ಫೆರಾರಿ ನೊಡಿ ಮೈಮರೆತ ಬಾಲಕನಿಗೆ ಅದರಲ್ಲೇ ಡ್ರೈವ್: ಬಾಲಕನ ಕನಸು ನನಸು ಮಾಡಿದ ಬಂಗಾರದ ಮನುಷ್ಯ

ಎಲ್ಲಾ ಸೂಪರ್‌ ಕಾರು, ದುಬಾರಿ ಬೈಕ್‌ಗಳನ್ನು ಹೊಂದಿರುವವರು ಬಾಲ್ಯವನ್ನು ಕಳೆದೇ ಈ ಎತ್ತರಕ್ಕೆ ಬೆಳೆದಿದ್ದು. ಹಾಗಾಗಿ ಬಾಲ್ಯದಲ್ಲಿ ಒಂದು ಸೂಪರ್‌ ಕಾರು ಅಥವಾ ಸೂಪರ್‌ ಬೈಕ್ ಕಂಡಾಗ ಮನಸಿನಲ್ಲಿ, ಒಂದು ರೈಡ್‌ ಸಿಕ್ಕರೆ ಹೇಗಿರುತ್ತದೆ? ದೊಡ್ಡವನಾದ ಮೇಲೆ ನನಗೂ ಆ ಕಾರು ಬೇಕು ಎಂದೆಲ್ಲಾ ಅಂದುಕೊಂಡಿರುತ್ತಾರೆ.

ಅಂದು ಹಾದು ಹೋದ ಸಂಗತಿಗಳು ಹಚ್ಚ ಹಸಿರಾಗಿ ಇಂದಿಗೂ ನೆನಪಿರುತ್ತದೆ. ಇಲ್ಲೊಬ್ಬ ವಿಶಾಲ ಹೃದಯದ ವ್ಯಕ್ತಿ, ಪುಟ್ಟ ಹುಡುಗನೊಬ್ಬ ತನ್ನ ಸೂಪರ್‌ ಕಾರನ್ನು ನೊಡಿ ಮೈಮರೆತಿದ್ದನ್ನು ತಿಳಿದು ಆ ಹುಡುಗನನ್ನು ಕರೆದು ತನ್ನ ಸೂಪರ್‌ ಕಾರಿನಲ್ಲಿ ಒಂದು ಡ್ರೈವ್‌‌ ಕರೆದುಕೊಂಡು ಹೋಗಿದ್ದಾನೆ.

Ferrari Owner Offers A Drive

ಹೌದು, ಇತ್ತೀಚೆಗೆ ಇನ್ಸ್ಟಾಗ್ರಾಂ ನಲ್ಲಿ ಆಟೋಮೋಟಿವ್ ಎಂಥುಸಿಯಾಸ್ಟಿಕ್ ಮತ್ತು ಬೋಯ್ಸ್‌ ಆ್ಯಂಡ್‌ ಮೆಷಿನ್ಸ್‌ ಇಂಡಿಯಾ ದ ಸ್ಥಾಪಕರಾದ ಸಿದ್ದಾರ್ಥ್‌ ಚತುರ್ವೇದಿ ಎಂಬಾತ ತನ್ನ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದರು. ಇದರಲ್ಲಿ ತನ್ನ ಫೆರಾರಿ 488 (Ferrari) ಸೂಪರ್‌ ಕಾರಿನ ಬಳಿ ಕಾರನ್ನು ನೋಡುತ್ತಿರುತ್ತಾನೆ.

ಇದನ್ನು ದೂರದಿಂದಲೇ ತನ್ನ ಕ್ಯಾಮೆರಾದಲ್ಲಿ ಶೂಟ್‌ ಮಾಡಿದ ಸಿದ್ದಾರ್ಥ್‌ ಚತುರ್ವೇದಿ, ನಂತರ ತನ್ನ ಕಾರಿನ ಬಳಿ ತೆರಳಿ ಆ ಹುಡುಗನ್ನು ತನ್ನ ಫೆರಾರಿ ಸೂಪರ್‌ ಕಾರಿನಲ್ಲಿ ಒಂದು ಡ್ರೈವ್‌ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಹುಡುಗ ತನಗಾದ ಆನಂದದಿಂದ ಸದಾ ನಗುತ್ತಿದ್ದು, ಆ ನಗು ಎಂತಹವರನ್ನೂ ಕರಗಿಸುವಂತಿದೆ.

ಒಬ್ಬ ವ್ಯಕ್ತಿಗೆ ತನ್ನ ಬುಹು ಕಾಲದ ಕನಸೊಂದು ನನಸಾದಾಗ ಎಷ್ಟು ಖುಷಿಯಾಗುತ್ತದೆ ಎಂದು ಆ ಹುಡುಗನ ನಗುವಿನಿಂದ ನೋಡುಗರಿಗೆ ತಿಳಿದು ಬರುತ್ತದೆ. ಜೊತೆಗೆ ಆ ಹುಡುಗನ ಕನಸನ್ನು ನನಸು ಮಾಡಿದ ಸಿದ್ದಾರ್ಥ್‌ ಚತುರ್ವೇದಿಗೂ ಈ ಸಂಧರ್ಭದಲ್ಲಿ ಕೃತಜ್ಞತೆಗಳನ್ನು ಹೇಳಲು ನಾವು ಮರೆಯಬಾರದು.

ಇನ್ನು ಆ ಹುಡುಗ ತನ್ನ ಸೂಪರ್‌ ಕಾರಿನಲ್ಲಿ ಕುಳಿತು ಆನಂದಿಸುತ್ತಿರುವ ಆ ಅನುಭವವನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ತನ್ನಕಾರನ್ನು ರೆಡ್‌ ಲೈನ್‌ಗೆ ಮುಟ್ಟಿಸುವುದನ್ನು ನಾವು ಕಾಣಬಹುದು. ಇದರಿಂದ ಕಾರಿನ ವೇಗ ಒಮ್ಮೆಲೇ ಹೆಚ್ಚಾಗುತ್ತಿದ್ದು ಆ ಹುಡುಗನ ಎಕ್ಸೈಟ್‌ಮೆಂಟ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂಬುದು ತಿಳಿಯುತ್ತದೆ.

ಇನ್ನು ವಿಡಿಯೋದಲ್ಲಿ ಕಂಡು ಬರುವ ಕಾರು ಫೆರಾರಿ ೪೮೮ ಜಿಟಿಬಿ. 2016 ರಲ್ಲಿ ಬಂದ ಈ ಕಾರು ಫೆರಾರಿ 458 ಇಟಾಲಿಯಾದ ಸಕ್ಸಸರ್‌ ಆಗಿ ಮಾರುಕಟ್ಟೆಯಲ್ಲಿದೆ. 3.9 ಲೀಟರ್‌ ಟರ್ಬೋ ಚಾರ್ಜ್‌ V8 ಎಂಜಿನ್‌ ಅನ್ನು ಹೊಂದಿದ್ದು ಇದು 660 ಬಿಹೆಚ್‌ಪಿ ಪವರ್‌ ಮತ್ತು 760 ಎನ್ಎಮ್‌ ಟಾರ್ಕನ್ನು ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 30, 2023, 11:29 [IST]
English summary
Ferrari owner offers a drive to a boy who admired his supercar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+