ಅಂಬಾನಿ ಸಮಾರಂಭದಲ್ಲಿ ಶಾರೂಖ್‌ಗೆ ವಿಶೇಷ ರಥ: ಈ ಫೆರಾರಿ ಕಾರಿನ ಬೆಲೆಗೆ 100 ಸ್ವಿಫ್ಟ್‌ ಬರುತ್ತದೆ!

ಸದ್ಯಕ್ಕೆ ದೇಶದಲ್ಲಿ ಸದ್ದು ಮಾಡುತ್ತಿರುವ ವಿಷಯವೆಂದರೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರುವ ಮುಖೇಶ್‌ ಅಂಬಾನಿಯವರ ಮಗ ಅನಂತ್‌ ಅಂಬಾನಿ ಪ್ರೀ ವೆಡ್ಡಿಂಗ್‌ ಸಮಾರಂಭ. ಬಾಲಿವುಡ್‌, ಹಾಲಿವುಡ್‌ ಸೇರಿದಂತೆ ವಿಶ್ವ ವಿಖ್ಯಾತ ಬ್ಯುಸಿನೆಸ್‌ ಮೆನ್ ಬಿಲ್‌ಗೇಟ್ಸ್‌ನಂತಹ ಹಲವು ಉದ್ಯಮಿಗಳು ಈ ಅಂಬಾನಿಯವರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇನ್ನು ಸಮಾರಂಭಕ್ಕೆ ಬರುವ ಉದ್ಯಮಿಗಳು ಮತ್ತು ಇತರ ಸೆಲಬ್ರಿಟಿಗಳನ್ನು ಕರೆತರಲು ಮತ್ತು ಡ್ರಾಪ್‌ ಮಾಡಲು ರೋಲ್ಸ್‌ರಾಯ್ಸ್‌, ಲ್ಯಾಂಬೋರ್ಗಿನಿ, ಪೋರ್ಶಾ ಸೇರಿದಂತೆ ಹಲವಾರು ಐಷಾರಾಮಿ ದುಬಾರಿ ಕಾರುಗಳನ್ನು ಬಳಸಲಾಗಿತ್ತು. ಹೀಗೆ ಬಳಸಿದ ಕಾರುಗಳಲ್ಲಿ ಎಲ್ಲರ ಗಮನ ಸೆಳೆದಿದ್ದು, ಬಾಲಿವುಡ್‌ ಸ್ಟಾರ್‌ ಶಾರೂಖ್‌ ಖಾನ್‌ ಅವರನ್ನು ಕರೆತರಲು ಮತ್ತು ಡ್ರಾಪ್‌ ಮಾಡಲು ಉಪಯೋಗಿಸಿದ ಕಾರು.

Ferrari Purosangue At Ananth Ambani s Event Set To Drop Sharukh Khan

ಹೌದು, ಅಂಬಾನಿ ಸಮಾರಂಭದಲ್ಲಿ ಬಾಲಿವುಡ್‌ ಸ್ಟಾರ್‌ ಶಾರೂಖ್ ಖಾನ್ ಅವರನ್ನು ಕೆಂಪು ಬಣ್ಣದ ಕಾರೊಂದರಲ್ಲಿ ಡ್ರಾಪ್‌ ಮಾಡಲಾಗಿತ್ತು. ಸಮಾರಂಭದಲ್ಲಿ ಸಾಕಷ್ಟು ಇತರ ಲಕ್ಷುರಿ ಕಾರುಗಳಿದ್ದರೂ, ಈ ಕಾರು ಮಾತ್ರ ಎಲ್ಲರ ಗಮನವನ್ನು ಸೆಳೆದಿತ್ತು. ಇಟಾಲಿಯನ್‌ ಸೂಪರ್‌ ಕಾರ್‌ ನಿರ್ಮಾಣ ಕಂಪನಿಯಾದ ಪ್ರಸಿದ್ದ ಫೆರಾರಿ ಕಂಪನಿಯ ಕಾರು ಇದೆಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಪೇಜ್‌ ಒಂದರಲ್ಲಿ ಹಂಚಿಕೊಂಡ ವಿಡಿಯೋ ಪ್ರಕಾರ, ಶಾರೂಖ್‌ ಖಾನ್‌ ಅವರನ್ನು ಡ್ರಾಪ್‌ ಮಾಡಲು ಬಳಸಿದ ಕಾರು ಫೆರಾರಿ ಪ್ಯೂರೆಸಾಂಗೆ ಎಂದು ತಿಳಿದು ಬಂದಿದೆ. ಶಾರೂಖ್‌ ಖಾನ್‌ ಅವರನ್ನು ಪಿಕ್‌ಅಪ್‌ ಮಾಡಲು ಈ ಕಾರು ಹೋಟೆಲ್‌ ಹೊರಗೆ ನಿಂತಿದ್ದು ಕಂಡು ಬಂದಿದೆ. ಬಳಿಕ ಈ ಕಾರಿನಲ್ಲಿ ಶಾರೂಖ್‌ ಖಾನ್‌ ಅನ್ನು ಏರ್‌ಪೋರ್ಟ್‌ಗೆ ಡ್ರಾಪ್‌ ಮಾಡಲಾಗಿದೆ.

Ferrari Purosangue At Ananth Ambani s Event Set To Drop Sharukh Khan

ಇನ್ನು ಶಾರೂಖ್‌ ಖಾನ್‌ ಅನ್ನು ಡ್ರಾಪ್‌ ಮಾಡಲಾದ ಫೆರಾರಿ ಪ್ಯೂರೆಸಾಂಗೆ ಬ್ರಾಂಡ್‌ ನ್ಯೂ ಕಾರಾಗಿದ್ದು, ಇದರ ಬೆಲೆ ಬರೋಬ್ಬರಿ 10.5 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಇದಕ್ಕಿಂತ ಮೊದಲು ಶಾರೂಖ್‌ ಖಾನ್‌ ಮತ್ತು ಕುಟುಂಬವನ್ನು ಜಮ್ನಾನಗರ್‌ ಏರ್‌ಪೋರ್ಟ್‌ ಇಂದ ಕರೆತರಲು ರೋಲ್ಸ್‌ರಾಯ್ಸ್‌ ಕಾರುಗಳನ್ನು ಕಳಿಸಿದ್ದರು.

ಫೆರಾರಿ ಪ್ಯೂರೆಸಾಂಗೆ ಕಾರು, ಫೆರಾರಿ ಕಂಪನಿ ಭಾರತದಲ್ಲಿ ಇತ್ತೀಚೆಗೆ ಲಾಂಚ್‌ ಮಾಡಿದ ಕಾರಾಗಿದೆ. ಇದು ಫೆರಾರಿ ತಯಾರಿಸುವ ಮೊದಲ ಎಸ್‌ಯುವಿ ಆಗಿದ್ದು, ಮಾರುಕಟ್ಟೆಯಲ್ಲಿ ಲ್ಯಾಂಬೋರ್ಗಿನಿ ಉರುಸ್‌, ಆಸ್ಟಿನ್ ಮಾರ್ಟಿನ್‌ ಡಿಬಿಎಕ್ಸ್‌ ರೀತಿಯ ಎಸ್‌ಯುವಿಗಳೊಂದಿಗೆ ಸ್ಪರ್ಧಿಸಲಿದೆ. ಪ್ಯೂರೆಸಾಂಗೆಯು ಒಂದು ಎಸ್‌ಯುವಿ ಆಗಿದ್ದರೂ, ಇದರ ಹೊರಭಾಗದಲ್ಲಿ ಫೆರಾರಿ ಸೂಪರ್‌ ಕಾರುಗಳ ವಿಷಯಗಳನ್ನು ಕಾಣಬಹುದಾಗಿದೆ.

Ferrari Purosangue At Ananth Ambani s Event Set To Drop Sharukh Khan

ಈ ಕಾರಿನ ಎಂಜಿನ್‌ ಮತ್ತು ಇತರ ವಿಶೇಷತೆಗಳನ್ನು ನೊಡುವುದಾದರೆ, ಇದರಲ್ಲಿ 6.5 ಲೀಟರ್‌,ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌ ಎಂಜಿನ್‌ ಸಿಗುತ್ತದೆ. ಇದರ ಸಹಾಯದಿಂದ ಸುಮಾರು 725 ಪಿಎಸ್‌ ಪವರ್‌ ಮತ್ತು 716 ಎನ್‌ಎಮ್‌ ಟಾರ್ಕ್‌ ಸಹ ಉತ್ಪಾದಿಸುತ್ತದೆ. 4 ಆಸನಗಳುಳ್ಳ ಈ V12 ಎಸ್‌ಯುವಿಯ ಎಕ್ಸ್‌ಶೋ ರೂಮ್‌ ಬೆಲೆ ಸುಮಾರು 10.5 ಕೋಟಿ ರೂಪಾಯಿಗಳು.

ಇನ್ನು ಈ ಎಸ್‌ಯುವಿ ಕಾರಿನ ಮಾಲೀಕ ಯಾರೆಂದು ಇಲ್ಲಿಯವರೆಗೂ ತಿಳಿದಿಲ್ಲವಾದರೂ, ಇದು ಮುಖೇಶ್‌ ಅಂಬಾನಿಯವರ ಕಾರು ಆಗಿರಬಹುದು ಎಂಬ ಮಾತುಗಳು ಕೇಳಿ ಬರುತತ್ಇದೆ. ಈಗಾಗಲೇ ಹಲವಾರು ಲಕ್ಷುರಿ ಕಾರುಗಳನ್ನು ಹೊಂದಿರುವ ಮುಖೇಶ್‌ ಅಂಬಾನಿ ಈ ಬಹುಕೋಟಿ ಬೆಲೆಯ ಕಾರನ್ನು ಕೊಂಡಿದ್ದರೂ ಆಶ್ಚರ್ಯವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 7, 2024, 17:49 [IST]
English summary
Ferrari purosangue at ananth ambanis event set to drop sharukh khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+