ನಿಸ್ಸಾನ್ ಹೊಸ ಹ್ಯಾಚ್‌ಬ್ಯಾಕ್ ಕಾರು 'ಪಲ್ಸರ್'
ನಿಮಗಿದು ಅಚ್ಚರಿಯನ್ನುಂಟು ಮಾಡಬಹುದು. ಆದರೆ ಇದು ನಿಜ. ನಿಸ್ಸಾನ್‌ನಿಂದ ಪರಿಚಯವಾಗಲಿರುವ ನೂತನ ಹ್ಯಾಚ್‌ಬ್ಯಾಕ್ ಕಾರಿನ ಹೆಸರು 'ಪಲ್ಸರ್' ಎಂಬುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಪಾನ್‌ನ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ಟೀಸರ್ ಚಿತ್ರವನ್ನು ಸಹ ಬಿಡುಗಡೆ ಮಾಡಿದೆ.
ನಿಸ್ಸಾನ್‌ನ ನೂತನ ಹ್ಯಾಚ್‌ಬ್ಯಾಕ್ ಕಾರು 'ಎಸ್' ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಳ್ಳಲಿದೆ. ಇದು ಪ್ರಮುಖವಾಗಿಯೂ ಫೋರ್ಡ್, ರೆನೊ ಹಾಗೂ ಫೋಕ್ಸ್‌ವ್ಯಾಗನ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಪ್ರಸ್ತುತ ಕಾರು ಆರಂಭದಲ್ಲಿ ಯುರೋಪ್‌ನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ಫೋಕಸ್, ಮೇಗನ್ ಹಾಗೂ ಗಾಲ್ಫ್ ಯುರೋಪ್‌ನಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಕಾರುಗಳಾಗಿವೆ.
ವರದಿಗಳ ಪ್ರಕಾರ ಮೇ 20ರಂದು ಪಲ್ಸರ್ ಬಿಡುಗಡೆಯಾಗಲಿದೆ.ಆರಂಭದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಲಭ್ಯವಾಗಲಿರುವ ಪಲ್ಸರ್, ಬಳಿಕ ಇತರ ದೇಶಗಳನ್ನು ಪ್ರವೇಶಿಸಲಿದೆ.
ಇಲ್ಲಿ ಕಂಡುಬಂದಿರುವ ಕುತೂಹಲ ಸಂಗತಿಯೆಂದರೆ ಒಂದು ವೇಳೆ ಭಾರತದಲ್ಲಿ ಲಾಂಚ್ ನಿಗದಿಯಾದ್ದಲ್ಲಿ, ನಿಸ್ಸಾನ್ ಸಮಸ್ಯೆ ಎದುರಿಸಲಿದೆ. ಯಾಕೆಂದರೆ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಆಗಿರುವ ಪಲ್ಸರ್, ಬಜಾಜ್ ಆಟೋದ ಜನಪ್ರಿಯ ದ್ವಿಚಕ್ರ ಬ್ರಾಂಡ್ ಆಗಿದೆ. ಅಷ್ಟೇ ಅಲ್ಲದೆ ಪಲ್ಸರ್ ಸಾನಿಧ್ಯ ವಿದೇಶದಲ್ಲಿರುವುದು ಸಹ ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆ.


Click it and Unblock the Notifications