ಅತ್ಯುತ್ತಮ ಜಾಗತಿಕ ಬ್ರಾಂಡ್‌ಗಳ ಸಾಲಿನಲ್ಲಿ ನಿಸ್ಸಾನ್
2014ನೇ ಸಾಲಿನ ಅತ್ಯುತ್ತಮ ಬೆಲೆಬಾಳುವ ಬ್ರಾಂಡ್‌ಗಳ ಪಟ್ಟಿಯಲ್ಲಿ ಜಪಾನ್ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್ ಗುರುತಿಸಿಕೊಂಡಿದೆ.
ವಿಶ್ವದ ಮುಂಚೂಣಿಯ ಸಲಹಾ ಬ್ರಾಂಡ್ ಆಗಿರುವ ಇಂಟರ್ ಬ್ರಾಂಡ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಿಸ್ಸಾನ್ ಗುರುತಿಸಿಕೊಂಡಿದೆ.

ಇಂಟರ್ ಬ್ರಾಂಡ್ ಅಧ್ಯಯನದ ಪ್ರಕಾರ ಜಗತ್ತಿನ ಅತ್ಯಂತ ಶ್ರೇಷ್ಠ ಬ್ರಾಂಡ್‌ಗಳಲ್ಲಿ ನಿಸ್ಸಾನ್ 56ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಅಂದರೆ 2013ನೇ ಸಾಲಿನಲ್ಲಿದ್ದು 65 ಆಗಿತ್ತು.
ಅಷ್ಟೇ ಅಲ್ಲದೆ ನಿಸ್ಸಾನ್ ಮೌಲ್ಯ ಸಹ ಕಳೆದ ವರ್ಷದ 38,037 ಕೋಟಿ ರು.ಗಳಿಂದ 46,767 ಕೋಟಿ ರು.ಗಳಿಗೆ ವರ್ಧನೆಯಾಗಿದೆ ಎಂಬುದನ್ನು ಸಹ ಸಂಸ್ಥೆ ಸ್ಪಷ್ಟಪಡಿಸಿದೆ.
ಅಲ್ಲದೆ ಇಂಟರ್ ಬ್ರಾಂಡ್ ಬಿಡುಗಡೆ ಮಾಡಿರುವ 2014 ವಿಶ್ವದ ಹಸಿರುವ ಬ್ರಾಂಡ್‌ಗಳ ಪಟ್ಟಿಯಲ್ಲೂ ನಿಸ್ಸಾನ್ ಗುರುತಿಸಿಕೊಂಡಿರುವುದು ವಿಶೇಷ.


Click it and Unblock the Notifications