ಟೋಲ್ ಅವ್ಯವಹಾರಕ್ಕೆ ಕಡಿವಾಣ; ಬಂದಿದೆ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್
ಟೋಲ್ ಬೂತ್‌ಗಳಲ್ಲಿನ ಅವ್ಯವಹಾರದಿಂದಾಗಿ ತೊಂದರೆಕ್ಕೊಳಗಾದವರು ಇನ್ನು ಸ್ವಲ್ಪ ನಿಟ್ಟುಸಿರು ಬಿಡಬಹುದಾಗಿದೆ. ಏಕೆಂದರೆ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್‌ಗೆ ನಾಳೆ (ಶನಿವಾರ), ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರು ಹಸಿರು ನಿಶಾನೆ ನೀಡಲಿದ್ದಾರೆ.
ಹೌದು, ಕೇಂದ್ರ ಸರಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಉದ್ದಾಗಿರುವ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವ್ಯವಸ್ಥೆಯನ್ನು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿ ಉದ್ಘಾಟಿಸಲಿದೆ. ಇದರೊಂದಿಗೆ ಟೋಲ್ ಬೂತ್‌ಗಳಲ್ಲಿ ದುಬಾರಿ ಶುಲ್ಕ ವಿಧಿಸುವುದು ಹಾಗೂ ಸಂಗ್ರಹಗಾರರು ಸರಿಯಾದ ಲೆಕ್ಕ ನೀಡದಿರುವುದು ಮುಂತಾದ ಅವ್ಯವಹಾರಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

ಈಗಗಾಲೇ 55ರಷ್ಟು ಟೋಲ್ ಪ್ಲಾಜಾದಲ್ಲಿ ಇಟಿಸಿ ಯಂತ್ರವನ್ನು ಆಳವಡಿಸಲಾಗಿದೆ. ಅಲ್ಲದೆ ಮುಂಬೈ ಹಾಗೂ ಅಹಮಾದಾಬಾದ್‌ನಲ್ಲಿ ಯಶಸ್ವಿ ಪರೀಕ್ಷೆಯನ್ನು ನಡೆಸಲಾಗಿದೆ. ಇದೀಗ ಸಚಿವರು ದೆಹಲಿ ಹಾಗೂ ಮುಂಬೈ ಹೆದ್ದಾರಿಯಲ್ಲಿ ಇದನ್ನು ಉದ್ಘಾಟಿಸಲಿದ್ದಾರೆ.
ಟೋಲ್ ಸಂಗ್ರಹದಲ್ಲಿ ಪಾರದರ್ಶಕ ತರುವುದೇ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಹೆದ್ದಾರಿ ಟೋಲ್ ಬೂತ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಠಿವಾಣ ಬೀಳಲಿದೆ.


Click it and Unblock the Notifications