ಮುಂದಿನ ಜನಾಂಗದ ಬ್ರಿಯೊದಲ್ಲಿ ಹೊಸ ಡೀಸೆಲ್ ಎಂಜಿನ್ ಬಳಕೆ

By Nagaraja

ಜನಪ್ರಿಯ ಅಮೇಜ್ ಹಾಗೂ ಸಿಟಿ ಮಾದರಿಗಳಿಗೆ ಲಭಿಸಿರುವ ಅಮೋಘ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿರುವ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ತನ್ನ ಮುಂದಿನ ಜನಾಂಗದ ಬ್ರಿಯೊ ಸಣ್ಣ ಕಾರಿನಲ್ಲಿ ಡೀಸೆಲ್ ಎಂಜಿನ್ ಆಳವಡಿಸಲು ನಿರ್ಧರಿಸಿದೆ.

ನಿಮ್ಮ ಮಾಹಿತಿಗಾಗಿ, ಭಾರತದಲ್ಲಿ ಅಮೇಜ್ ಕಾಂಪಾಕ್ಟ್ ಕಾರನ್ನು ಬಿಡುಗಡೆಗೊಳಿಸಿದ್ದ ಹೋಂಡಾ ಸಂಸ್ಥೆಯು ಮೊತ್ತ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಪರಿಚಯಿಸಿತ್ತು. ಈ ಮಾದರಿಗೆ ದೇಶದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Honda Brio

ಇದಾದ ಬೆನ್ನಲ್ಲೇ ಮಿಡ್ ಸೈಜ್ ಸಿಟಿ ಹಾಗೂ ಮೊಬಿಲಿಯೊ ಎಂಪಿವಿ ಕಾರಿನಲ್ಲೂ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿತ್ತು. ಇವೆಲ್ಲವೂ ದೇಶದಲ್ಲಿ ಮಾರಾಟ ವೃದ್ಧಿಗೆ ನೆರವಾಗಿತ್ತು.

ವರದಿಗಳ ಪ್ರಕಾರ ನೆಕ್ಸ್ಟ್ ಜನರೇಷನ್ ಹೋಂಡಾ ಬ್ರಿಯೊ ಕಾರಿನಲ್ಲಿ 1.2 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಇದೀಗ ಲಭಿಸಿರುವ ಮಾಹಿತಿಗಳ ಪ್ರಕಾರ ಈ 1.2 ಲೀಟರ್ ಎಂಜಿನ್, ಜನಪ್ರಿಯ ಅಮೇಜ್, ಸಿಟಿ ಹಾಗೂ ಮೊಬಿಲಿಯೊದಲ್ಲಿರುವ 1.5 ಲೀಟರ್ ಡೀಸೆಲ್ ಮೋಟಾರು ಎಂಜಿನ್‌ನ ಚಿಕ್ಕ ವರ್ಷನ್ ಆಗಿರಲಿದೆ.

ಅಂದ ಹಾಗೆ ಹೊ ಬ್ರಿಯೊ 2017ರ ವೇಳೆಯಷ್ಟೇ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಇದು 1.2 ಡೀಸೆಲ್ ಜೊತೆಗೆ ಇದಕ್ಕೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹ ಪಡೆದುಕೊಳ್ಳಲಿದೆ.

ಹೊಸ ಕ್ರಾಸೋವರ್...
2016ನೇ ಇಸವಿಯಲ್ಲಿ ಹೊಸ ಕ್ರಾಸೋವರ್ ಬಿಡುಗಡೆ ಮಾಡುವ ಯೋಜನೆಯನ್ನು ಹೋಂಡಾ ಹೊಂದಿದೆ. ಇದರಲ್ಲಿ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ (i-VTEC) ಮತ್ತು ಐ-ಡಿಟೆಕ್ ( i-DTEC) ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಇದು ಮಾರುತಿ ಎಕ್ಸ್‌ಎ ಆಲ್ಫಾ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಸವಾಲನ್ನು ಎದುರಿಸಲಿದೆ.

ಜಾಝ್ ರೆಡಿ...
ಈ ನಡುವೆ 2015ನೇ ಸಾಲಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲು ಹೋಂಡಾ ಜಾಝ್ ಸಜ್ಜಾಗಿ ನಿಂತಿದೆ. ಭಾರತದಲ್ಲಿ ಪೆಟ್ರೋಲ್ ಜೊತೆಗೆ ಡೀಸೆಲ್ ಮಾದರಿಗಳಲ್ಲಿ ಜಾಝ್ ಆಗಮನವಾಗಲಿದೆ. ಇದು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂಬುದನ್ನು ನಿರೀಕ್ಷಿಸಲಾಗಿದೆ.

ಇದು 87 ಅಶ್ವಶಕ್ತಿ (110 ಎನ್‌ಎಂ ಟಾರ್ಕ್) ಉತ್ಪಾದಿಸುವ 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 100 ಅಶ್ವಶಕ್ತಿ ಉತ್ಪಾದಿಸುವ (200ಎನ್‌ಎಂ ಟಾರ್ಕ್) 1.5 ಲೀಟರ್ ಐ-ಡಿಟೆಕ್ ಎಂಜಿನ್ ಪಡೆದುಕೊಳ್ಳಲಿದೆ.

More from DriveSpark

Article Published On: Saturday, October 18, 2014, 11:28 [IST]
English summary
Honda is currently developing a 1.2-litre three-cylinder diesel engine, which is set to debut in the next-gen Brio is expected to reach the market in 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+