ಪರ್ಧೆಯಲ್ಲಿ ವಿಶ್ವ ವಿಖ್ಯಾತ ರೇಸ್ ಚಾಲಕರಾದ ತನೆರ್ ಫೋಸ್ಟ್ ಮತ್ತು ಪಾಲ್ ಟ್ರಾಸಿ ಸವಾಲು ಸ್ವೀಕರಿಸಲಿದ್ದಾರೆ.

ಈ ವೇಳೆ ಸೂಪರ್ ಲೆಕ್ಸಸ್ ಐಎಸ್‌ಎಫ್ ಸವಾಲನ್ನು ಬಿಎಂಡಬ್ಲ್ಯು ಎಂ3 ಅದೇ ರೀತಿ ಜಾಯ್‌ರೈಡ್ ಫೋರ್ಡ್ ಜಿಟಿ ವಿರುದ್ಧ ಟೆಕ್ನೋಕ್ರಾಫ್ಟ್ ಲಂಬೋರ್ಗಿನಿ, ಫೆರಾರಿ ಕ್ಯಾಲಿಫೋರ್ನಿಯಾ ವಿರುದ್ಧ ಫೆರಾರಿ 430, ಕ್ಯಾಡಿಲ್ಯಾಕ್ ಸಿಟಿಎಸ್‌ವಿ ವಿರುದ್ದ ಮರ್ಸಿಡಿಸ್ ಬೆಂಝ್ ಇ63 ಎಎಂಜಿ ಮತ್ತು ಆಸ್ಟನ್ ಮಾರ್ಟಿನ್ ಡಿಬಿಎಸ್ ವಿರುದ್ಧ ಬೆಂಟ್ಲಿ ಸೂಪರ್‌ಸ್ಪೋರ್ಟ್ಸ್ ಕಾರು ಸ್ಪರ್ಧಿಸಲಿದೆ.

ಒಟ್ಟಿನಲ್ಲಿ ಈ ಸೂಪರ್ ಕಾರುಗಳ ಸ್ಪರ್ಧೆಯು ವಾಹನ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಮೇಲೆ ತಿಳಿಸಿದ ದಿನಾಂಕಗಳಲ್ಲಿ ಈ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಲು ಮರೆಯದಿರಿ.


Click it and Unblock the Notifications








