ಮಗದೊಂದು ಕ್ವಾಡ್ರಾಸೈಕಲ್ - ಪಿಯಾಜಿಯೊ ಎನ್‌ಟಿ3 ಕಾನ್ಸೆಪ್ಟ್
ಭಾರತದಲ್ಲಿ ಕ್ವಾಡ್ರಾಸೈಕಲ್ ವಿಭಾಗಕ್ಕೆ ಹಸಿರು ನಿಶಾನೆ ಸಿಗುತ್ತಿರುವಂತೆಯೇ ಅನೇಕ ವಾಹನ ತಯಾರಕ ಸಂಸ್ಥೆಗಳು ತನ್ನ ನೂತನ ಕಾನ್ಸೆಪ್ಟ್ ವಾಹನಗಳೊಂದಿಗೆ ಮುಂದೆ ಬಂದಿವೆ. ಈ ಪೈಕಿ ಇಟಲಿಯ ದೈತ್ಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಪಿಯಾಜಿಯೊ ಎನ್‌ಟಿ3 ಕಾನ್ಸೆಪ್ಟ್ ವಾಹನವೊಂದನ್ನು ಪ್ರದರ್ಶಿಸಿದೆ. ಇದು ದೆಹಲಿ ಆಟೋ ಎಕ್ಸ್ ಪೋದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.
2014 ಆಟೋ ಎಕ್ಸ್ ಪೋ
ದೇಶದ ಭವಿಷ್ಯದ ವಾಹಕ ಎಂದೇ ಪರಿಗಣಿಸಲ್ಪಟ್ಟಿರುವ ಕ್ವಾಡ್ರಾಸೈಕಲ್ ವಿಭಾಗವು ಪರಿಪೂರ್ಣ ಸಿಟಿ ವಾಹನ ಎನಿಸಿಕೊಳ್ಳಲಿದೆ. ಇದು ಪ್ರಮುಖವಾಗಿಯೂ ದಶಕಗಳಿಂದಲೂ ದೇಶದ ರಸ್ತೆಗಳಲ್ಲಿ ಸದ್ದು ಮಾಡುತ್ತಿರುವ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆ ಎನ್ನಲಾಗುತ್ತಿದೆ.

ಪಿಯಾಜಿಯೊ ಎನ್‌ಟಿ3 ಹಗುರ ವಾಣಿಜ್ಯ ವಾಹನವು ಮೊದಲ ಬಾರಿಗೆ 2010ನೇ ಇಸವಿಯ ಮಿಲಾನ್ ಆಟೋ ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಹಾಗಿದ್ದರೂ ಈ ವರೆಗೆ ನಿರ್ಮಾಣ ಸಿದ್ಧ ವಾಹನ ಮಾರುಕಟ್ಟೆಗೆ ತಲುಪಿರಲಿಲ್ಲ.

ಇದೀಗ ಕ್ವಾಡ್ರಾಸೈಕಲ್ ವಿಭಾಗದಲ್ಲಿ ನೂತನ ಹಗುರಭಾರದ ವಾಹನ ನಿರ್ಮಿಸುವ ಉದ್ದೇಶದೊಂದಿಗೆ ನೂತನ ಎನ್‌ಟಿ3 ಕಾನ್ಸೆಪ್ಟನ್ನು ಪಿಯಾಜಿಯೊ ಪ್ರದರ್ಶಿಸಿದೆ.

ಹಾಗೊಂದು ವೇಳೆ ಮುಂದಿನ ದಿನಗಳಲ್ಲಿ ಭಾರತ ಮಾರುಕಟ್ಟೆಯಾದರೂ ಅಚ್ಚರಿಪಡಬೇಕಾಗಿಲ್ಲ.

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಪಿಯಾಜಿಯೊ ಎನ್‌ಟಿ3 ನಾಲ್ಕು ಚಕ್ರದ ವಾಹನವು ಮೂರು ಸೀಟುಗಳನ್ನು ಹೊಂದಿದೆ. ಇನ್ನು ರಿಕ್ಷಾದಲ್ಲಿರುವಂತೆಯೇ ಚಾಲಕರಿಗೆ ಮಧ್ಯಭಾಗದಲ್ಲಿ ಸಿಟ್ಟಿಂಗ್ ವ್ಯವಸ್ಥೆ ಕೊಡಲಾಗಿದೆ.

ಒಟ್ಟು ಮೂರು ಎಂಜಿನ್ ವೆರಿಯಂಟ್‌ಗಳಲ್ಲಿ ಎನ್‌ಟಿ3 ಅಭಿವೃದ್ಧಿಪಡಿಸಲಾಗುವುದು. ಈ ಪೈಕಿ 230 ಸಿಸಿ ಪೆಟ್ರೋಲ್ ಮೋಟಾರು, 350 ಸಿಸಿ ಪೆಟ್ರೋಲ್ ಮೋಟಾರು ಹಾಗೂ 350 ಸಿಸಿ ಹೈಬ್ರಿಡ್ ವರ್ಷನ್ ಇರಲಿದೆ.

ಈ ಪೈಕಿ ಹೈಬ್ರಿಡ್ ಹೊರತಾದ ವಾಹನವು ಲೀಟರ್‌ಗೆ 33 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಪ್ರತಿ ಕೀ.ಮೀ.ಗೆ 70 ಗ್ರಾಂಗಳಷ್ಟು ಕಾರ್ಬನ್ ಡೈ ಓಕ್ಸೈಡ್ ಮಾಲಿನ್ಯವನ್ನು ಹೊರಸೂಸಲಿದೆ.

ಸಂಸ್ಥೆಯ ಪ್ರಕಾರ ಎನ್‌ಟಿ3 ಗಂಟೆಗೆ 80 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಇಷ್ಟೆಲ್ಲ ಆದರೂ ನೂತನ ಎನ್‌ಟಿ3 ನಾಲ್ಕು ಚಕ್ರದ ವಾಹನ ಯಾವಾಗ ನಿರ್ಮಾಣ ವರ್ಷನ್ ಪಡೆದುಕೊಳ್ಳಲಿದೆ ಎಂಬುದಕ್ಕೆ ಪಿಯಾಜಿಯೊದಿಂದ ಸ್ಪಷ್ಟ ಮಾಹಿತಿ ಕಂಡುಬಂದಿಲ್ಲ.


Click it and Unblock the Notifications








