ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ತಂತ್ರಜ್ಞಾನ ಎಂಬುವುದು ಇದೀಗ ಎಲ್ಲಾ ಕ್ಷೇತ್ರಗಳನ್ನು ಬೆಳವಣಿಗೆಯನ್ನು ಕಾಣುತ್ತಿದ್ದು, ಆಟೋಮೊಬೈಲ್ ಜಗತ್ತಿನಲ್ಲಿಯು ಸಹ ಇದೀಗ ಭಾರೀ ಬೆಳವಣಿಗೆಯು ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಪಂಚದಲ್ಲಿನ ಎಲ್ಲಾ ಪ್ರಮುಖ ವಾಹನ ತಯಾರಕರು ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ತಯಾರು ಮಾಡುವ ಕಾರ್ಯದಲ್ಲಿದ್ದು, ಈ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿದೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ವಿಶ್ವ ಆಟೋ ಮೊಬೈಲ್ ಉದ್ಯಮದಲ್ಲಿ ಸೆಲ್ಪ್ ಡ್ರೈವಿಂಗ್ ಕಾರುಗಳ ಉತ್ಪಾದನೆ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆಯಾದ ಆ್ಯಪಲ್ ಕೂಡಾ ವಿನೂತನ ರೀತಿಯ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾಗಿದೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಈ ಸೆಲ್ಫ್ ಡ್ರೈವಿಂಗ್ ಕಾರಿನ ಬಳಕೆಯಿಂದಾಗಿ ರಸ್ತೆಯಲ್ಲಿ ಅಪಘತಾಗಳು ಸಂಭವಿಸಬಹುದು ಎಂದು ಕೆಲವರು ವಾದ ಮಾಡುತ್ತಿದ್ದು, ಇನ್ನು ಕೆಲವರು ಈ ವಾಹನಗಳಿಂದ ಟ್ರಾಫಿಕ್ ಸಮಸ್ಯೆಗಳು ಇರುವುದಿಲ್ಲವೆಂದು ತಲುಪಬೇಕಾದ ಸ್ಥಳವನ್ನು ಬೇಗ ತಲುಪಬಹುದು ಎಂದು ಇನ್ನಿತತರು ಹೆಳುತ್ತಿದ್ದಾರೆ. ಹಾಗಾದರೆ ಇಂದಿನ ಈ ಲೇಖನದಲ್ಲಿ ಸೆಲ್ಫ್ ಡ್ರೈವಿಂಗ್ ಕಾರಿನಿಂದಾಗುವ ಅನುಕೂಲಗಳು ಮತ್ತು ಅನಾಕೂಲತೆಗಳ ಬಗ್ಗೆ ಮಾಹಿತಿ ನಿಮಗೆ ನೀಡಲಿದ್ದೇವೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಸುರಕ್ಷತೆ

ವಾಹನ ಚಾಲನೆ ಮಾಡುವ ವೇಳೆ ನಿಯಂತ್ರಣ ತಪ್ಪುವುದರಿಂದ ಆಗುತ್ತಿರುವ ರಸ್ತೆ ಅಪಘತಾಗಳ ಬಗ್ಗೆ ನಾವೀಗಾಗಲೆ ಸಾಕಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ಇದೀಗ ಬರುವ ಸೆಲ್ಫ್ ಡ್ರೈವಿಂಗ್ ಕಾರುಗಳಿಂದ ಇಂತಹ ಅಪಘಾತಗಳು ಸ್ವಲ್ಪವಾದರೂ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಹಾಗೆಯೆ ಮದ್ಯ ಸೇವೆಸಿ ವಾಹನ ಚಲಾಯಿಸುವವರು ಮತ್ತು ಡ್ರೈವಿಂಗ್ ಮಾಡುವಾಗ ಫೋನ್ ಬಳಕೆ ಮಾಡುವವರ ಸಂಖ್ಯೆ ಕೂಡಾ ಹೆಚ್ಚುತ್ತಿದ್ದು, ಸೆಲ್ಫ್ ಡ್ರೈವಿಂಗ್ ವಾಹನಗಳು ಬಂದಾಗ ಇವುಗಳಿಗೆ ಮುಕ್ತಿ ಹೇಳಬಹುದು. ಆದರೆ ಇಂತಹ ವಾಹನಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದಾದ ಅವಕಾಶಗಳು ಕೂಡಾ ಗೋಚರಿಸುತ್ತಿದೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಕಡಿಮೆ ಟ್ರಾಫಿಕ್

ದೇಶದಲ್ಲಿನ ಪ್ರಮುಖ ನಗರಗಳಲ್ಲಿರುವ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮನೆಯಿಂದ ಹೊರ ಬಂದ್ರೆ ತಲುಪಬೇಕಾದ ಜಾಗವನ್ನು ತಲುಪಲು ಟ್ರಾಫಿಕ್‍ನಲ್ಲಿ ಹರ ಸಾಹಸ ಮಾಡಬೇಕು. ಅದರಲ್ಲಿಯು ಅವಸರದ ಕೆಲಸದ ಮೇಲೆ ತೆರಳುವ ಸಮಯದಲ್ಲಿ ಟ್ರಾಫಿಕ್ ಜಾಮ್ ಆದ್ರೆ ಕತೆ ಮುಗಿತು.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಇಂತಹ ಟ್ರಾಫಿಕ್ ಸಮಸ್ಯೆಗಳಿಗೆ ಬಹುಮುಖ್ಯ ಕಾರಣವೆಂದರೆ ಅದು ಚಾಲಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದು. ಇದೀಗ ಬರುವ ಸೆಲ್ಫ್ ಡ್ರೈವಿಂಗ್ ಕಾರುಗಳಿಂದ ಈ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಬಹುದಂತೆ. ಆದರೆ ಇದನ್ನು ಕೆಲವರು ತಿರಸ್ಕರಿಸುತ್ತಿದ್ದಾರೆ. ನಿಜ ಜೀವನದಲ್ಲಿ ಈ ಟೆಕ್ನಾಲಜಿಯು ಟ್ರಾಫಿಕ್ ಸಮಸ್ಯೆಗಳನ್ನು ಹೋಗಲಾಡಿಸದೆಂದು ವಾದಿಸುತ್ತಿದ್ದಾರೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಉತ್ಪನ್ನದ ಬೆಳವಣಿಗೆ

ಉತ್ಪನ್ನದ ಬೆಳವಣಿಗೆ ಇಂದ ಲೇಬರ್ ಕಾಸ್ಟ್ ಕಡಿಮೆಯಾಗಿ ಉತ್ಪತ್ತಿಯು ಮತ್ತಷ್ಟು ಹೆಚ್ಚಿಗೆಯಾಗಬಹುದೆಂದು ಕೆಲವರು ಹೆಳುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರಿಗೂ ಒಂದು ಸ್ವಂತ ವಾಹನ ಸಿಗಬಹುದು ಎಂದು ಹೇಳಿತಿದ್ದಾರೆ. ಆದರೆ ಕೆಲವರು ಮಾತ್ರ ಈ ಟೆಕ್ನಾಲಜಿಯಿಂದಾಗಿ ಉದ್ಯೋಗವಕಾಶಗಳು ಕಡಿಮೆಯಾಗಿ ನಿರುದ್ಯೋಗ ಹೆಚ್ಚುತ್ತದೆ ಎನ್ನಲಾಗುತ್ತಿದೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಕಡಿಮೆ ವೆಚ್ಚ

ಸೆಲ್ಫ್ ಡ್ರೈವಿಂಗ್ ಕಾರುಗಳಾದ ಕಾರಣ ಅವುಗಳಿಗೆ ಪ್ರತ್ಯೇಕವಾದ ಡ್ರೈವರ್ ಬೇಕಾಗಿಲ್ಲವಾಗಿದ್ದು, ಡ್ರೈವರ್‍‍ಗೆ ನೀಡಬೇಕಾದ ಹಣ ಕೂಡ ಮಾಲೀಕರಿಲ್ಲಿಯೆ ಉಳಿಯುತ್ತದೆ. ವಿಮೆ ಪಾಲಸಿ ಅಂತಹ ಔಪಚಾರಿಕತೆಗಳು ಕೂಡಾ ಇರುವುದಿಲ್ಲ. ಆದರೆ ಇ ಅಂಶದ ಮೇಲೆ ಕೂಡಾ ಒಪ್ಪುತ್ತಿಲ್ಲ. ಇದರಿಂದ ಭವಿಷ್ಯದಲ್ಲಿ ಪ್ರಮಾದಗಳು ಕಡಿಮೆಯಾಗುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಪಾರ್ಕಿಂಗ್ ಜಾಗ

ಮನೆಯಿಂದ ಕಾರು ಹೊರ ತೆಗೆಯಬೇಕೆಂದರೆ ಕೆಲವರಿಗೆ ತಲೆನೋವಾಗಿದೆ. ಏಕೆಂದರೆ ತಲುಪುವ ಸ್ಥಳದಲ್ಲಿ ಪಾರ್ಕಿಂಗ್ ಸೌಲಭ್ಯಗಳು ಇರುತ್ತವೆಯೊ ಇಲ್ಲವೋ ಎಂದು. ರಸ್ತೆಯ ಮೇಲೆ ಪಾರ್ಕಿಂಗ್ ಮಾಡಿದರೆ ಯಾವ ಸಮಯದಲ್ಲಿ ಪೊಲೀಸರು ಬಂದು ಕೊಂಡೊಯ್ಯುತ್ತಾರೊ ಗೊತ್ತಿಲ್ಲ. ಅದರೆ ಸೆಲ್ಫ್ ಡ್ರೈವಿಂಗ್ ಕಾರುಗಳು ಇಂತಹ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.

ಸೆಲ್ಫ್ ಡ್ರೈವಿಂಗ್ ಕಾರುಗಳಿಂದಾಗುವ ಲಾಭ ಮತ್ತು ನಷ್ಟಗಳೇನು.?

ಹಾಗಾದರೆ ಸೆಲ್ಫ್ ಡ್ರೈವಿಂಗ್ ಕಾರುಗಳ ಅನುಕೂಲ ಮತ್ತು ಅನಾನುಕೂಲತೆಗಳ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ಕೆಳಗಿರುವ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

Source: Androidpit

Most Read Articles

Kannada
English summary
The 5 strongest arguments for a self-driving cars in future. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more