ಕಳಪೆ ಗುಣಮಟ್ಟ; ಭಾರತದಲ್ಲಿ ದಟ್ಸನ್ ಗೊ ಮಾರಾಟ ನಿಲುಗಡೆ?

By Nagaraja

ವರ್ಷಾರಂಭದಲ್ಲಷ್ಟೇ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಆದರೆ ಸುರಕ್ಷತಾ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಗೊ ಹ್ಯಾಚ್‌ಬ್ಯಾಕ್ ಕಾರಿನ ಮಾರಾಟವನ್ನು ನಿಲುಗಡೆಗೊಳಿಸುವಂತೆ ನಿಸ್ಸಾನ್ ಸಂಸ್ಥೆಗೆ ಸೂಚಿಸಲಾಗಿದೆ.

ಭಾರತಕ್ಕೆ ಬಜೆಟ್ ಕಾರನ್ನು ಪರಿಚಯಿಸುವ ಸಲುವಾಗಿ 2014 ಆಟೋ ಎಕ್ಸ್ ಪೋದಲ್ಲಿ ದಟ್ಸನ್ ಬ್ರಾಂಡ್ ಅನ್ನು ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್ ಪರಿಚಯಿಸಿತ್ತು. ಆದರೆ ಕನಿಷ್ಠ ಸುರಕ್ಷಾ ಮಾನದಂಡವನ್ನು ಕಾಪಾಡುವಲ್ಲಿ ಗೊ ಹ್ಯಾಚ್‌ಬ್ಯಾಕ್ ಕಾರು ವಿಫಲವಾಗಿದೆ ಎಂಬುದು ತಿಳಿದು ಬಂದಿದೆ.

Datsun GO

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಗ್ಲೋಬಲ್ ನ್ಯೂ ಕಾರು ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ), ಭಾರತ ಮಾರುಕಟ್ಟೆಯಿಂದ ದಟ್ಸನ್ ಗೊ ಮಾರಾಟವನ್ನು ನಿಲುಗಡೆಗೊಳಿಸುವಂತೆ ಸೂಚಿಸಿದೆ.

ನಿಸ್ಸಾನ್ ಸಿಇಒ ಕಾರ್ಲಸ್ ಘೋಸ್ನ್ ಅವರಿಗೆ ವೈಯಕ್ತಿಕ ಪತ್ರ ಬರೆದಿರುವ ಎನ್‌ಸಿಎಪಿ ಮುಖ್ಯಸ್ಥ ಮ್ಯಾಕ್ಸ್ ಮೋಸ್ಲೆ, ಅಪಘಾತ ಪರೀಕ್ಷೆಯಲ್ಲಿ ಮೂಲಭೂತ ಸೇಫ್ಟಿ ಮಾನದಂಡಗಳನ್ನು ತೇರ್ಗಡೆ ಹೊಂದುವಲ್ಲಿ ಗೊ ಹ್ಯಾಚ್‌ಬ್ಯಾಕ್ ಕಾರು ವಿಫಲವಾಗಿದೆ. ಇದರಿಂದಾಗಿ ತಕ್ಷಣದಿಂದಲೇ ಮಾರಾಟ ನಿಲುಗಡೆಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ದಟ್ಸನ್ ಗೊ ಕಾರಿನಲ್ಲಿ ರಚನಾತ್ಮಕ ಬಲವೇ ಇಲ್ಲದಂತಾಗಿದೆ. ಪ್ರಸ್ತುತ ಕಾರು ಯಾವುದೇ ಅಪಘಾತದಲ್ಲಿ ಘಟಿಸಿದಲ್ಲಿ ಪ್ರಯಾಣಿಕರು ಬದುಕುಳಿಯುವ ಸಂಭವ ತೀರ ಕಡಿಮೆಯಾಗಿದೆ. ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಹೆಚ್ಚುವರಿ ಏರ್‌ಬ್ಯಾಗ್ ಸಹ ಸಹಕಾರಿಯಾಗುವುದಿಲ್ಲ ಎಂದಿದ್ದಾರೆ.

More from DriveSpark

Article Published On: Monday, November 10, 2014, 11:08 [IST]
English summary
The Global New Car Assessment Program (NCAP) has now asked Nissan to withdraw the Datsun GO from the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+