ವೋಲ್ವೋ ಬಸ್ ದರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸಮೀಕ್ಷೆಯಲ್ಲಿ ಭಾಗವಹಿಸಿ

By Nagaraja

ಬೆಂಗಳೂರಿನವರ ನಿತ್ಯ ಜೀವನದ ಭಾಗವಾಗಿರುವ ಬಿಎಂಟಿಸಿ ಇದೀಗ ತನ್ನ ಹವಾ ನಿಯಂತ್ರಿತ ವೋಲ್ವೋ ಬಸ್ ಸೇವೆಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲು ನೂತನ ಸಮೀಕ್ಷೆಯೊಂದನ್ನು ಹಮ್ಮಿಕೊಂಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೈಬಿಎಂಟಿಸಿ ಡಾಟ್ ಕಾಮ್‌ನಲ್ಲಿ ಇದನ್ನು ನಮೂದಿಸಲಾಗಿದೆ. ಇದರಂತೆ ಆದಷ್ಟು ಬಳಕೆದಾರರು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಳ್ಳಲಾಗುತ್ತಿದೆ. ಇಲ್ಲಿ ಬಳಕೆದಾರರು ಅನುಕೂಲವಾಗಿದೆ, ಉತ್ತಮವಾಗಿದೆ, ಪರವಾಗಿಲ್ಲ, ತೃಪ್ತಿದಾಯಕವಾಗಿಲ್ಲ ಮತ್ತು ಪ್ರತಿಕ್ರಿಯೆ ನೀಡುವುದಿಲ್ಲವೆಂಬ ಐದು ಉತ್ತರಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

BMTC

ಸಮೀಕ್ಷೆಯಲ್ಲಿ ಕೆಳಲಾಗಿರುವ ಪ್ರಶ್ನೆಗಳು:
1. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹವಾ ನಿಯಂತ್ರಿತ ವೋಲ್ವೋ ಬಸ್ ಸೇವೆಗಳಲ್ಲಿ ಪ್ರಯಾಣಿಸುವಾಗ ನಿಮಗೆಷ್ಟರ ಮಟ್ಟಿಗೆ ಅನುಕೂಲಕರವಾಗಿದೆ?
2. ಹವಾನಿಯಂತ್ರಿತ ವೋಲ್ವೋ ಬಸ್ ಸೇವೆಗಳಲ್ಲಿ ಪ್ರಯಾಣಿಸುವಾಗ ಆರಾಮದಾಯಕ ಮತ್ತು ಸುರಕ್ಷತೆಯ ಬಗ್ಗೆ ನಿಮ್ಮ ಅನುಭವ?
3. ವೋಲ್ವೋ ಬಸ್‌ಗಳ ನಿರ್ವಹಣೆ ಮತ್ತು ಸ್ವಚ್ಛತೆ ಬಗ್ಗೆ ನೀವು ನೀಡುವ ಗುಣಮಟ್ಟ?
4. ವೋಲ್ವೋ ಬಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರ ಕಾರ್ಯ ನಿರ್ವಹಣೆ ಬಗ್ಗೆ ನೀವೆಷ್ಟು ತೃಪ್ತರು?
5. ವೋಲ್ವೋ ಬಸ್ ದರದ ಬಗ್ಗೆ ನಿಮ್ಮ ಅಭಿಪ್ರಾಯ?
6. ಸಂಸ್ಥೆಯ ವೋಲ್ವೋ ಅನುಸೂಚಿಗಳ ಆಚರಣೆಯ ಸಮಯಾಂತರದ ಬಗ್ಗೆ ನೀವೆಷ್ಟು ತೃಪ್ತರು?

ಇನ್ಯಾಕೆ ತಡ ಬಿಎಂಟಿಸಿ ಸಮೀಕ್ಷೆಯಲ್ಲಿ ಭಾಗವಹಿಸಲು ಇಲ್ಲಿಗೆ ಭೇಟಿ ಕೊಡಿರಿ

ಇದನ್ನೇ ಆಂಗ್ಲ ಭಾಷೆಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿರಿ

More from DriveSpark

Article Published On: Tuesday, March 4, 2014, 15:49 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+