ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೆರಾರಿ ತಮ್ಮ ಪೋರ್ಟೊಫಿನೊ ಐಷಾರಾಮಿ ಕಾರನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.3.5 ಕೋಟಿಗೆ ನಿಗದಿಪಡಿಸಲಾಗಿದೆ. ಈ ಕಾರು ಕನ್ವರ್ಟಿಬಲ್ 2+2 ಕಾಂಫಿಗರೇಷನ್ ಮತ್ತು ಸಂಸ್ಥೆಯಲ್ಲಿನ ಎಂಟ್ರಿ ಲೆವೆಲ್ ಮಾಡಲ್ ಆಗಿದೆ.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಬಿಡುಗಡೆಗೊಂಡ ಹೊಸ ಫೆರಾರಿ ಪೋರ್ಟೊಫಿನೊ ಕಾರನ್ನು ಮೊದಲ ಬಾರಿಗೆ ಸಂಸ್ಥೆಯು ಕಳೆದ ವರ್ಷ ಇಟಲಿಯಲ್ಲಿ ತಮ್ಮ 70ನೆಯ ವಾರ್ಷಿಕೋತ್ವದಲ್ಲಿ ಬಹಿರಂಗಗೊಳಿಸಲಾಗಿತ್ತು.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಪೋರ್ಟೊಫಿನೊ ಕಾರು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದ್ದು, ಬೂಮರ್ಯಾಂಗ್ ಆಕಾರದಲ್ಲಿನ ಎಲ್ಇಡಿ ಹೆಡ್‍‍ಲ್ಯಾಂಪ್‍ಗಳು ಮತ್ತು ಚೂಪಾದ ಹಾಗು ಸ್ಪೋರ್ಟಿ ಬಂಪರ್‍‍ಗಳನ್ನು ಪಡೆದುಕೊಂಡಿದೆ. ಮತ್ತು ಈ ಕಾರು ಫೆರಾರಿಯ ಸಿಗ್ನೇಚರ್ ಸ್ಟೈಲಿಂಗ್ ಸೂಚನೆಗಳೊಂದಿಗೆ ಬರಲು ನಿರ್ವಹಿಸುತ್ತದೆ.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಈ ಕಾರಿನ ಬದಿಗಳಲ್ಲಿ ಕಾರ್ಬನ್-ಫೈಬರ್ ಸ್ಕರ್ಟ್ಸ್ ಮತ್ತು ಟೈಲ್ ಲ್ಯಾಂಪ್‍‍ಗೆ ಜೋಡಣೆ ಹೊಂದುವ ಹಾಗೆ ವ್ಹೀಲ್ ಆರ್ಚ್‍ಗಳನ್ನು ಹೊಂದಿದ್ದು, ಹಿಂಭಾಗದಲ್ಲಿ ಟ್ವಿನ್ ಟೈಲ್ ಲ್ಯಾಂಪ್ಸ್, ಕ್ವಾಡ್ ಎಕ್ಸಾಸ್ಟ್ ಸೆಟಪ್ ಮತ್ತು ಕೊಂಟೂರ್ಡ್ ಬೂಟ್ ಲಿಡ್‍‍ನ ಸಹಾಯದಿಂದ ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಐಷಾರಾಮಿ ಕಾರಿನ ಒಳಭಾಗದಲ್ಲಿ 2+2 ಸೀಟಿಂಗ್ ಅರೇಂಜ್ಮೆಂಟ್‍‍ನೊಂದಿಗೆ 10.2 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಪ್ಯಾಸ್ಸೆಂಜರ್‍‍ಗಳಿಗಾಗಿ 8.8 ಇಂಚಿನ ಸ್ಕ್ರೀನ್, ಆಪಲ್ ಕಾರ್‍‍ಪ್ಲೇ ಕನೆಕ್ಟಿವಿಟಿ ಮತ್ತು 18 ಮಾದರಿಗಳಲ್ಲಿ ಅಡ್ಜಸ್ಟ್ ಮಾಡಿಕೊಳ್ಳಬಹುದಾದ ಎಲೆಕ್ಟ್ರಿಕ್ ಸೀಟ್‍‍ಗಳು ಹಾಗು ಇನ್ನಿತರೆ ಐಷಾರಾಮಿ ಸೌಲತ್ತುಗಳನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಎಂಜಿನ್ ಸಾಮರ್ಥ್ಯ

ಫೆರಾರಿ ಪೊರ್ಟೊಫಿನೊ ಕಾರು 3.9 ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಸಹಾಯದಿಂದ 600ಬಿಹೆಚ್‍‍ಪಿ ಮತು 760ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಫೆರಾರಿ ಕಾರುಗಳಲ್ಲಿ ಎಂಟ್ರಿ ಲೆವೆಲ್ ಕಾರಾದ ಇದು ಗಂಟೆಗೆ 320 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ. ಹೊಸ ಚಾಸಿಸ್ ಅನ್ನು ಪಡೆದುಕೊಂಡಿರುವ ಈ ಕಾರು ಹಿಂದಿನ ತಲೆಮಾರಿನ ಕಾರಿಗಿಂತಾ ಸುಮಾರು 80 ಕೆಜಿ ಕಡಿಮೆ ತೂಕವನ್ನು ಒದಗಿಸುತ್ತದೆ.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಕನ್ವರ್ಟಿಬಲ್ ಆಗಿರುವುದರಿಂದ ಪೋರ್ಟೊಫಿನೊ ಲೋಹದ ಮಡಿಸುವ ಛಾವಣಿಯೊಂದಿಗೆ ಪಡೆದುಕೊಂಡಿದ್ದು, ಇದು ಗಂಟೆಗೆ 40 ಕಿ.ಮೀ ವೇಗದಲ್ಲಿ 14 ಸೆಕೆಂಡುಗಳಲ್ಲಿ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಕ್ಯಾಲಿಫೋರ್ನಿಯಾದೊಂದಿಗೆ ಹೋಲಿಸಿದರೆ ಕ್ಯಾಬಿನ್ನಲ್ಲಿನ ಪ್ರಕ್ಷುಬ್ಧತೆಯನ್ನು 30 ಪ್ರತಿಶತದಷ್ಟು ಕಡಿಮೆ ಮಾಡಲು ಪೋರ್ಟೊಫಿನೋದಲ್ಲಿ ಫೆರಾರಿ ಕೈಯಾರೆ ಹಿಂತೆಗೆದುಕೊಳ್ಳುವ ಟರ್ಬ್ಯುಲನ್ಸ್ ಅನ್ನು ಸಹ ನೀಡುತ್ತದೆ.

ಬಿಡುಗಡೆಗೊಂಡ ಫೆರಾರಿ ಪೋರ್ಟೊಫಿನೊ ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಹೊಸ ಫೆರಾರಿ ಪೋರ್ಟೊಫಿನೊ ಕಾರು ದೆಹಲಿ ಮತ್ತು ಮುಂಬೈ‍‍ನಲ್ಲಿನ ಅಧಿಕೃತ ಡೀಲರ್‍‍ಗಳ ಮುಖಾಂತರ ಖರೀದಿಸಬಹುದಾಗಿದ್ದು, ಈ ಕಾರು ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್, ಪೋರ್ಷೆ 911 ಟರ್ಬೋ ಕ್ಯಾಬ್ರಿಯೊಲೆಟ್ ಮತ್ತು ಆಡಿ ಆರ್8 ಸ್ಪೈಡರ್ ಐಷಾರಾಮಿ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Ferrari Portofino Launched In India; Priced At Rs 3.5 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X