ಇನ್ನು ಚಾಲನೆ ವೇಳೆ ಮೆಸೇಜ್ ಮಾಡಲು ಸಾಧ್ಯವಿಲ್ಲ

By Nagaraja

ಚಾಲನೆ ವೇಳೆ ಮೊಬೈಲ್ ಬಳಕೆಯಿಂದ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇವೆ. ಆದರೆ ಇನ್ನು ಮುಂದೆ ಇಂತಹ ತೊಂದರೆಗಳು ಕಾಡದು. ಯಾಕೆಂದರೆ ಅಮೆರಿಕದ ಬಹು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಾಗಿರುವ ಆಪಲ್, ತನ್ನ ಡಿವೈಸ್‌ಗಳಲ್ಲಿ ನೂತನ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದ್ದು, ಇದರಂತೆ ಚಾಲನೆ ವೇಳೆ ಮೆಸೇಜ್ ಮಾಡುವುದು ಅಸಾಧ್ಯದ ಮಾತಾಗಿರಲಿದೆ.

'ಲಾಕೌಟ್ ಮೆಕಾನಿಸಂ' ಎಂಬ ವ್ಯವಸ್ಥೆ ಅಭಿವೃದ್ಧಪಡಿಸಿರುವ ಆಪಲ್, ಪ್ರಮುಖವಾಗಿಯೂ ಚಾಲಕರು ಚಾಲನೆ ಮಾಡುವಾಗ ಮೆಸೇಜ್ ಮಾಡುವಂತಹ ಫೀಚರುಗಳನ್ನು ತಡೆ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ.


ಪೇಂಟೆಂಟ್ ಕಚೇರಿಗೆ ಸಲ್ಲಿಸಲಾಗಿರುವ ಮಾಹಿತಿಯಲ್ಲಿ ಆಪಲ್ ಇದನ್ನು ಉಲ್ಲೇಖಿಸಿದ್ದು, ಮೊಬೈಲ್ ಫೋನ್‌ಗಳಿಗೆ ನೂತನ ಸೆನ್ಸಾರ್ ಅವಿಷ್ಕರಿಸುವುದಾಗಿ ತಿಳಿಸಿದೆ. ಇಂತಹ ಸೆನ್ಸಾರ್‌ಗಳು, ವ್ಯಕ್ತಿ ಎಷ್ಟು ವೇಗದಲ್ಲಿ ಸಂಚರಿಸುತ್ತಿದ್ದಾರೆ ಎಂಬುದನ್ನು ನಿಗಾವಹಿಸಲಿದೆ. ಹಾಗೆಯೇ ವ್ಯಕ್ತಿ ಚಾಲಕ ಸೀಟಿನಲ್ಲಿ ಅಥವಾ ಪ್ರಯಾಣಿಕ ಸೀಟಿನಲ್ಲಿ ಕುಳಿತಿದ್ದಾರೆಯೇ ಎಂಬುದನ್ನು ಸಹ ನಿರ್ಣಯಿಸಲಿದೆ.

ಇದೇ ಸಂದರ್ಭದಲ್ಲಿ ಚಲಿಸುವ ಕಾರಿನಲ್ಲಿ ಚಾಲಕ ಮೊಬೈಲ್ ಬಳಕೆ ಮಾಡುವುದನ್ನು ತಡೆ ಹಿಡಿಯಲಿದೆ ಎಂಬುದಾಗಿ ತಿಳಿಸಿದೆ. ಅಂದ ಹಾಗೆ 2008ರಲ್ಲೇ ಆಪಲ್ ಇಂತಹದೊಂದು ವ್ಯವಸ್ಥೆ ಹೊರತಂದಿದ್ದರೂ ಇತ್ತೀಚೆಗಷ್ಟೇ ಗ್ರೀನ್ ಸಿಗ್ನಲ್ ದೊರಕಿತ್ತು. ಅಧಿಕಾರಿಗಳ ಪ್ರಕಾರ ಇದನ್ನು ಪತ್ತೆ ಹಚ್ಚುವುದು ಕಷ್ಟಕರ ಎಂಬುದಾಗಿ ತಿಳಿಸಿತ್ತು.

 Apple

More from DriveSpark

Article Published On: Wednesday, April 30, 2014, 12:14 [IST]
English summary
Innovators of new tech, American multinational company Apple has applied for a patent of its new system. The new system will prevent drivers from sending text messages while behind the wheel of a car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+